KN/Prabhupada 0129 - ಕೃಷ್ಣನನ್ನು ಅವಲಂಬಿಸಿ - ಯಾವುದೇ ಕೊರತೆ ಇರುವುದಿಲ್ಲ

Revision as of 07:11, 31 March 2021 by Vanibot (talk | contribs) (Vanibot #0005: NavigationArranger - update old navigation bars (prev/next) to reflect new neighboring items)
(diff) ← Older revision | Latest revision (diff) | Newer revision → (diff)


Lecture on SB 7.6.1 -- Vrndavana, December 2, 1975

ಕೃಷ್ಣ ಹೇಳುತ್ತಾನೆ ಮನ್-ಮನಾ ಭವ ಮದ್-ಭಕ್ತೋ ಮದ್-ಯಾಜಿ ಮಾಮ್ ನಮಸ್ಕುರು (ಭ.ಗೀ 9.34). ನಾವು ಇದನ್ನು ಬೋಧಿಸುತ್ತಿದ್ದೇವೆ. ಈ ದೇವಾಲಯದಲ್ಲಿ ನಾವು ಎಲ್ಲರಿಗೂ ಹೇಳುತ್ತಿದ್ದೇವೆ, "ಇಲ್ಲಿ ಕೃಷ್ಣನಿದ್ದಾನೆ. ಯಾವಾಗಲೂ ಕೃಷ್ಣನ ಬಗ್ಗೆ ಯೋಚಿಸಿ. ಹರೇ ಕೃಷ್ಣ ಜಪಿಸಿ.” ಯಾವಾಗಲೂ ಕೃಷ್ಣನ ಬಗ್ಗೆ ಯೋಚಿಸ ಬೇಕು, “ಹರೇ ಕೃಷ್ಣ, ಹರೇ ಕೃಷ್ಣ", ಎಂದರೆ ಕೃಷ್ಣನನ್ನು ಧ್ಯಾನಿಸುವುದು. ನೀವು ಕೃಷ್ಣನ ನಾಮವನ್ನು ಕೇಳಿದ ತಕ್ಷಣ, ಮನ್-ಮನಾ. ಮತ್ತು ಅದನ್ನು ಯಾರು ಮಾಡುತ್ತಾರೆ? ಮದ್-ಭಕ್ತ. ‌ ನೀವು ಕೃಷ್ಣನ ಭಕ್ತರಾಗುವವರೆಗು ನಿಮ್ಮ ಸಮಯವನ್ನು ವ್ಯರ್ಥ ಮಾಡಬಾರದು, "ಕೃಷ್ಣ, ಹರೇ ಕೃಷ್ಣ ಹರೇ ಕೃಷ್ಣ.” ಇದರರ್ಥ ಹರೇ ಕೃಷ್ಣ ಮಂತ್ರವನ್ನು ಕೇವಲ ಜಪಿಸುವುದರ ಮೂಲಕ ನೀವು ಕೃಷ್ಣನ ಭಕ್ತರಾಗುತ್ತೀರಿ. ಮನ್-ಮನಾ ಭವ ಮದ್-ಭಕ್ತೋ ಮದ್-ಯಾಜಿ.

ಈಗ, ಕೃಷ್ಣನ ಈ ಆರಾಧನೆ... ಇಡೀ ದಿನ ಕೃಷ್ಣನಿಗಾಗಿ, ಕೃಷ್ಣನ ಮಂಗಳಾರತಿಗಾಗಿ, ಕೃಷ್ಣ ಜಪಕ್ಕಾಗಿ, ಕೃಷ್ಣನ ಅಡುಗೆಗಾಗಿ, ಕೃಷ್ಣನ ಪ್ರಸಾದ ವಿತರಣೆಗಾಗಿ, ಎಷ್ಟೋ ವಿಧಗಳಲ್ಲಿ ತೊಡಗಿಕೊಂಡಿದ್ದೇವೆ. ಆದ್ದರಿಂದ ಪ್ರಪಂಚದಾದ್ಯಂತದ ನಮ್ಮ ಭಕ್ತರು -102 ಕೇಂದ್ರಗಳಿವೆ - ಅವರು ಕೇವಲ ಕೃಷ್ಣ ಪ್ರಜ್ಞೆಯಲ್ಲಿ ನಿರತರಾಗಿದ್ದಾರೆ. ಇದೇ ನಮ್ಮ ಪ್ರಚಾರ, ಯಾವಾಗಲೂ, ಬೇರೆ ಯಾವುದೇ ವ್ಯವಹಾರವಿಲ್ಲ. ನಾವು ಯಾವುದೇ ವ್ಯವಹಾರವನ್ನು ಮಾಡುವುದಿಲ್ಲ ಆದರೆ ನಾವು ಪ್ರತಿ ತಿಂಗಳು ಕನಿಷ್ಠ ಇಪ್ಪತ್ತೈದು ಲಕ್ಷ ರೂಪಾಯಿಗಳನ್ನು, ಇಪ್ಪತ್ತೈದು ಲಕ್ಷ ರೂಪಾಯಿಗಳನ್ನು ಖರ್ಚು ಮಾಡುತ್ತಿದ್ದೇವೆ, ಆದರೆ ಕೃಷ್ಣ ನೀಡುತ್ತಿದ್ದಾನೆ. ತೇಶಾಮ್ ನಿತ್ಯಾಭಿಯುಕ್ತಾನಾಮ್ ಯೋಗ-ಕ್ಷೇಮಮ್ ವಹಾಮಿ ಅಹಂ (ಭ.ಗೀ 9.22). ನೀವು ಕೃಷ್ಣ ಪ್ರಜ್ಞೆಯಲ್ಲಿದ್ದರೆ, ಕೃಷ್ಣನ ಮೇಲೆ ಸಂಪೂರ್ಣವಾಗಿ ಅವಲಂಬಿತರಾಗಿದ್ದರೆ, ಆಗ ಯಾವುದೇ ಕೊರತೆ ಇರುವುದಿಲ್ಲ. ನಾನು ಈ ಕೃಷ್ಣ ಕಾರ್ಯವನ್ನು ನಲವತ್ತು ರೂಪಾಯಿಗಳೊಂದಿಗೆ ಪ್ರರಂಭಿಸಿದೆ. ಈಗ ನಮ್ಮ ಹತ್ತಿರ ನಲವತ್ತು ಕೋಟಿ ರೂಪಾಯಿಗಳಿವೆ. ಇಡೀ ಜಗತ್ತಿನಲ್ಲಿ, ಹತ್ತು ವರ್ಷಗಳಲ್ಲಿ ನಲವತ್ತು ರೂಪಾಯಿಗಳನ್ನು ನಲವತ್ತು ಕೋಟಿಗಳನ್ನಾಗಿ ಮಾಡಲು ಯಾವುದೇ ಉದ್ಯಮಿಗೆ ಸಾಧ್ಯವೇ? ಯಾವುದೇ ಉದಾಹರಣೆಯಿಲ್ಲ. ಮತ್ತು ಹತ್ತು ಸಾವಿರ ಜನರು ಪ್ರತಿದಿನ ಪ್ರಸಾದವನ್ನು ತಿನ್ನುತ್ತಿದ್ದಾರೆ. ಆದ್ದರಿಂದ ಇದೇ ಕೃಷ್ಣ ಪ್ರಜ್ಞೆ. ಯೋಗ-ಕ್ಷೇಮಮ್ ವಹಾಮಿ ಅಹಮ್ (ಭ.ಗೀ 9.22). ನೀವು ಕೃಷ್ಣ ಪ್ರಜ್ಞಾವಂತರಾದ ತಕ್ಷಣ ಅವನನ್ನು ಅವಲಂಬಿಸಿ, ಪ್ರಾಮಾಣಿಕವಾಗಿ ಕೆಲಸ ಮಾಡಿ, ಕೃಷ್ಣ ಎಲ್ಲವನ್ನೂ ನೀಡುತ್ತಾನೆ. ಎಲ್ಲವೂ.

ಆದ್ದರಿಂದ ಇದು ಪ್ರಾಯೋಗಿಕವಾಗಿ ವ್ಯಕ್ತವಾಗುತ್ತಿದೆ. ಉದಾಹರಣೆಗೆ, ಬಾಂಬೆಯಲ್ಲಿ, ಈಗ ನಮ್ಮ ಭೂಮಿ ಒಂದು ಕೋಟಿ ರೂಪಾಯಿಗಳ ಮೌಲ್ಯದ್ದಾಗಿದೆ. ಮತ್ತು ನಾನು ಈ ಭೂಮಿಯನ್ನು ಖರೀದಿಸಿದಾಗ ಮೂರು ಅಥವಾ ನಾಲ್ಕು ಲಕ್ಷ ಇರಬಹುದು. ಆದ್ದರಿಂದ ಇದು ಸಂಪೂರ್ಣವಾಗಿ ಊಹಾಪೋಹವಾಗಿತ್ತು ಆದರೆ, "ನಾನು ಪಾವತಿಸಲು ಸಾಧ್ಯವಾಗುತ್ತದೆ, ಕೃಷ್ಣ ನನಗೆ ನೀಡುತ್ತಾನೆ", ಎಂದು ನನಗೆ ವಿಶ್ವಾಸವಿತ್ತು. ಹಣವಿರಲಿಲ್ಲ. ಅದೊಂದು ಸುದೀರ್ಘ ಇತಿಹಾಸ. ನಾನು ಚರ್ಚಿಸಲು ಬಯಸುವುದಿಲ್ಲ. ಆದರೆ ನಾನು ಈಗ ನೈಜ ಅನುಭವವನ್ನು ಪಡೆದುಕೊಂಡಿದ್ದೇನೆ - ಕೃಷ್ಣನನ್ನು ಅವಲಂಬಿಸಿ, ಯಾವುದೇ ಕೊರತೆ ಇರುವುದಿಲ್ಲ. ನಿಮಗೆ ಏನು ಬೇಕೋ, ಅದು ನೆರವೇರುತ್ತದೆ. ತೇಶಾಮ್ ನಿತ್ಯಾಭಿಯುಕ್ತಾನಾಮ್. ಆದ್ದರಿಂದ, ಯಾವಾಗಲೂ ಕೃಷ್ಣ ಪ್ರಜ್ಞೆಯಲ್ಲಿ ತೊಡಗಿರಿ. ಆಗ ನಿಮಗಿರುವ ಎಲ್ಲಾ ಆಸೆಯೂ, ಯಾವುದೇ ಇರಲಿ, ಈಡೇರುತ್ತದೆ.