KN/681014 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಸಿಯಾಟಲ್

Revision as of 00:07, 29 October 2020 by Vanibot (talk | contribs) (Vanibot #0025: NectarDropsConnector - add new navigation bars (prev/next))
(diff) ← Older revision | Latest revision (diff) | Newer revision → (diff)
KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
ಪ್ರಭುಪಾದ: ಅದು ಏನು?

ವಿಷ್ಣುಜನ: ಐಸ್ ಕ್ರೀಮ್ ಟ್ರಕ್.

ಪ್ರಭುಪಾದ: ಓಹ್, ಐಸ್ ಕ್ರೀಮ್. (ನಗು) ನೀವು ಐಸ್ ಕ್ರೀಮ್ ತೆಗೆದುಕೊಳ್ಳುತ್ತಿದ್ದೀರಾ? ಹಹ್?

ವಿಷ್ಣುಜನ: ಇಲ್ಲ. ಅವರು ಬೀದಿಯಲ್ಲಿ ಅಲ್ಲಿಂದಿಲ್ಲಿಗೆ ಓಡಾಡುತ್ತಿದ್ದಾರೆ.

ಪ್ರಭುಪಾದ: ಪ್ರಚಾರಕ್ಕಾ?

ತಮಲಾ ಕೃಷ್ಣ: ಹೌದು.

ಪ್ರಭುಪಾದ: ಐಸ್ ಕ್ರೀಮ್ ತೆಗೆದುಕೊಳ್ಳಬೇಡಿ. ಇದು ಮಾಯಾ. (ನಗು) 'ಬನ್ನಿ, ಬನ್ನಿ, ನನ್ನನ್ನು ಆಹ್ಲಾದಿಸಿ. ಬನ್ನಿ, ಬನ್ನಿ, ನನ್ನನ್ನು ಆನಂದಿಸಿ. ' (ನಗುತ್ತಾರೆ) ನೀವು ಆನಂದಿಸಿದ ತಕ್ಷಣ, ನೀವು ಸಿಕ್ಕಿಹಾಕಿಕೊಳ್ಳುತ್ತೀರಿ. ಅಷ್ಟೇ. ಮೀನಿನ ಗಾಳ. ಅವರು ಗಾಳವನ್ನು ಎಸೆದು ಮೀನುಗಳನ್ನು ಆಹ್ವಾನಿಸುತ್ತಾರೆ, 'ಬನ್ನಿ, ಬನ್ನಿ, ನನ್ನನ್ನು ಆನಂದಿಸಿ. ಬನ್ನಿ, ಬನ್ನಿ, ನನ್ನನ್ನು ಆನಂದಿಸಿ '. - ಆದಷ್ಟು ಬೇಗ! (ನಗು) ಮುಗಿಯಿತು. ನಂತರ, (ಮೀನುಗಳನ್ನು ಅನುಕರಿಸುವ ಧ್ವನಿ) 'ನೀನು ಈಗ ಎಲ್ಲಿಗೆ ಹೋಗುತ್ತೀಯ? ನನ್ನ ಚೀಲದಲ್ಲಿ ಬಾ. ಹೌದು, ನಾನು ನಿನ್ನನ್ನು ಚೆನ್ನಾಗಿ ಕರಿಯುತ್ತೇನೆ '. ನೋಡಿ? ಆದ್ದರಿಂದ ಇವೆಲ್ಲವನ್ನೂ ಶ್ರೀಮದ್ ಭಾಗವತಮ್ ನಲ್ಲಿ ವಿವರಿಸಲಾಗಿದೆ. ಮೀನು ನಾಲಿಗೆಯಿಂದ ತಿನ್ನುವ ಮೂಲಕ, ತನ್ನ ಪ್ರಾಣವನ್ನು ಕಳೆದುಕೊಳ್ಳುತ್ತಿದೆ.

681014 - ಉಪನ್ಯಾಸ ಭ.ಗೀತಾ ೦೨.೧೯-೨೫ - ಸಿಯಾಟಲ್