KN/Prabhupada 0025 - ನೀವು ಅಪ್ಪಟವಾದುದನ್ನು ನೀಡಿದರೆ ಅದು ಕೆಲಸ ಮಾಡುತ್ತದೆ: Difference between revisions

(Created page with "<!-- BEGIN CATEGORY LIST --> Category:1080 Kannada Pages with Videos Category:Prabhupada 0025 - in all Languages Category:KN-Quotes - 1977 Category:KN-Quotes - C...")
 
m (Text replacement - "(<!-- (BEGIN|END) NAVIGATION (.*?) -->\s*){2,15}" to "<!-- $2 NAVIGATION $3 -->")
 
Line 8: Line 8:
[[Category:Kannada Language]]
[[Category:Kannada Language]]
<!-- END CATEGORY LIST -->
<!-- END CATEGORY LIST -->
<!-- BEGIN NAVIGATION BAR -- TO CHANGE TO YOUR OWN LANGUAGE BELOW SEE THE PARAMETERS OR VIDEO -->
<!-- BEGIN NAVIGATION BAR -- DO NOT EDIT OR REMOVE -->
{{1080 videos navigation - All Languages|French|FR/Prabhupada 0024 - Krishna est très gentil|0024|FR/Prabhupada 0026 - Vous êtes d'abord transféré dans l'univers où Krishna est présent|0026}}
{{1080 videos navigation - All Languages|Kannada|KN/Prabhupada 0024 - ಕೃಷನು ಎಷ್ಟು ದಯಾಳು|0024|KN/Prabhupada 0026 - ಮೊಟ್ಟ ಮೊದಲಾಗಿ ನಿಮ್ಮನ್ನು ಕೃಷ್ಣನಿರುವ ಬ್ರಹ್ಮಾಂಡಕ್ಕೆ ವರ್ಗಾಯಿಸಲಾಗುತ್ತದೆ|0026}}
<!-- END NAVIGATION BAR -->
<!-- END NAVIGATION BAR -->
<!-- BEGIN ORIGINAL VANIQUOTES PAGE LINK-->
<!-- BEGIN ORIGINAL VANIQUOTES PAGE LINK-->
Line 19: Line 19:


<!-- BEGIN VIDEO LINK -->
<!-- BEGIN VIDEO LINK -->
{{youtube_right|5RUPOzwhxn0|If We Give Genuine Thing, it Will Act<br />- Prabhupāda 0025}}
{{youtube_right|rkzyuYpZ_hI|ನೀವು ಅಪ್ಪಟವಾದುದನ್ನು ನೀಡಿದರೆ ಅದು ಕೆಲಸ ಮಾಡುತ್ತದೆ<br />- Prabhupāda 0025}}
<!-- END VIDEO LINK -->
<!-- END VIDEO LINK -->



Latest revision as of 17:51, 1 October 2020



Conversation with Yogi Amrit Desai of Kripalu Ashram (PA USA) -- January 2, 1977, Bombay

ಯೋಗಿ ಅಮಿತ್ ದೇಸಾಯಿ : ನನಗೆ ನಿಮ್ಮ ಮೇಲೆ ಬಹಳ ಪ್ರೀತಿ ಇದೆ. ನಿಮ್ಮ ದರ್ಶನಕ್ಕಾಗಿ ಬರಲೇ ಬೇಕೆಂದು ನಿರ್ಧರಿಸಿದೆ. ಪ್ರಭುಪಾದರು: ಧನ್ಯವಾದಗಳು. ಯೋಗಿ ಅಮಿತ್ ದೇಸಾಯಿ: ನಾನು ಭಕ್ತರಲ್ಲಿ ಹೇಳುತ್ತಿದ್ದೆ. ನಾನು ಹೇಳಿದೆ, ನೀವು... ಪ್ರಭುಪಾದರು: ನೀವು ಡಾ. ಮಿಶ್ರರೊಂದಿಗೆ ಇದ್ದೀರ? ಯೋಗಿ ಅಮಿತ್ ದೇಸಾಯಿ: ಇಲ್ಲ, ನಾನು ಇಲ್ಲಿ ಇರುವ ಭಕ್ತರಲ್ಲಿ ಹೇಳುತ್ತಿದ್ದೆ. ಶ್ರೀಲ ಪ್ರಭುಪಾದರು ಮೊದಲ ಬಾರಿಗೆ ಭಕ್ತಿಯನ್ನು ಪಾಶ್ಚಿಮಾತ್ಯ ದೇಶಕ್ಕೆ ತಂದಿದ್ದಾರೆ. ಇದು ಇಲ್ಲಿ ಬಹಳ ಬೇಕಾಗಿದೆ. ಏಕೆಂದರೆ ಅಲ್ಲಿ ಅವರ ತಲೆಯಲ್ಲಿ ಬಹಳ ವಿಷಯಗಳಿವೆ. ಯೋಚಿಸಿ, ಯೋಚಿಸಿ, ಯೋಚಿಸಿ, ಈ ಪ್ರೀತಿಯ ದಾರಿ ಬಹಳ ಉತ್ತಮವಾಗಿದೆ. ಪ್ರಭುಪಾದರು: ನೋಡಿ, ನೀವು ನಿಜವಾದ ವಾಸ್ತವ ಸಂಗತಿಯನ್ನು ತಿಳಿಸಿದರೆ, ಯೋಗಿ ಅಮಿತ್ ದೇಸಾಯಿ: ನಿಜವಾಗಿಯೂ ವಾಸ್ತವವಾದುದು. ಪ್ರಭುಪಾದರು: ಅದನ್ನು ಅರ್ಥ ಮಾಡಿಕೊಳ್ಳುತ್ತಾರೆ. ಯೋಗಿ ಅಮಿತ್ ದೇಸಾಯಿ: ಅದು ವಾಸ್ತವ ಸತ್ಯವಾಗಿರುವುದರಿಂದಲೇ ಇಷ್ಟೊಂದು ಸುಂದರವಾಗಿ ಬೆಳೆಯುತ್ತಿದೆ. ಪ್ರಭುಪಾದರು: ಜನರಿಗೆ ವಾಸ್ತವ ಸತ್ಯವನ್ನು ತಿಳಿಸುವುದು ಪ್ರತಿಯೊಬ್ಬ ಭಾರತೀಯನ ಕರ್ತವ್ಯ. ಅದೇ ಪರೋಪಕಾರ. ನನಗಿಂತ ಮೊದಲು ಬಹಳಷ್ಟು ಸ್ವಾಮಿಗಳು ಮತ್ತು ಯೋಗಿಗಳು ಅಲ್ಲಿಗೆ ಹೋಗಿ ಜನರಿಗೆ ಮೋಸ ಮಾಡಿದರು. ಯೋಗಿ ಅಮಿತ್ ದೇಸಾಯಿ: ಇಲ್ಲ, ಸತ್ಯವನ್ನು ಹೇಳಲು ಅವರು ಭಯಪಟ್ಟರು. ಜನರು ಅವರನ್ನು ಒಪ್ಪಲಾರರು ಎಂಬ ಭಯವಿತ್ತು. ಪ್ರಭುಪಾದರು: ಅವರಿಗೆ ನಿಜವಾದ ಸತ್ಯ ಏನು ಎಂದು ತಿಳಿದಿರಲಿಲ್ಲ. (ನಗು) ಭಯವೇನೂ ಇರಲಿಲ್ಲ. ಏಕೆ? ಒಬ್ಬನು ಸತ್ಯದ ನೆಲೆಗಟ್ಟಿನಲ್ಲಿ ಇರುವಾಗ ಭಯಪಡುವುದೇಕೆ? ಯೋಗಿ ಅಮಿತ್ ದೇಸಾಯಿ: ಹೌದು. ಪ್ರಭುಪಾದರು: ವಿವೇಕಾನಂದ ಮತ್ತು ಇತರರಿಗೆ ಸತ್ಯ ಏನು ಎಂದು ತಿಳಿದಿರಲಿಲ್ಲ. ಯೋಗಿ ಅಮಿತ್ ದೇಸಾಯಿ: ನೋಡಿ, ನೀವು ಬಂದ ನಂತರ... 1960ರಲ್ಲಿ ನಾನು ಅಲ್ಲಿ ಇದ್ದೆ. ನಾನು ಯೋಗ ಕಲಿಸಲು ಪ್ರಾರಂಭಿಸಿದೆ. ಆದರೆ ನೀವು ಬಂದ ನಂತರ ನಾನು ನಿರ್ಭಯವಾಗಿ ಭಕ್ತಿಯನ್ನು ಕಲಿಸಲು ಮತ್ತು ಮಂತ್ರಗಳನ್ನು ಜಪಿಸಲು ಸಾಧ್ಯವಾಯಿತು. ಹೀಗೆ, ಈಗ ನಮ್ಮ ಆಶ್ರಮದಲ್ಲಿ ಬಹಳಷ್ಟು ಭಕ್ತಿ ಇದೆ. ಬಹಳಷ್ಟು ಭಕ್ತಿ. ನಾನು ಆ ಗೌರವವನ್ನು ನಿಮಗೆ ಅರ್ಪಿಸಿದ್ದೇನೆ. ನಾನು ಅವರಿಗೆ ಬೋಧಿಸಲು ಭಯಪಡುತ್ತಿದ್ದೆ. ನಾನು ಯೋಚಿಸುತ್ತಿದ್ದೆ, "ಅವರು ಕ್ರಿಶ್ಚಿಯನ್. ಅತಿಯಾದ ಭಕ್ತಿ ಅವರಿಗೆ ಹಿಡಿಸದು. ಅವರು ಅಪಾರ್ಥ ಮಾಡಿಕೊಳ್ಳುತ್ತಾರೆ". ಆದರೆ ನೀವು ಒಂದು ಚಮತ್ಕಾರವನ್ನು ಮಾಡಿದ್ದೀರಿ. ಭಗವಾನ್ ಶ್ರೀ ಕೃಷ್ಣನು ನಿಮ್ಮ ಮೂಲಕ ಚಮತ್ಕಾರವನ್ನು ಮಾಡಿದ್ದಾನೆ. ಜಗತ್ತಿನಲ್ಲೇ ಇದೊಂದು ಅದ್ಭುತ ಚಮತ್ಕಾರ. ನನಗೆ ಇದರಿಂದ ಬಹಳಷ್ಟು ಸಂತೋಷವಾಗಿದೆ. ಪ್ರಭುಪಾದರು: ನಿಮ್ಮ ಈ ಮಾತು ನಿಮ್ಮ ಉದಾರತೆಯನ್ನು ತೋರಿಸುತ್ತದೆ. ನಾವು ವಾಸ್ತವ ಸತ್ಯವನ್ನು ತಿಳಿಸಿದರೆ, ಜನರು ಅದನ್ನು ಪಾಲಿಸುತ್ತಾರೆ. ಯೋಗಿ ಅಮಿತ್ ದೇಸಾಯಿ: ನಿಜ. ನಾನೂ ಕೂಡ ಇದನ್ನೇ ಮಾಡುತ್ತಿದ್ದೇನೆ. ಪ್ರತಿಯೊಬ್ಬರೂ... ಸುಮಾರು 180 ಜನರು ನಮ್ಮ ಆಶ್ರಮದಲ್ಲಿ ಶಾಶ್ವತವಾಗಿ ಇದ್ದಾರೆ. ಅವರೆಲ್ಲರೂ ಬ್ರಹ್ಮಚರ್ಯವನ್ನು ಪಾಲಿಸುತ್ತಾರೆ. ಪ್ರತಿಯೊಬ್ಬರೂ ಬೆಳಿಗ್ಗೆ 4.00 ಗಂಟೆಗೆ ಏಳುತ್ತಾರೆ ಮತ್ತು 9.00 ಗಂಟೆಯ ಒಳಗೆ ಮಲಗುತ್ತಾರೆ. ಅವರು ಒಬ್ಬರನ್ನೊಬ್ಬರು ಪರಸ್ಪರ ಸ್ಪರ್ಶಿಸುವುದು ಸಹ ಇಲ್ಲ. ಅವರು ಪ್ರತ್ಯೇಕ ಕೋಣೆಯಲ್ಲಿ ಮಲಗುತ್ತಾರೆ. ಅವರು ಸತ್ಸಂಗದಲ್ಲಿಯೂ ಸಹ ಪ್ರತ್ಯೇಕವಾಗಿ ಕುಳಿತುಕೊಳ್ಳುತ್ತಾರೆ. ಎಲ್ಲವೂ ಬಹಳ ಕಟ್ಟುನಿಟ್ಟು. ಮಾದಕ ವಸ್ತು, ಮದ್ಯ, ಮಾಂಸ, ಚಹಾ, ಕಾಫಿ, ಬೆಳ್ಳುಳ್ಳಿ, ಈರುಳ್ಳಿ ಇವು ಯಾವುವೊ ಇಲ್ಲ. ಶುದ್ಧ. ಪ್ರಭುಪಾದರು: ಬಹಳ ಒಳ್ಳೆಯದು. ಹೌದು, ನಾವೂ ಕೂಡ ಇದನ್ನು ಪಾಲಿಸುತ್ತೇವೆ. ಯೋಗಿ ಅಮಿತ್ ದೇಸಾಯಿ: ಹೌದು. ಪ್ರಭುಪಾದರು: ಆದರೆ ನಿಮ್ಮಲ್ಲಿ ಯಾವುದಾದರೂ ಅರ್ಚಾ ವಿಗ್ರಹ ಇದೆಯೇ? ಯೋಗಿ ಅಮಿತ್ ದೇಸಾಯಿ: ಹೌದು. ಭಗವಾನ್ ಕೃಷ್ಣ ಮತ್ತು ರಾಧ ನಮ್ಮ ಅರ್ಚಾ ವಿಗ್ರಹ. ಸ್ವಾಮಿ ಕೃಪಾಲು ಆನಂದಿಯವರು ನನ್ನ ಗುರುಗಳು. ಅವರು... ಬರೋಡದ ಹತ್ತಿರ ಅವರ ಒಂದು ಆಶ್ರಮವಿದೆ. ಇಪ್ಪತ್ತೇಳು ವರ್ಷಗಳ ಕಾಲ ಅವರು ಸಾಧನೆಯನ್ನು ಮಾಡಿದರು, ಮತ್ತು ಹನ್ನೆರಡು ವರ್ಷಗಳ ಕಾಲ ಸಂಪೂರ್ಣ ಮೌನ. ಬಹಳ ಜನರ ವಿನಂತಿಯ ಮೇರೆಗೆ, ಕಳೆದ ಕೆಲವು ವರ್ಷಗಳಿಂದ ಅವರು ವರ್ಷದಲ್ಲಿ ಒಂದು ಅಥವಾ ಎರಡು ಬಾರಿ ಮಾತನಾಡುತ್ತಿದ್ದಾರೆ. ಪ್ರಭುಪಾದರು: ಅವರು ಜಪ ಮಾಡುವುದಿಲ್ಲವೇ? ಯೋಗಿ ಅಮಿತ್ ದೇಸಾಯಿ: ಅವರು ಜಪ ಮಾಡುತ್ತಾರೆ. ಮೌನ ವೃತದಲ್ಲಿ ಇರುವಾಗ ಜಪ ಮಾಡಬಹುದು. ಏಕೆಂದರೆ ನೀವು ಅಥವಾ ಅವರು ಭಗವಂತನ ನಾಮ ಜಪ ಮಾಡುವಾಗ... ಅದು ಮೌನವನ್ನು ಮುರಿದಂತೆ ಆಗುವುದಿಲ್ಲ. ಆದ್ದರಿಂದ ಅವರು ಜಪಿಸುತ್ತಾರೆ. ಪ್ರಭುಪಾದರು: ಅಸಂಬದ್ಧವಾಗಿ ಮಾತನಾಡದೇ ಇರುವುದೇ ಮೌನ. ನಾವು ಹರೇ ಕೃಷ್ಣ ಮಹಾ ಮಂತ್ರವನ್ನು ಜಪಿಸಬಹುದು. ಅದೇ ಮೌನ. ಸಮಯವನ್ನು ವ್ಯರ್ಥವಾಗಿ ಕಳೆಯುವ ಬದಲು, ಲೌಕಿಕ ವಿಷಯಗಳ ಬಗ್ಗೆ ಮಾತನಾಡುವ ಬದಲು, ನಾವು ಹರೇ ಕೃಷ್ಣ ಮಹಾ ಮಂತ್ರವನ್ನು ಜಪಿಸೋಣ. ಅದು ಸಕಾರಾತ್ಮಕ. ಮೌನ ನಕಾರಾತ್ಮಕ. ಅಸಂಬದ್ಧತೆಯನ್ನು ನಿಲ್ಲಿಸಿ, ಸರಿಯಾದುದನ್ನು ಮಾತನಾಡಿ. ಯೋಗಿ ಅಮಿತ್ ದೇಸಾಯಿ: ಹೌದು. ಅದು ಸರಿ. ಪ್ರಭುಪಾದರು: ಪರಂ ದೃಷ್ಟ್ವಾ ನಿವರ್ತತೇ (ಭಗವದ್ಗೀತೆ 2.59). ಪರಂ ದೃಷ್ಟ್ವಾ ನಿವರ್ತತೇ. ಒಬ್ಬನು ತನ್ನ ಅಸಂಬದ್ಧತೆಯನ್ನು ಬಿಟ್ಟರೆ, ಪರಂ, ಪರಮ, ಪರಂ ದೃಷ್ಟ್ವಾ ನಿವರ್ತತೇ. ನಿಮಗೆ ಉತ್ತಮ ವಸ್ತುಗಳು ದೊರಕಿದಾಗ, ನೀವು ಸ್ವಾಭಾವಿಕವಾಗಿ ಕೆಟ್ಟದ್ದನ್ನು ಬಿಟ್ಟು ಬಿಡುತ್ತೀರಿ. ಭೌತಿಕವಾದದ್ದೆಲ್ಲವೂ ಕೆಟ್ಟದ್ದು. ಕರ್ಮ, ಜ್ಞಾನ, ಯೋಗ, ಎಲ್ಲವೂ ಭೌತಿಕವಾದವು. ಕರ್ಮ, ಜ್ಞಾನ, ಯೋಗ. ಸಾಮಾನ್ಯವಾದ ಯೋಗವೂ ಭೌತಿಕವಾದುದು.