KN/680306 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಸ್ಯಾನ್ ಫ್ರಾನ್ಸಿಸ್ಕೋ

Revision as of 09:08, 20 August 2020 by Kritika (talk | contribs)
(diff) ← Older revision | Latest revision (diff) | Newer revision → (diff)
KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ಭಗವದ್ಗೀತೆಯಲ್ಲಿ ನೀವು ಕಾಣುವಿರಿ, ಸರ್ವಸ್ಯ ಚಾಹಂ ಹೃದಿ ಸನ್ನಿವಿಷ್ಟೋ ( ಭ. ಗೀತಾ ೧೫.೧೫)." ನಾನು ಎಲ್ಲರ ಹೃದಯದಲ್ಲಿ ವಾಸಿಸುತ್ತಿದ್ದೇನೆ "ಎಂದು ಕೃಷ್ಣ ಹೇಳುತ್ತಾನೇ. ಸರ್ವಸ್ಯ ಚಾಹಂ ಹೃದಿ ಸನ್ನಿವಿಷ್ಟೋ ಮತ್ತಹ್ ಸ್ಮ್ರತಿರ್ ಜ್ಞಾನಂ ಅಪೋಹನಂ ಚ : "ಮತ್ತು ನನ್ನ ಮೂಲಕ ಕೆಲವೊಬ್ಬರು ಮರೆತುಹೋಗುತ್ತಿದ್ದಾರೆ ಮತ್ತೊಬ್ಬರು ನೆನಪಿಸಿಕೊಳ್ಳುತ್ತಿದ್ದಾರೆ." ಹಾಗಾದರೆ ಕೃಷ್ಣ ಏಕೆ ಹಾಗೆ ಮಾಡುತ್ತಿದ್ದಾನೆ? ಅವನು ಯಾರನ್ನಾದರೂ ಮರೆಯಲು ಸಹಾಯ ಮಾಡುತ್ತಿದ್ದಾನೆ, ಮತ್ತು ಅವನು ಯಾರನ್ನಾದರೂ ನೆನಪಿಟ್ಟುಕೊಳ್ಳಲು ಸಹಾಯ ಮಾಡುತ್ತಿದ್ದಾನೆ. ಏಕೆ? ಅದೇ ಉತ್ತರ. ಏ ಯಥಾ ಮಾಂ ಪ್ರಪದ್ಯಂತೇ ನೀವು ಕೃಷ್ಣನನ್ನು ಅಥವಾ ದೇವರನ್ನು ಮರೆತುಬಿಡಲು ಬಯಸಿದರೆ, ನೀವು ಶಾಶ್ವತವಾಗಿ ಮರೆತುಹೋಗುವ ರೀತಿಯಲ್ಲಿ ಅವನು ನಿಮಗೆ ಬುದ್ಧಿವಂತಿಕೆಯನ್ನು ನೀಡುತ್ತಾನೆ. ದೇವರ ಸನ್ನಿಧಿಗೆ ಬರಲು ಯಾವುದೇ ಅವಕಾಶವಿರುವುದಿಲ್ಲ. ಆದರೆ ಅದು ಕೃಷ್ಣನ ಭಕ್ತರು. ಅವರು ತುಂಬಾ ಸಹಾನುಭೂತಿ ಉಳ್ಳವರು. ಕೃಷ್ಣ ತುಂಬಾ ಕಟ್ಟುನಿಟ್ಟು . ಯಾರಾದರೂ ಅವನನ್ನು ಮರೆಯಲು ಬಯಸಿದರೆ, ಅವನು ಎಂದಿಗೂ ಕೃಷ್ಣ ಏನೆಂಬುದನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗದಷ್ಟು ಅವಕಾಶಗಳನ್ನು ನೀಡುತ್ತಾನೆ.ಆದರೆ ಕೃಷ್ಣನ ಭಕ್ತನು ಕೃಷ್ಣನಿಗಿಂತ ಹೆಚ್ಚು ಸಹಾನುಭೂತಿ ಹೊಂದಿದ್ದಾನೆ.ಆದ್ದರಿಂದ ಅವರು ಕೃಷ್ಣ ಪ್ರಜ್ಞೆ ಅಥವಾ ದೇವರ ಪ್ರಜ್ಞೆಯನ್ನು ಬಡ ಜನರಿಗೆ ಉಪದೇಶಿಸುತ್ತಾರೆ. "
680306 - ಉಪನ್ಯಾಸ ಶ್ರೀ.ಭಾ. ೦೭.೦೬.೦೧ - ಸ್ಯಾನ್ ಫ್ರಾನ್ಸಿಸ್ಕೋ