"ಧರ್ಮ-ಅರ್ಥ-ಕಾಮ-ಮೋಕ್ಷ (ಶ್ರೀ.ಭಾ 4.8.41, ಚೈ.ಚ ಆದಿ 1.90): ಇವು ಜೀವಾತ್ಮಗಳನ್ನು ಅತ್ಯುನ್ನತ ಸ್ಥಾಯಿಗೆ ಉನ್ನತೀಕರಿಸುವ ತತ್ವಗಳಾಗಿವೆ. ಆದರೆ ಅವರು ಅದನ್ನು ಸಾಮಾನ್ಯವಾಗಿ… ಅವರು ಸ್ವಲ್ಪ ಹೆಚ್ಚು ಹಣವನ್ನು ಪಡೆಯಲು ಧಾರ್ಮಿಕ ವಿಧಿವಿಧಾನಗಳನ್ನು ಆಚರಿಸುತ್ತಿದ್ದಾರೆ, ಅರ್ಥ. ಖಂಡಿತವಾಗಿಯೂ, ನಮ್ಮ ಜೀವನಾಧಾರಕ್ಕಾಗಿ ನಮಗೆ ಸ್ವಲ್ಪ ಹಣ ಬೇಕಾಗುತ್ತದೆ; ಅದು ಅವಶ್ಯಕ. ಆದರೆ ನಾವು ಧರ್ಮಾಚಾರಗಳನ್ನು ಕೇವಲ ಹಣ ಸಂಪಾದಿಸಲು ಮಾಡಿದರೆ, ಅದು ತಪ್ಪು. ಸಾಮಾನ್ಯವಾಗಿ ಜನರು ಹಾಗೆ ಮಾಡುತ್ತಾರೆ. ಅವರು ಹೆಚ್ಚಿನ ಹಣವನ್ನು ಪಡೆಯುವ ಸಲುವಾಗಿ ದಾನ ಮಾಡುತ್ತಾರೆ. ಅವರು ಹೆಚ್ಚಿನ ಮನೆಗಳನ್ನು ಪಡೆಯಲು ಧರ್ಮಶಾಲೆಗಳನ್ನು ತೆರೆಯುತ್ತಾರೆ. ಅದು ಅವರ ಉದ್ದೇಶ. ಅಥವಾ ಸ್ವರ್ಗಲೋಕವನ್ನು ಪಡೆಯಲು. ಏಕೆಂದರೆ ಅವರ ನಿಜವಾದ ಆಸಕ್ತಿ ಏನು ಎಂದು ಅವರಿಗೆ ತಿಳಿದಿಲ್ಲ. ನಿಜವಾದ ಆಸಕ್ತಿಯೆಂದರೆ ನಮ್ಮ ಮನೆಗೆ ಹಿಂತಿರುಗುವುದು, ಮರಳಿ ಭಗವದ್ಧಾಮಕ್ಕೆ."
|