KN/710117 ಸಂಭಾಷಣೆ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಅಲಹಾಬಾದ್

KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ತದ್-ವಿಜ್ಞಾನಾರ್ಥಮ್ ಸ ಗುರುಮ್ ಏವ ಅಭಿಗಚ್ಚೇತ್ (ಮುಂ.ಉ 1.2.12): "ತತ್ ಜ್ಞಾನವನ್ನು ಅರ್ಥಮಾಡಿಕೊಳ್ಳಲು ಒಬ್ಬ ಆಧ್ಯಾತ್ಮಿಕ ಗುರುವನ್ನು ಸಂಪರ್ಕಿಸಬೇಕು.” ಗಚ್ಚೇತ್. ನೀವು ಈ ತತ್ವಗಳನ್ನು ಸ್ವೀಕರಿಸದಿದ್ದರೆ ಹೇಗೆ ಪ್ರಗತಿ ಸಾಧಿಸುವಿರಿ? ತಸ್ಮಾದ್ ಗುರುಂ ಪ್ರಪದ್ಯೇತ ಜಿಜ್ಞಾಸುರ್ ಶ್ರೇಯ ಉತ್ತಮಂ (ಶ್ರೀ.ಭಾ 11.3.21). ನೀವು ಈ ತತ್ವವನ್ನು ಒಪ್ಪಿಕೊಳ್ಳದಿದ್ದರೆ, ಯಾವುದೇ ಸಾಧ್ಯತೆಯಿಲ್ಲ. ನಂತರ ನೀವು ನಿಮ್ಮದೇ ಆದ ರೀತಿಯಲ್ಲಿ ಯೋಚಿಸುವುದನ್ನು ಮುಂದುವರಿಸಬಹುದು. ಯಾರ ಬಳಿಯು ಹೋಗುವ ಪ್ರಶ್ನೆಯೇ ಇಲ್ಲ. ಇತರರು ಮಾಡುತ್ತಿರುವಂತೆ, ಊಹಾಪೋಹಗಳ ಮೂಲಕ ನೀವು ನಿಮ್ಮನ್ನು ಪರಿಪೂರ್ಣರೆಂದು ತಿಳಿಯಬಹುದು. ಅದು ಸಾಧ್ಯ. ಆದರೆ ಎಂದಿಗೂ ಪರಿಪೂರ್ಣರಾಗುವುದಿಲ್ಲ.”
710117 - ಸಂಭಾಷಣೆ - ಅಲಹಾಬಾದ್