KN/Prabhupada 0060 - ಜೀವವು ಜಡದಿಂದ ಜನಿಸಲಾಗುವುದಿಲ್ಲ

Revision as of 21:23, 3 February 2021 by Vanibot (talk | contribs) (Vanibot #0023: VideoLocalizer - changed YouTube player to show hard-coded subtitles version)
(diff) ← Older revision | Latest revision (diff) | Newer revision → (diff)


Room Conversation with Svarupa Damodara -- February 28, 1975, Atlanta

ಪ್ರಭುಪಾದ : ನಾವು ಹೇಳುತ್ತೇವೆ ಜೀವ, ಅಂದರೆ ಜೀವಾತ್ಮ, ವೀರ್ಯದಲ್ಲಿರುವಾಗ, ಹಾಗು ಅದು ಸ್ತ್ರಿಯ ಯೋನಿಯಲ್ಲಿ ಪ್ರವೇಶಿಸಿದಾಗ ದೇಹವು ಬೆಳೆಯುತ್ತದೆ. ಚೇತನವೇ ಆದಿಯು. ಇದು ವಾಸ್ತವಿಕ. ಹಾಗು ಈ ಚೇತನವು ಪರಮಚೇತನದ ಭಾಗಾಂಶ. ಆದ್ದರಿಂದ ಭಗವಂತನೇ ಆದಿಯು. ಜನ್ಮಾದಿ ಅಸ್ಯ ಯತಃ (ಶ್ರೀ. ಭಾ 1.1.1). ಅಥಾತೋ ಬ್ರಹ್ಮ ಜಿಜ್ಞಾಸಾ. ಆದ್ದರಿಂದ ಈ ದಾರಿತಪ್ಪಿರುವ ಲೋಕದಲ್ಲಿ ನಾವು ಈ ಸಿದ್ದಾಂತವನ್ನು ಸ್ಥಾಪಿಸಬೇಕು. ಹಾಗು ಅದಲ್ಲದೆ, ಅವರು ಏಕೆ ಜಡದ್ರವ್ಯದಿಂದ ಜೀವವನ್ನು ತಯಾರಿಸಲಾಗುತ್ತಿಲ್ಲ? ಅವರ ಮಾತಿನ ಬೆಲೆಯೇನು? ಅವರು ಅದನ್ನು ಮಾಡಲಾಗಲಿಲ್ಲ. ಜೀವವು ಜಡದಿಂದ ಉತ್ಪತ್ತಿಯಾಗುತ್ತದೆ ಎಂಬುದಕ್ಕೆ ಪ್ರಮಾಣವೆಲ್ಲಿದೆ? ನೀನು ಮಾಡು.

ಸ್ವರೂಪ ದಾಮೋದರ: ಪ್ರಮಾಣದ ಬಗ್ಗೆ ತನಿಖೆ ನಡೆಯುತ್ತಿದೆ.

ಪ್ರಭುಪಾದ: ಅದು ಮೂರ್ಖತೆ. ಅದು ಮೂರ್ಖತೆ. ಜೀವದ ಮೂಲ ಜೀವ, ಅದಕ್ಕೆ ಪ್ರಮಾಣವಿದೆ, ಹಲವಾರು ಪ್ರಮಾಣಗಳಿವೆ. ಮಾನುಷ್ಯ, ಪ್ರಾಣಿ, ಮರಗಳು – ಪ್ರತಿಯೊಂದೂ ಜೀವದಿಂದ ಉತ್ಪತ್ತಿಯಾಗುತ್ತಿದೆ. ಈಗಿನವರೆಗು, ಕಲ್ಲಿನಿಂದ ಮನುಷ್ಯ ಹುಟ್ಟುವುದನ್ನು ಯಾರೂ ನೋಡಿಲ್ಲ. ಯಾರೂ ನೋಡಿಲ್ಲ. ಕೆಲವೊಮ್ಮೆ ಇದನ್ನು ವೃಸ್ಚಿಕ-ತಂಡೂಲ-ನ್ಯಾಯ ಎನ್ನುತ್ತಾರೆ. ನಿಮಗೆ ಅದು ತಿಳಿದಿದಯೆ? ವೃಸ್ಚಿಕ-ತಂಡೂಲ-ನ್ಯಾಯ. ವೃಸ್ಚಿಕ ಅಂದರೆ ಚೇಳು, ಹಾಗು ತಂಡೂಲ ಅಂದರೆ ಅಕ್ಕಿ. ಕೆಲವೊಮ್ಮೆ ಕೆಲವು ಅಕ್ಕಿಯ ರಾಶಿಯನ್ನು ನೋಡುತ್ತೇವೆ, ಅದರಿಂದ ಚೇಳು ಹೊರಬರುತ್ತವೆ. ಆದರೆ ಅದರ ಅರ್ಥ ಅಕ್ಕಿಯಿಂದ ಚೇಳು ಹುಟ್ಟಿತ್ತು ಎಂದಲ್ಲ. ನಿಮ್ಮ ದೇಶದಲ್ಲಿ ನೀವು ನೋಡಿಲ್ಲವೆ? ನಾವು ನೋಡಿದ್ದೇವೆ. ಅಕ್ಕಿಯ ರಾಶಿಯಿಂದ ಒಂದು ಚೇಳು, ಚಿಕ್ಕ ಚೇಳು, ಹೊರಬರುತ್ತಿದೆ. ಸತ್ಯವೇನೆಂದರೆ ಚೇಳಿನ ತಾಯಿ/ತಂದೆ ಅವುಗಳು ಮೊಟ್ಟೆಗಳನ್ನು ಅಕ್ಕಿಯಲಿಟ್ಟರೆ, ಕಾವು ಪಡೆದು, ಚೇಳು ಹೊರಬರುತ್ತದೆ, ಅದರ ಅರ್ಥ ಚೇಳು ಅಕ್ಕಿಯಿಂದ ಹುಟ್ಟಿತು ಎಂದಲ್ಲ. ಆದ್ದರಿಂದ ಅದನ್ನು ವೃಸ್ಚಿಕ-ತಂಡೂಲ-ನ್ಯಾಯ ಎನ್ನತ್ತಾರೆ. ವೃಸ್ಚಿಕ ಅಂದರೆ ಚೇಳು, ಹಾಗು ತಂಡೂಲ ಅಂದರೆ ಅಕ್ಕಿ. ಅಂದರೆ “ಜೀವದ ಮೂಲ ಜಡ” - ಇದನ್ನು ವೃಸ್ಚಿಕ-ತಂಡೂಲ-ನ್ಯಾಯ ಎನ್ನತ್ತಾರೆ. ಜೀವವು ಜಡದಿಂದ ಜನಿಸಲಾರದು. ಅದಲ್ಲದೆ… ನೀನು ಹೇಳಿದಹಾಗೆ ಜೀವವಿರುವಾಗ, ಜೀವಾತ್ಮವು, ದೇಹ ಬೆಳೆಯುತ್ತದೆ…ದೇಹ ಬದಲಾಗುತ್ತದೆ ಅಥವ ಬೆಳೆಯುತ್ತದೆ. ಆದರೆ ಮಗು ಮೃತಪಟ್ಟಿದ್ದರೆ ಅಥವ ಮೃತ ದೇಹ ಹೊರಬಂದರೆ, ಆಗ ದೇಹ ಬೆಳೆಯುವುದಿಲ್ಲ. ಆಗ ಜಡವು ಜೀವದ ಮೇಲೆ ಬೆಳೆಯುತ್ತದೆ.