KN/Prabhupada 1058 - ಭಗವದ್ಗೀತೆಯನ್ನು ಹೇಳಿದಾತ ಶ್ರೀ ಕೃಷ್ಣ

Revision as of 04:13, 12 July 2019 by Vanibot (talk | contribs) (Vanibot #0023: VideoLocalizer - changed YouTube player to show hard-coded subtitles version)
(diff) ← Older revision | Latest revision (diff) | Newer revision → (diff)


660219-20 - Lecture BG Introduction - New York

ಭಗವದ್ಗೀತೆಯನ್ನು ಹೇಳಿದಾತ ಶ್ರೀ ಕೃಷ್ಣ. ಗೀತೆಯ ಪ್ರತಿಯೊಂದು ಪುಟದಲ್ಲಿಯೂ ಆತನನ್ನು ದೇವೋತ್ತಮ ಪರಮ ಪುರುಷನೆಂದು, ಭಗವಾನ್ ಎಂದು ವರ್ಣಿಸಿದೆ. ಕೆಲವೊಮ್ಮೆ ಭಗವಾನ್ ಎನ್ನುವ ಪದವು ಒಬ್ಬ ಶಕ್ತಿಸಾಲಿಯಾದ ವ್ಯಕ್ತಿಗೆ ಅಥವಾ ಒಬ್ಬ ಪ್ರಬಲ ದೇವತೆಗೆ ಅನ್ವಯಿಸುತ್ತದೆ. ಆದರೆ ಇಲ್ಲಿ ಭಗವಾನ್ ಎನ್ನುವ ಪದವು ಶ್ರೀ ಕೃಷ್ಣನನ್ನು ಮಹಾ ಪುರುಷನೆಂದು ಹೆಸರಿಸುತ್ತದೆ. ಅದೇ ಸಮಯದಲ್ಲಿ ನಾವು ಶ್ರೀ ಕೃಷ್ಣನನ್ನು ಆಚಾರ್ಯರು ಧೃಡಪಡಿಸಿರುವಂತೆ ತಿಳಿದುಕೊಳ್ಳಬೇಕು. ಇದನ್ನು ಶಂಕರಾಚಾರ್ಯ, ರಾಮಾನುಜಾಚಾರ್ಯ, ಮಧ್ವಾಚಾರ್ಯ, ನಿಂಬಾರ್ಕ ಸ್ವಾಮಿ, ಶ್ರೀ ಚೈತನ್ಯ ಮಹಾಪ್ರಭು, ಇವರಂಥ ಶ್ರೇಷ್ಟ ಆಚಾರ್ಯರೂ, ಭಾರತದಲ್ಲಿ ವೈದಿಕ ಜ್ಞಾನದಲ್ಲಿ ಅಧಿಕೃತರಾದ ವಿದ್ವಾಂಸರು ಮತ್ತು ಆಚಾರ್ಯರೂ, ಅಂದರೆ ವೈದಿಕ ಜ್ಞಾನದಲ್ಲಿ ಅಧಿಕೃತರಾದವರು, ಶಂಕರಾಚಾರ್ಯರೂ ಸೇರಿದಂತೆ ಎಲ್ಲರೂ ಶ್ರೀ ಕೃಷ್ಣ ದೇವೋತ್ತಮ ಪರಮ ಪುರುಷನೆಂದು ಅಂಗೀಕರಿಸಿದ್ದಾರೆ. ಭಗವಂತನೇ ಭಗವದ್ಗೀತೆಯಲ್ಲಿ ತನ್ನನ್ನು ದೇವೋತ್ತಮ ಪರಮ ಪುರುಷನೆಂದು ಸ್ಥಾಪಿಸಿಕೊಂಡಿದ್ದಾನೆ. ಆತನನ್ನು ಪರಮ ಪುರುಷನೆಂದು ಬ್ರಹ್ಮಾಸಂಹಿತೆಯೂ, ಎಲ್ಲಾ ಪುರಾಣಗಳೂ,ಶ್ರೀ ಮದ್ ಭಾಗವತವೂ ಒಪ್ಪಿಕೊಂಡಿವೆ ಕೃಷ್ನಸ್ತು ಭಗವಾನ್ ಸ್ವಯಂ (ಶ್ರೀ ಭಾಗ 1.3.28) ಆದುದರಿಂದ ನಾವು ಭಗವದ್ಗೀತೆಯನ್ನು ಸ್ವಯಂ ಪರಮ ಪುರುಷ ನಿರ್ದೇಶಿಸಿರುವಂತೆ ಸ್ವೀಕರಿಸಬೇಕು. ಭಗವದ್ಗೀತೆಯ ನಾಲ್ಕನೇ ಅಧ್ಯಾಯದಲ್ಲಿ ಹೀಗೆ ಹೇಳಿದ್ದಾನೆ. ಇಮಂ ವಿವಸ್ವತೇ ಯೋಗಂ ಪ್ರೊಕ್ತವಾನ್ ಅಹಂ ಅವ್ಯಯಂ ವಿವಸ್ವಾನ್ ಮನವೇ ಪ್ರಾಹ ಮನುರ್ ಇಕ್ಷ್ವಾಕವೇಬ್ರವೀತ್ ಏವಂ ಪರಂಪರಾ ಪ್ರಾಪ್ತಂ ಇಮಂ ರಾಜರ್ಷಯೋ ವಿದುಃ ಸ ಕಾಲೇನೇಹ ಮಹತಾ ಯೋಗೋ ನಷ್ಟ ಪರಂತಪ ಸ ಏವಾಯಂ ಮಾಯಾ ತೇದ್ಯ ಯೋಗಃ ಪ್ರೊಕ್ತಃ ಪುರಾತನಃ ಭಕ್ತೋ ಸಿ ಮೇ ಸಖಾ ಚೇತಿ ರಹಸ್ಯಂ ಹ್ಯೇತದ ಉತ್ತಮಂ (ಭ ಗೀತೆ 4.1 - 4.3) ಭಗವಂತನು ಅರ್ಜುನನಿಗೆ ಈ ಯೋಗ ಪಧ್ಧತಿಯನ್ನು (ಭಗವದ್ಗೀತೆಯನ್ನು) ಮೊದಲು ನಾನು ಸೂರ್ಯದೇವನಿಗೆ ಹೇಳಿದನು. ಸೂರ್ಯದೇವನು ಮನುವಿಗೆ ಹೇಳಿದನು. ಮನು ಇಕ್ಷ್ವಾಕುವಿಗೆ ಹೇಳಿದನು. ಈ ರೀತಿಯಲ್ಲಿ ಪರಂಪರೆಯಲ್ಲಿ ಈ ಯೋಗ ಪಧ್ಧತಿಯು ಸಾಗಿ ಬಂದಿದೆ. ಕಾಲ ಕಳೆದಂತೆ ನಷ್ಟವಾಯಿತು. ಆದ್ದರಿಂದ ನಾನು ಮರಳಿ ಅದೇ ಯೋಗ ಪಧ್ಧತಿಯನ್ನು ಹೇಳುತ್ತಿದ್ದೇನೆ. ಅದೇ ಹಳೆಯ ಭಗವದ್ಗೀತೆ ಅಥವಾ ಗೀತೋಪನಿಷದ್. ಏಕೆಂದರೆ ನೀನು ನನ್ನ ಭಕ್ತ ಮತ್ತು ಗೆಳೆಯ. ಆದ್ದರಿಂದ ನಿನಗೆ ಮಾತ್ರ ಇದನ್ನು ಅರ್ಥ ಮಾಡಿಕೊಳ್ಳಲು ಸಾಧ್ಯ. ಇದರ ಭಾವಾರ್ಥವೆಂದರೆ ಭಗವದ್ಗೀತೆಯು ಭಕ್ತರಿಗಾಗಿಯೇ ಇರುವಂತಹ ಶಾಸ್ತ್ರ. ಅಧ್ಯಾತ್ಮಿಕವಾದಿಗಳಲ್ಲಿ ಮೂರು ವಿಧ - ಜ್ಞಾನಿ, ಯೋಗಿ, ಮತ್ತು ಭಕ್ತ. ಮಾಯವಾದಿ, ಧ್ಯಾನಿಸುವವನು, ಮತ್ತು ಭಕ್ತ. ಕೃಷ್ಣ ಅರ್ಜುನನಿಗೆ ಇಲ್ಲಿ ನಾನು ನಿನ್ನನ್ನು ಪರಂಪರೆಯ ಮೊದಲ ವ್ಯಕ್ತಿ ಮಾಡುತ್ತಿದ್ದೇನೆ ಏಕೆಂದರೆ ಹಳೆಯ ಪರಂಪರೆ ಮುರಿದು ಹೋಗಿದೆ. ಇನ್ನೊಂದು ಪರಂಪರೆಯನ್ನು ಸೂರ್ಯದೇವನಿಂದ ಸಾಗಿ ಬಂದ ರೀತಿಯಲ್ಲೇಸ್ಥಾಪಿಸಲು ಇಚ್ಚಿಸುತ್ತೇನೆ. ಆದುದರಿಂದ ನೀನು ಇದನ್ನು ತೆಗೆದುಕೊ ಮತ್ತು ಬೇರೆಯವರಿಗೆ ಹಂಚು ಎಂದನು. ಭಗವದ್ಗೀತೆಯ ಯೋಗಪಧ್ಧತಿಯು ನಿನ್ನಿಂದ ಹಂಚಲ್ಪಡುತ್ತದೆ. ಭಗವದ್ಗೀತೆಯನ್ನು ಅರ್ಥಮಾಡಿಕೊಳ್ಳುವ ಅಧಿಕೃತ ವ್ಯಕ್ತಿ ನೀನಾಗು. ನಾವು ಇಲ್ಲಿ ಭಗವದ್ಗೀತೆಯನ್ನು ಅರ್ಜುನನಿಗೆ ನಿರ್ದೇಶಿಸಿರುವ ಮಾರ್ಗವನ್ನು ನೋಡಬಹುದು. ಅರ್ಜುನ ಕೃಷ್ಣನ ಭಕ್ತ ಹಾಗೂ ನೇರ ವಿದ್ಯಾರ್ಥಿಯಾಗಿದ್ದ. ಅದೇ ಅಲ್ಲದೆ ಕೃಷ್ಣನ ಸ್ನೇಹಿತನಾಗಿ ಬಹಳ ನಿಕಟವಾಗಿದ್ದ. ಆದ್ದರಿಂದ ಅರ್ಜುನನಂತಹ ಗುಣಗಳಿರುವ ವ್ಯಕ್ತಿ ಮಾತ್ರ ಭಗವದ್ಗೀತೆಯನ್ನು ಅರ್ಥಮಾಡಿಕೊಳ್ಳಬಲ್ಲ. ಅಂದರೆ ಅವನು ಭಕ್ತನಾಗಿರಬೇಕು. ಅವನು ಭಗವಂತನೊಡನೆ ನೇರ ಸಂಗದಲ್ಲಿರಬೇಕು.