KN/Prabhupada 0027 - ಮರುಜನ್ಮವಿದೆಯೆಂದು ಅವರಿಗೆ ತಿಳಿಯದು: Difference between revisions

(Created page with "<!-- BEGIN CATEGORY LIST --> Category:1080 Kannada Pages with Videos Category:Prabhupada 0027 - in all Languages Category:KN-Quotes - 1975 Category:KN-Quotes - L...")
 
m (Text replacement - "(<!-- (BEGIN|END) NAVIGATION (.*?) -->\s*){2,15}" to "<!-- $2 NAVIGATION $3 -->")
 
Line 7: Line 7:
[[Category:KN-Quotes - in USA, Atlanta]]
[[Category:KN-Quotes - in USA, Atlanta]]
<!-- END CATEGORY LIST -->
<!-- END CATEGORY LIST -->
<!-- BEGIN NAVIGATION BAR -- TO CHANGE TO YOUR OWN LANGUAGE BELOW SEE THE PARAMETERS OR VIDEO -->
<!-- BEGIN NAVIGATION BAR -- DO NOT EDIT OR REMOVE -->
<!-- BEGIN NAVIGATION BAR -- DO NOT EDIT OR REMOVE -->
{{1080 videos navigation - All Languages|English|Prabhupada 0026 - You Are First of all Transferred to the Universe Where Krsna is|0026|Prabhupada 0028 - Buddha Is God|0028}}
{{1080 videos navigation - All Languages|Kannada|KN/Prabhupada 0026 - ಮೊಟ್ಟ ಮೊದಲಾಗಿ ನಿಮ್ಮನ್ನು ಕೃಷ್ಣನಿರುವ ಬ್ರಹ್ಮಾಂಡಕ್ಕೆ ವರ್ಗಾಯಿಸಲಾಗುತ್ತದೆ|0026|KN/Prabhupada 0028 - ಬುದ್ದ ಭಗವಂತನು|0028}}
<!-- END NAVIGATION BAR -->
<!-- END NAVIGATION BAR -->
<!-- END NAVIGATION BAR -->
<!-- BEGIN ORIGINAL VANIQUOTES PAGE LINK-->
<!-- BEGIN ORIGINAL VANIQUOTES PAGE LINK-->
Line 39: Line 37:
:ಮದ್ಯಾಜಿನೋಪಿ ಯಾಂತಿಮಾಂ  
:ಮದ್ಯಾಜಿನೋಪಿ ಯಾಂತಿಮಾಂ  
:([[Vanisource:BG 9.25 (1972)|ಭಗವದ್ಗೀತಾ 9.25]])  
:([[Vanisource:BG 9.25 (1972)|ಭಗವದ್ಗೀತಾ 9.25]])  
ಎಂದು ಹೇಳಿರುವಹಾಗೆ. ಹೀಗೆ ನೀವು ಮೇಲಿನ ಲೋಕಗಳಲ್ಲಿ ಉತ್ತಮ ಜೀವನ ಪಡೆಯಲು ಇಲ್ಲಿ ಸಿದ್ಧತೆ ನಡೆಸಬಹುದು ಅಥವಾ ಇದೇ ಪ್ರಪಂಚದಲ್ಲಿ, ಇನ್ನೂ ಉತ್ತಮವಾದ ಸಮಾಜದಲ್ಲಿ ಅಥವಾ ಭೂತ ಮತ್ತು ಪಿಶಾಚಿಗಳು ನಿಯಂತ್ರಿಸುವ ಲೋಕಗಳಿಗೆ ಹೋಗಬಹುದು. ಅಥವಾ ಕೃಷ್ಣನಿರುವ ಲೋಕಗಳಿಗೆ ನೀವು ಹೋಗಬಹುದು. ನಿಮಗೆ ಎಲ್ಲವೂ ಮುಕ್ತವಾಗಿದೆ. ಯಾಂತಿ ಭೂತೇಜ್ಯಾ ಭೂತಾನಿ ಮದ್ ಯಾಜಿನೋಪಿ ಯಾಂತಿ ಮಾಂ. ನೀವು ಸುಮ್ಮನೆ ತಯಾರಿ ಮಾಡಿಕೊಳ್ಳಬೇಕು. ಬಾಲ್ಯದಲ್ಲಿ ವಿಧ್ಯಾಭ್ಯಾಸ ಪಡೆಯುವ ಮೂಲಕ ಒಬ್ಬ ಎಂಜಿನಿಯರ್ ಆಗಬಹುದು. ಒಬ್ಬನು ವೈದ್ಯನಾಗಬಹುದು, ಒಬ್ಬನು ವಕೀಲನಾಗಬಹುದು ಮತ್ತು ಇತರ ವೃತ್ತಿಪರ ವ್ಯಕ್ತಿ ಅವರು ವಿಧ್ಯಾಭ್ಯಾಸದ ಮೂಲಕ ತಯಾರಿ ನಡೆಸುತ್ತಾರೆ, ಹಾಗೆಯೇ, ನೀವು ನಿಮ್ಮ ಮುಂದಿನ ಜೀವನಕ್ಕೆ ತಯಾರಿಮಾಡಿಕೊಳ್ಳಬಹುದು. ಇದನ್ನು ಅರ್ಥಮಾಡಿಕೊಳ್ಳುವುದು ಕಷ್ಟವೇನಲ್ಲ.ಆದರೆ ಅವರು ಮುಂದಿನ ಜೀವನದ ಇರುವಿಕೆಯ ಬಗ್ಗೆ ನಂಬಿಕೆಯನ್ನು ಹೊಂದಿಲ್ಲ. ಇದೊಂದು ಸಾಮಾನ್ಯ ಜ್ಞಾನವಾಗಿದೆ. ನಿಜವಾಗಿಯು ಮುಂದಿನ ಜೀವನ ಎಂಬುದು ಇದೆ, ಏಕೆಂದರೆ ಕೃಷ್ಣನು ಹೇಳಿದ್ದಾನೆ, ಮತ್ತು ಈ ತತ್ತ್ವವನ್ನು ನಾವು ಸ್ವಲ್ಪ ಬುದ್ಧಿವಂತಿಕೆಯನ್ನು ಉಪಯೋಗಿಸಿ ಅರ್ಥಮಾಡಿಕೊಳ್ಳಬಹುದು. ಅದ್ದರಿಂದ ನಮ್ಮ ಪ್ರತಿಪಾದನೆ ಏನೆಂದರೆ, "ನೀವು ನಿಮ್ಮ ಮುಂದಿನ ಜೀವನಕ್ಕೆ ತಯಾರಿ ಮಾಡಿಕೊಳ್ಳಲು ಬಯಸಿದರೆ, ನಮ್ಮ ನಿಜವಾದ ಮನೆಯಾದ, ಭಗವದ್ಧಾಮಕ್ಕೆ ಮರಳಿ ಹೋಗುವುದಕ್ಕಾಗಿ ಏಕೆ ಕಷ್ಟ ಪಡಬಾರದು?" ಇದು ನಮ್ಮ ಪ್ರತಿಪಾದನೆಯಾಗಿದೆ.</p>
ಎಂದು ಹೇಳಿರುವಹಾಗೆ. ಹೀಗೆ ನೀವು ಮೇಲಿನ ಲೋಕಗಳಲ್ಲಿ ಉತ್ತಮ ಜೀವನ ಪಡೆಯಲು ಇಲ್ಲಿ ಸಿದ್ಧತೆ ನಡೆಸಬಹುದು ಅಥವಾ ಇದೇ ಪ್ರಪಂಚದಲ್ಲಿ, ಇನ್ನೂ ಉತ್ತಮವಾದ ಸಮಾಜದಲ್ಲಿ ಅಥವಾ ಭೂತ ಮತ್ತು ಪಿಶಾಚಿಗಳು ನಿಯಂತ್ರಿಸುವ ಲೋಕಗಳಿಗೆ ಹೋಗಬಹುದು. ಅಥವಾ ಕೃಷ್ಣನಿರುವ ಲೋಕಗಳಿಗೆ ನೀವು ಹೋಗಬಹುದು. ನಿಮಗೆ ಎಲ್ಲವೂ ಮುಕ್ತವಾಗಿದೆ. ಯಾಂತಿ ಭೂತೇಜ್ಯಾ ಭೂತಾನಿ ಮದ್ ಯಾಜಿನೋಪಿ ಯಾಂತಿ ಮಾಂ. ನೀವು ಸುಮ್ಮನೆ ತಯಾರಿ ಮಾಡಿಕೊಳ್ಳಬೇಕು. ಬಾಲ್ಯದಲ್ಲಿ ವಿಧ್ಯಾಭ್ಯಾಸ ಪಡೆಯುವ ಮೂಲಕ ಒಬ್ಬ ಎಂಜಿನಿಯರ್ ಆಗಬಹುದು. ಒಬ್ಬನು ವೈದ್ಯನಾಗಬಹುದು, ಒಬ್ಬನು ವಕೀಲನಾಗಬಹುದು ಮತ್ತು ಇತರ ವೃತ್ತಿಪರ ವ್ಯಕ್ತಿ ಅವರು ವಿಧ್ಯಾಭ್ಯಾಸದ ಮೂಲಕ ತಯಾರಿ ನಡೆಸುತ್ತಾರೆ, ಹಾಗೆಯೇ, ನೀವು ನಿಮ್ಮ ಮುಂದಿನ ಜೀವನಕ್ಕೆ ತಯಾರಿಮಾಡಿಕೊಳ್ಳಬಹುದು. ಇದನ್ನು ಅರ್ಥಮಾಡಿಕೊಳ್ಳುವುದು ಕಷ್ಟವೇನಲ್ಲ.ಆದರೆ ಅವರು ಮುಂದಿನ ಜೀವನದ ಇರುವಿಕೆಯ ಬಗ್ಗೆ ನಂಬಿಕೆಯನ್ನು ಹೊಂದಿಲ್ಲ. ಇದೊಂದು ಸಾಮಾನ್ಯ ಜ್ಞಾನವಾಗಿದೆ. ನಿಜವಾಗಿಯು ಮುಂದಿನ ಜೀವನ ಎಂಬುದು ಇದೆ, ಏಕೆಂದರೆ ಕೃಷ್ಣನು ಹೇಳಿದ್ದಾನೆ, ಮತ್ತು ಈ ತತ್ತ್ವವನ್ನು ನಾವು ಸ್ವಲ್ಪ ಬುದ್ಧಿವಂತಿಕೆಯನ್ನು ಉಪಯೋಗಿಸಿ ಅರ್ಥಮಾಡಿಕೊಳ್ಳಬಹುದು. ಅದ್ದರಿಂದ ನಮ್ಮ ಪ್ರತಿಪಾದನೆ ಏನೆಂದರೆ, "ನೀವು ನಿಮ್ಮ ಮುಂದಿನ ಜೀವನಕ್ಕೆ ತಯಾರಿ ಮಾಡಿಕೊಳ್ಳಲು ಬಯಸಿದರೆ, ನಮ್ಮ ನಿಜವಾದ ಮನೆಯಾದ, ಭಗವದ್ಧಾಮಕ್ಕೆ ಮರಳಿ ಹೋಗುವುದಕ್ಕಾಗಿ ಏಕೆ ಕಷ್ಟ ಪಡಬಾರದು?" ಇದು ನಮ್ಮ ಪ್ರತಿಪಾದನೆಯಾಗಿದೆ.  
<!-- END TRANSLATED TEXT -->
<!-- END TRANSLATED TEXT -->

Latest revision as of 17:51, 1 October 2020

Lecture on CC Adi-lila 7.1 -- Atlanta, March 1, 1975

(ಓದುತ) "ಭೌತ ಪ್ರಕೃತಿಯ ಅಧೀನದಲ್ಲಿ ಬದ್ಧ ಸ್ಥಿತಿಯಲ್ಲಿ ಇರುವ ವ್ಯಕ್ತಿಯು ಅಸಹಾಯಕ ಪರಿಸ್ಥಿತಿಯಲ್ಲಿ ಇದ್ದಾನೆ. ಆದರೆ ಬದ್ಧಾತ್ಮ ಮಾಯೆ ಅಥವಾ ಬಹಿರಂಗ ಶಕ್ತಿಯ ಭ್ರಮೆಯಲ್ಲಿ ತನ್ನ ಬಂಧು ಮಿತ್ರರು, ರಾಷ್ಟ್ರ, ಸಾಮಾಜ ಇವುಗಳಿಂದ ಸಂಪೂರ್ಣವಾಗಿ ರಕ್ಷಿಸಲ್ಪಟ್ಟಿದ್ದೇನೆ ಎಂದು ಭಾವಿಸುತ್ತಾನೆ. ಮರಣದ ಸಮಯದಲ್ಲಿ ಇವರು ಯಾರೂ ರಕ್ಷಣೆಗೆ ಬರುವುದಿಲ್ಲ ಎಂದು ಅವನಿಗೆ ತಿಳಿದಿಲ್ಲ. ಇದೇ ಮಾಯೆ. ಆದರೆ ಅವನು ನಂಬುವುದಿಲ್ಲ. ಮಾಯೆಯ ಭ್ರಮೆಯಲ್ಲಿ ಇರುವ ಕಾರಣ, ನಿಜವಾದ ರಕ್ಷಣೆ ಎಂದರೆ ಏನು ಎಂಬುದೂ ಆತನಿಗೆ ತಿಳಿದಿಲ್ಲ. ರಕ್ಷಣೆ. ರಕ್ಷಣೆ ಎಂದರೆ, ಪುನರಾವರ್ತನೆಯಾಗುವ ಜನನ ಮರಣ ಚಕ್ರದಿಂದ ಒಬ್ಬನು ತನ್ನನ್ನು ರಕ್ಷಿಸಿಕೊಳ್ಳುವುದು. ಅದು ನಿಜವಾದ ರಕ್ಷಣೆ. ಆದರೆ ಅವರಿಗೆ ಅದು ತಿಳಿದಿಲ್ಲ. (ಓದುತ) ಭೌತಿಕ ಪ್ರಕೃತಿಯ ನಿಯಮಗಳು ಎಷ್ಟು ಪ್ರಬಲವಾಗಿದೆಯೆಂದರೆ, ನಮ್ಮ ಯಾವುದೇ ಭೌತಿಕ ಸಂಪತ್ತು ನಮ್ಮನ್ನು ಕ್ರೂರ ಸಾವಿನ ಕೈಯಿಂದ ರಕ್ಷಿಸಲಾರದು. ಇದು ಪ್ರತಿಯೊಬ್ಬರಿಗೂ ತಿಳಿದಿದೆ. ಮತ್ತು ಅದೇ ನಮ್ಮ ನಿಜವಾದ ಸಮಸ್ಯೆ. ಸಾವು ಎಂದರೆ ಯಾರಿಗೆ ಭಯವಿಲ್ಲ? ಸಾವು ಎಂದರೆ ಪ್ರತಿಯೊಬ್ಬರಿಗೂ ಭಯವಿದೆ. ಏಕೆ? ಏಕೆಂದರೆ, ಯಾವುದೇ ಜೀವಿಯೂ ಸಾಯುವುದಕ್ಕಾಗಿ ಇರುವುದಲ್ಲ. ಅವನು ಶಾಶ್ವತ. ಆದ್ದರಿಂದ ಜನನ, ಮರಣ, ಮುಪ್ಪು ಮತ್ತು ರೋಗ ಇವೆಲ್ಲವೂ ಅವನಿಗೆ ಕಷ್ಟವನ್ನು ನೀಡುತ್ತದೆ. ಅವನು ಶಾಶ್ವತನಾದ ಕಾರಣ, ಅವನಿಗೆ ಹುಟ್ಟು ಇಲ್ಲ, ನ ಜಾಯತೇ, ಯಾರಿಗೆ ಹುಟ್ಟು ಇಲ್ಲವೋ ಅವರಿಗೆ ಸಾವು ಇಲ್ಲ, ನ ಮೃಯತೇ ಕದಾಚಿತ್ (ಭಗವದ್ಗೀತೆ 2.20). ಇದು ನಮ್ಮ ನಿಜವಾದ ಸ್ಥಾನ. ಆದ್ದರಿಂದ ನಮಗೆ ಸಾವು ಎಂದರೆ ಭಯ. ಇದು ನಮ್ಮ ಸ್ವಾಭಾವಿಕ ಗುಣ.

ಆದ್ದರಿಂದ ನಮ್ಮನ್ನು ಸಾವಿನಿಂದ ರಕ್ಷಿಸಲು... ಇದು ಮಾನವ ನಾಗರೀಕತೆಯ ಮೊದಲ ಕರ್ತವ್ಯ. ಈ ಕಾರಣಕ್ಕಾಗಿಯೇ ನಾವು ಕೃಷ್ಣ ಪ್ರಜ್ಞಾ ಆಂದೋಲನವನ್ನು ಕಲಿಸುತ್ತಿದ್ದೇವೆ. ಅದೇ ಎಲ್ಲರ ಜೀವನೋದ್ದೇಶವಾಗಿರ ಬೇಕು. ಅದೇ ಶಾಸ್ತ್ರದ ಆದೇಶ. ಯಾರು ಪೋಷಕರೋ... ಸರ್ಕಾರ, ತಂದೆ, ಗುರು, ಇವರೆಲ್ಲರೂ ಮಕ್ಕಳ ಪೋಷಕರು. ರಕ್ಷಣೆಯನ್ನು ನೀಡುವುದು ಹೇಗೆ ಎಂದು ಅವರಿಗೆ ತಿಳಿದಿರಬೇಕು. ನ ಮೋಚಯೇದ್ ಯಃ ಸಮುಪೇತ ಮೃತ್ಯುಂ (ಶ್ರೀಮದ್ ಭಾಗವತಂ 5.5.18). ಇಡೀ ಪ್ರಪಂಚದಲ್ಲಿ ಎಲ್ಲಿದೆ ಈ ತತ್ವಶಾಸ್ತ್ರ? ಈ ರೀತಿಯ ತತ್ವಶಾಸ್ತ್ರವೇ ಇಲ್ಲ. ಈ ಕೃಷ್ಣ ಪ್ರಜ್ಞಾ ಆಂದೋಲನ ಒಂದೇ ಇಂತಹ ತತ್ವಶಾಸ್ತ್ರವನ್ನು ತಿಳಿಸುತ್ತಿದೆ. ವಿಚಿತ್ರವಾಗಿ ಅಲ್ಲ ಪ್ರಮಾಣಿಕೃತ ಶಾಸ್ತ್ರಗಳಿಂದ, ವೈದಿಕ ಸಾಹಿತ್ಯಗಳಿಂದ, ಪರಿಣಿತರಿಂದ. ಆದ್ದರಿಂದ ಇದು ನಮ್ಮ ವಿನಂತಿ. ಮಾನವ ಸಮಾಜದ ಒಳಿತಿಗಾಗಿ ನಾವು ಪ್ರಪಂಚದಾದ್ಯಂತ ವಿವಿಧ ಕೇಂದ್ರಗಳನ್ನು ತೆರೆಯುತ್ತಿದ್ದೇವೆ. ಅವರಿಗೆ ಜೀವನದ ಉದ್ದೇಶ ಏನೆಂದು ತಿಳಿದಿಲ್ಲ, ಸಾವಿನ ನಂತರ ಇನ್ನೊಂದು ಜೀವನ ಇದೆ ಎಂದೂ ಅವರಿಗೆ ತಿಳಿದಿಲ್ಲ. ಈ ವಿಷಯಗಳು ಅವರಿಗೆ ತಿಳಿದಿಲ್ಲ. ನಿಸಂದೇಹವಾಗಿ ಮರುಜನ್ಮವಿದೆ, ಹಾಗು ಈ ಜೀವನದಲ್ಲಿ ಮುಂದಿನ ಜೀವನಕ್ಕೆ ತಯಾರಿ ನಡೆಸಬಹುದು. ಉತ್ತಮವಾದ ಭೌತಿಕ ಸುಖಕ್ಕಾಗಿ ನೀವು ಉನ್ನತ ಲೋಕಗಳಿಗೆ ಹೋಗಬಹುದು. ನೀವು ಇಲ್ಲೇ ಭದ್ರವಾದ ಸ್ಥತಿಯನ್ನು ಪಡೆಯಬಹುದು. ಭದ್ರತೆಯೆಂದರೆ ಈ ಭೌತಿಕ ಜೀವನ.

ಯಾಂತಿ ದೇವವ್ರತಾ ದೇವಾನ್
ಪಿತೃನ್ ಯಾಂತಿ ಪಿತೃವ್ರತಾ
ಭೂತಾನಿ ಯಾಂತಿ ಭೂತೇಜ್ಯಾ
ಮದ್ಯಾಜಿನೋಪಿ ಯಾಂತಿಮಾಂ
(ಭಗವದ್ಗೀತಾ 9.25)