KN/Prabhupada 0139 - ಇದು ಆಧ್ಯಾತ್ಮಿಕ ಸಂಬಂಧ: Difference between revisions

(Created page with "<!-- BEGIN CATEGORY LIST --> Category:1080 Kannada Pages with Videos Category:Prabhupada 0139 - in all Languages Category:KN-Quotes - 1974 Category:KN-Quotes - L...")
 
(Vanibot #0005: NavigationArranger - update old navigation bars (prev/next) to reflect new neighboring items)
 
Line 8: Line 8:
<!-- END CATEGORY LIST -->
<!-- END CATEGORY LIST -->
<!-- BEGIN NAVIGATION BAR -- DO NOT EDIT OR REMOVE -->
<!-- BEGIN NAVIGATION BAR -- DO NOT EDIT OR REMOVE -->
{{1080 videos navigation - All Languages|English|Prabhupada 0138 - God is Very Kind. Whatever You Desire, He Will Fulfill|0138|Prabhupada 0140 - One Path is Pious; One Path is Nonpious - No Third Path|0140}}
{{1080 videos navigation - All Languages|Kannada|KN/Prabhupada 0138 - ಭಗವಂತನು ತುಂಬಾ ಕರುಣಾಮಯಿ. ನೀವು ಏನನ್ನು ಬಯಸಿದರೂ ಅವನು ಪೂರೈಸುವನು|0138|KN/Prabhupada 0140 - ಒಂದು ಮಾರ್ಗವು ಧಾರ್ಮಿಕವಾಗಿದೆ; ಒಂದು ಮಾರ್ಗವು ಅಧಾರ್ಮಿಕವಾಗಿದೆ - ಮೂರನೆಯ ಮಾರ್ಗವಿಲ್ಲ|0140}}
<!-- END NAVIGATION BAR -->
<!-- END NAVIGATION BAR -->
<!-- BEGIN ORIGINAL VANIQUOTES PAGE LINK-->
<!-- BEGIN ORIGINAL VANIQUOTES PAGE LINK-->

Latest revision as of 07:11, 25 May 2021



Lecture on SB 3.25.38 -- Bombay, December 7, 1974

ಆದ್ದರಿಂದ, ನೀವು ಕೃಷ್ಣನನ್ನು ಪ್ರೀತಿಸಿದರೆ, ಭೌತಿಕ ವಸ್ತುಗಳಂತೆ ಯಾವುದೇ ವಿನಾಶ ಇರುವುದಿಲ್ಲ. ಒಂದೋ ನೀವು ಅವನನ್ನು ನಿಮ್ಮ ಯಜಮಾನನಾಗಿ ಪ್ರೀತಿಸುತ್ತೀರಿ... ಇಲ್ಲಿ ಯಜಮಾನ ಅಂದರೆ, ನೀವು ಎಷ್ಟು ದಿನ ಸೇವೆ ಸಲ್ಲಿಸುತ್ತೀರೋ, ಯಜಮಾನ ಸಂತೋಷಪಡುತ್ತಾನೆ. ಮತ್ತು ನೀವು ಸಂಬಳ ಕೊಡುವವರೆಗು ಸೇವಕನು ಸಂತೋಷಪಡುತ್ತಾನೆ. ಆದರೆ ಆಧ್ಯಾತ್ಮಿಕ ಜಗತ್ತಿನಲ್ಲಿ ಅಂತಹ ಯಾವುದೇ ವ್ಯವಹಾರವಿಲ್ಲ. ನಾನು ಕಾರಣಾಂತರಗಳಿಂದ ಸೇವೆ ಸಲ್ಲಿಸಲು ಸಾಧ್ಯವಾಗದಿದ್ದರೂ, ಯಜಮಾನ ಸಂತೋಷಪಡುತ್ತಾನೆ. ಮತ್ತು ಸೇವಕನು, ಯಜಮಾನನು ಸಂಬಳ ಕೊಡದಿದ್ದರೂ ಸಹ ಸಂತೋಷಪಡುತ್ತಾನೆ. ಅದನ್ನು ಪರಿಪೂರ್ಣ ಏಕತೆ ಎಂದು ಕರೆಯಲಾಗುತ್ತದೆ. ಅಂದರೆ... ಇಲ್ಲೇ ಉದಾಹರಣೆ ಇದೆ. ಈ ಸಂಸ್ಥೆಯಲ್ಲಿ ಎಷ್ಟೋ ವಿದ್ಯಾರ್ಥಿಗಳಿದ್ದಾರೆ. ನಾನು ಯಾವುದೇ ರೀತಿಯ ವೇತನವನ್ನು ಕೊಡುತ್ತಿಲ್ಲ, ಆದರೆ ಅವರು ನನಗೆ ಎಲ್ಲ ರೀತಿಯ ಸೇವೆ ಮಾಡುತ್ತಾರೆ. ಇದುವೇ ಆಧ್ಯಾತ್ಮಿಕ ಸಂಬಂಧ. ಆ ಪಂಡಿತ ಜವಹರ್ಲಾಲ್ ನೆಹರು, ಅವರು ಲಂಡನ್‌ನಲ್ಲಿದ್ದಾಗ, ಅವರ ತಂದೆ ಮೋತಿಲಾಲ್ ನೆಹರು ಅವರಿಗೆ ಸೇವಕನನ್ನು ಇಟ್ಟುಕೊಳ್ಳಲು ಮುನ್ನೂರು ರೂಪಾಯಿಗಳನ್ನು ನೀಡಿದರು. ನಂತರ ಒಮ್ಮೆ ಅವರು ಲಂಡನ್‌ಗೆ ಹೋದರು, ಆದರೆ ಸೇವಕನು ಇಲ್ಲ ಎಂಬುದನ್ನು ಗಮನಿಸಿದರು. "ನಿನ್ನ ಸೇವಕ ಎಲ್ಲಿ?" ಎಂದು ಅವರು ಕೇಳಿದರು. ಜವಹರ್ ಹೇಳಿದರು, "ಸೇವಕನ ಉಪಯೋಗವೇನು? ನನಗೆ ಏನೂ ಕೆಲಸವಿಲ್ಲ. ನಾನೇ ಕೆಲಸಗಳನ್ನು ಮಾಡಿಕೊಳ್ಳುತ್ತಿದ್ದೇನೆ." “ಇಲ್ಲ, ಇಲ್ಲ. ಒಬ್ಬ ಆಂಗ್ಲ ವ್ಯಕ್ತಿ ನಿನ್ನ ಸೇವಕನಾಗಿರಬೇಕೆಂಬುದು ನನ್ನ ಬಯಕೆಯಾಗಿತ್ತು.” ಅಂದರೆ, ಅವನು ಸಂಬಳ ಕೊಡಬೇಕಾಗುತ್ತದೆ. ಇದೊಂದು ಉದಾಹರಣೆ. ನಾನು ವೇತನ ಕೊಡಬೇಕಾಗದ ನೂರಾರು ಮತ್ತು ಸಾವಿರಾರು ಸೇವಕರನ್ನು ಪಡೆದುಕೊಂಡಿದ್ದೇನೆ. ಇದುವೇ ಆಧ್ಯಾತ್ಮಿಕ ಸಂಬಂಧ. ಇದೇ ಆಧ್ಯಾತ್ಮಿಕ ಸಂಬಂಧ. ಅವರು ಸೇವೆ ಸಲ್ಲಿಸುತ್ತಿರುವುದು ಸಂಬಳಕ್ಕಾಗಿ ಅಲ್ಲ. ನನ್ನ ಬಳಿ ಏನಿದೆ? ನಾನು ಬಡ ಭಾರತೀಯ. ನಾನೇನು ಕೊಡಬಲ್ಲೆ? ಆದರೆ ಸೇವಕನು ಪ್ರೀತಿಯಿಂದ ಸೇವೆಮಾಡುತ್ತಿದ್ದಾನೆ, ಆಧ್ಯಾತ್ಮಿಕ ಪ್ರೀತಿಯಿಂದ. ಮತ್ತು ನಾನು ಕೂಡ ಅವರಿಗೆ ಯಾವುದೇ ಸಂಬಳವಿಲ್ಲದೆ ಕಲಿಸುತ್ತಿದ್ದೇನೆ. ಇದು ಆಧ್ಯಾತ್ಮಿಕ. ಪೂರ್ಣಸ್ಯ ಪೂರ್ಣಮ್ ಆದಾಯ (ಈಶೋ. ಪ್ರಾರ್ಥನೆ). ಎಲ್ಲವೂ ಸಂಪೂರ್ಣವಾಗಿದೆ. ಆದ್ದರಿಂದ, ನೀವು ಕೃಷ್ಣನನ್ನು ನಿಮ್ಮ ಮಗನಾಗಿ, ನಿಮ್ಮ ಸ್ನೇಹಿತನಾಗಿ, ನಿಮ್ಮ ಪ್ರೇಮಿಯಂತೆ ಸ್ವೀಕರಿಸಿದರೆ, ನೀವು ಎಂದಿಗೂ ಮೋಸ ಹೋಗುವುದಿಲ್ಲ. ಆದ್ದರಿಂದ, ಕೃಷ್ಣನನ್ನು ಸ್ವೀಕರಿಸಲು ಪ್ರಯತ್ನಿಸಿ. ಈ ಸುಳ್ಳು, ಭ್ರಾಂತಿಯ ಸೇವಕ, ಅಥವಾ ಮಗ, ಅಥವಾ ತಂದೆ, ಅಥವಾ ಪ್ರೇಮಿಯನ್ನು ಬಿಟ್ಟುಬಿಡಿ. ನೀವು ಮೋಸ ಹೋಗುತ್ತೀರಿ.