KN/Prabhupada 1070 - ಸೇವೆ ಮಾಡುವುದೇ ಜೀವಿಯ ಶಾಶ್ವತವಾದ ಧರ್ಮ

Revision as of 17:06, 18 May 2015 by Visnu Murti (talk | contribs) (Created page with "<!-- BEGIN CATEGORY LIST --> Category:1080 Kannada Pages with Videos Category:Prabhupada 1070 - in all Languages Category:KN-Quotes - 1966 Category:KN-Quotes - L...")
(diff) ← Older revision | Latest revision (diff) | Newer revision → (diff)


Invalid source, must be from amazon or causelessmery.com

660219-20
- Lecture BG Introduction - New York

ಸನಾತನ ಧರ್ಮದ ಪರಿಕಲ್ಪನೆಯ ವಿಷಯದಲ್ಲಿ ನಾವು ಸಂಸ್ಕೃತದಲ್ಲಿ ಆ ಪದದ ಮೂಲವನ್ನು ಗಮನಿಸಿ ಧರ್ಮದ ಕಲ್ಪನೆಯನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಬೇಕು. ಎಂದರೆ ಯಾವುದು ನಿರ್ದಿಷ್ಟ ವಸ್ತುವಿನೊಂದಿಗೆ ಯಾವುದು ನಿರಂತರವಾಗಿರುತ್ತದೋ ಅದು ಧರ್ಮ. ನಾವು ಆಗಲೇ ತಿಳಿಸಿರುವಂತೆ, ನಾವು ಯಾವಾಗ ಬೆಂಕಿಯ ಬಗ್ಗೆ ಮಾತಾಡುತ್ತೇವೋ ಅದರ ಜೊತೆ ಶಾಖ ಮತ್ತು ಬೆಳಕು ಇದೆ ಎಂದರ್ಥ. ಶಾಖ ಮತ್ತು ಬೆಳಕು ಇಲ್ಲದೆ ಬೆಂಕಿ ಎನ್ನುವುದಕ್ಕೆ ಅರ್ಥವಿಲ್ಲ ಇದೇ ರೀತಿ, ನಾವು ಜೀವಿಯ ಸಾರಭೂತವಾದ ಭಾಗವನ್ನು, ಅವನ ನಿರಂತರ ಸಂಗಾತಿಯಾದ ಭಾಗವನ್ನು ಕಂಡುಕೊಳ್ಳಬೇಕು. ಈ ನಿರಂತರ ಸಂಗಾತಿಯೇ ಅವನ ಸನಾತನ ಗುಣ ಮತ್ತು ಆ ಸನಾತನ ಗುಣವೇ ಅವನ ಸನಾತನ ಧರ್ಮ. ಸನಾತನ ಗೋಸ್ವಾಮಿಯವರು ಪ್ರತಿಯೊಂದು ಜೀವಿಯ ಸ್ವರೂಪವನ್ನು ಕುರಿತು ಶ್ರೀ ಚೈತನ್ಯ ಮಹಾಪ್ರಭುಗಳನ್ನು ಪ್ರಶ್ನಿಸಿದಾಗ, ನಾವು ಆಗಲೇ ಪ್ರತಿಯೊಂದು ಜೀವಿಯ ಸ್ವರೂಪವನ್ನು ಕುರಿತು ಚರ್ಚಿಸಿದ್ದೇವೆ, ಜೀವಿಯ ನಿಜವಾದ ಸ್ವರೂಪವೆಂದರೆ ದೇವೋತ್ತಮ ಪರಮ ಪುರುಷನಿಗೆ ಸೇವೆ ಮಾಡುವುದೇ ಜೀವಿಯ ನಿಜವಾದ ಸ್ವರೂಪವೆಂದು ಮಹಾಪ್ರಭುಗಳು ಉತ್ತರಿಸಿದರು. ಶ್ರೀ ಚೈತನ್ಯ ಮಹಾಪ್ರಭುಗಳ ಈ ಮಾತನ್ನು ನಾವು ವಿಶ್ಲೇಷಿಸಿ ನೋಡಿದರೆ ಪ್ರತಿಯೊಬ್ಬ ಜೀವಿಯು ಮತ್ತೊಬ್ಬ ಜೀವಿಯ ಸೇವೆಯಲ್ಲೇ ಸದಾ ನಿರತನಾಗಿರುತ್ತಾನೆ ಎಂದು ಚೆನ್ನಾಗಿ ಅರ್ಥಮಾಡಿಕೊಳ್ಳಬಹುದು. ಒಬ್ಬ ಜೀವಿಯು ಇನ್ನೊಬ್ಬ ಜೀವಿಗೆ ಹಲವು ರೀತಿಗಳಲ್ಲಿ ಸೇವೆ ಮಾಡುತ್ತಾನೆ. ಮತ್ತು ಹಾಗೆ ಮಾಡುವುದರಿಂದ ಜೀವಿಯು ಬದುಕನ್ನು ಸವಿಯುತ್ತಾನೆ. ಕೆಳಮಟ್ಟದ ಪ್ರಾಣಿಗಳು ಮನುಷ್ಯರಿಗೆ ಸೇವೆ ಮಾಡುತ್ತದೆ. ಸೇವಕ ತನ್ನ ಓಡೆಯನಿಗೆ ಸೇವೆ ಸಲ್ಲಿಸುತ್ತಾನೆ. "ಎ" ಯು ತನ್ನ ಒಡೆಯ "ಬಿ" ಗೆ ಸೇವೆ ಮಾಡುತ್ತಾನೆ. "ಬಿ" ಯು ತನ್ನ ಒಡೆಯ "ಸಿ" ಗೆ ಸೇವೆ ಮಾಡುತ್ತಾನೆ. "ಸಿ" ಯು ತನ್ನ ಒಡೆಯ "ಡಿ" ಗೆ ಸೇವೆ ಮಾಡುತ್ತಾನೆ. ಈ ಸನ್ನಿವೇಶದಲ್ಲಿ ಒಬ್ಬ ಸ್ನೇಹಿತ ಇನ್ನೊಬ್ಬ ಸ್ನೇಹಿತನಿಗೆ ಸೇವೆ ಮಾಡುತ್ತಾನೆ, ತಾಯಿ ಮಗುವಿಗೆ ಸೇವೆ ಮಾಡುತ್ತಾಳೆ, ಹೆಂಡತಿ ಗಂಡನಿಗೆ ಸೇವೆ ಮಾಡುತ್ತಾಳೆ, ಗಂಡ ಹೆಂಡತಿಗೆ ಸೇವೆ ಮಾಡುತ್ತಾನೆ, ಇತ್ಯಾದಿಗಳನ್ನು ಕಾಣಬಹುದು. ಇದೇ ರೀತಿಯಲ್ಲಿ ನಾವು ಹುಡುಕುತ್ತಾ ಹೋದರೆ ಜೀವಿಗಳ ಸಮಾಜದಲ್ಲಿ ಸೇವೆಯ ಕಾರ್ಯಕ್ಕೆ ಹೊರತಾದ ಜೀವ ಎನ್ನುವುದೇ ಇಲ್ಲ ಎನ್ನುವುದನ್ನು ಕಾಣುತ್ತೇವೆ. ತನ್ನ ಸೇವಾ ಸಾಮರ್ಥ್ಯದಲ್ಲಿ ಜನತೆಗೆ ನಂಬಿಕೆಯನ್ನು ಹುಟ್ಟಿಸುವುದಕ್ಕೋಸ್ಕರ ರಾಜಕಾರಣಿಯು ತನ್ನ ಪ್ರಣಾಳಿಕೆಯನ್ನು ಪ್ರಕಟಿಸುತ್ತಾನೆ. ಆತನು ಮೌಲ್ಯವಾದ ಸೇವೆಯನ್ನು ಮಾಡುತ್ತಾನೆ ಎಂದು ನಂಬಿ ಮತದಾರರು ರಾಜಕಾರಣಿಗೆ ತಮ್ಮ ಮತಗಳನ್ನು ನೀಡುತ್ತಾರೆ. ಅಂಗಡಿಯವನು ಗಿರಾಕಿಯ ಸೇವೆಯನ್ನು ಮಾಡುತ್ತಾನೆ. ಕುಶಲಕರ್ಮಿಯು ಬಂಡವಾಳಗಾರನ ಸೇವೆ ಮಾಡುತ್ತಾನೆ. ಬಂಡವಾಳಗಾರನು ತನ್ನ ಕುಟುಂಬದ ಸೇವೆ ಮಾಡುತ್ತಾನೆ. ಸನಾತನ ಜೀವಿಯು ಸನಾತನ ಸಾಮರ್ಥ್ಯಕ್ಕನುಗುಣವಾಗಿ ಕುಟುಂಬವು ಮುಖ್ಯಸ್ಥರಿಗೆ ಸೇವೆ ಮಾಡುತ್ತದೆ. ಹೀಗೆ ಇತರ ಜೀವಿಗಳಿಗೆ ಸೇವೆ ಸಲ್ಲಿಸುವುದರಿಂದ ಯಾವ ಜೀವಿಯೂ ಹೊರತಾಗಿಲ್ಲ ಎನ್ನುವುದನ್ನು ಕಾಣುತ್ತೇವೆ. ಆದುದರಿಂದ ಸೇವೆ ಮಾಡುವುದೇ ಜೀವಿಯ ನಿರಂತರ ಸಂಗಾತಿ ಮತ್ತು ಸೇವೆ ಮಾಡುವುದೇ ಜೀವಿಯ ಸನಾತನ ಧರ್ಮ ಎಂದು ನಾವು ಖಂಡಿತವಾಗಿಯೂ ತೀರ್ಮಾನಿಸಬಹುದು. ಆದರೂ ಮನುಷ್ಯನು ಜನ್ಮಕ್ಕೆ ಅನುಗುಣವಾಗಿ ಒಂದು ನಿರ್ದಿಷ್ಟ ಕಾಲದಲ್ಲಿ ಒಂದು ನಿರ್ದಿಷ್ಟ ಬಗೆಯ ಶ್ರದ್ದೆಗೆ ತಾನು ಸೇರಿದವನು ಎಂದು ಹೇಳುತ್ತಾನೆ ಮತ್ತು ತಾನು ಒಬ್ಬ ಹಿಂದೂ, ಮುಸ್ಲಿಂ, ಕ್ರೈಸ್ತ, ಬೌದ್ಧ, ಅಥವಾ ಬೇರಾವುದೋ ಪಂಥವನ್ನು ಅನುಸರಿಸುತ್ತೇನೆ ಎಂದು ಹೇಳಿಕೊಳ್ಳುತ್ತಾನೆ. ಇಂತಹವು ಅ-ಸನಾತನ ಧರ್ಮದ ಹೆಸರುಗಳು. ಹಿಂದುವೊಬ್ಬನು ತನ್ನ ಮತವನ್ನು ಬದಲಾಯಿಸಿ ಮುಸ್ಲಿಂ ಆಗಬಹುದು ಅಥವಾ ಮುಸ್ಲಿಂವೊಬ್ಬನು ತನ್ನ ಮತವನ್ನು ಬದಲಾಯಿಸಿ ಹಿಂದೂ ಆಗಬಹುದು ಅಥವಾ ಕ್ರೈಸ್ತನೊಬ್ಬ ತನ್ನ ಮತವನ್ನು ಬದಲಾಯಿಸಬಹುದು ಇತ್ಯಾದಿ. ಆದರೆ ಎಲ್ಲಾ ಸನ್ನಿವೇಶಗಳಲ್ಲಿಯೂ ಮತದ ಬದಲಾವಣೆಯು ಇತರರ ಸೇವೆ ಮಾಡುವ ಸನಾತನ ಧರ್ಮದ ಮೇಲೆ ಪ್ರಭಾವ ಬೀರುವುದಿಲ್ಲ. ಎಲ್ಲಾ ಸನ್ನಿವೇಶಗಳಲ್ಲಿಯೂ ಹಿಂದೂ, ಮುಸ್ಲಿಂ, ಅಥವಾ ಕ್ರೈಸ್ತನು ಇನ್ನೊಬ್ಬನ ಸೇವಕ. ಆದುದರಿಂದ ಯಾವುದೋ ಒಂದು ಮತಕ್ಕೆ ಸೇರಿದವನು ಎಂದು ಹೇಳಿಕೊಂಡರೆ ಸನಾತನ ಧರ್ಮಕ್ಕೆ ಸೇರಿದವನು ಎಂದರ್ಥವಲ್ಲ. ಜೀವಿಯ ನಿತ್ಯ ಸಂಗಾತಿಯಾದ ಸೇವೆ ಮಾಡುವುದೇ ಸನಾತನ ಧರ್ಮ. ವಾಸ್ತವವಾಗಿ ನಮಗೆ ಭಗವಂತನೊಡನೆ ಸೇವೆಯ ಬಾಂದವ್ಯವಿದೆ. ಭಗವಂತನೇ ಪರಮ ಭೋಕ್ತಾರ. ಜೀವಿಗಳಾದ ನಾವೆಲ್ಲ ಅವನ ಸೇವಕರು. ನಾವೆಲ್ಲ ಸೃಷ್ಟಿಯಾಗಿರುವುದು ಅವನ ಭೋಗಕ್ಕಾಗಿಯೇ. ಆ ದೇವೋತ್ತಮ ಪರಮ ಪುರುಷನ ಸನಾತನ ಭೋಗದಲ್ಲಿ ನಾವೂ ಭಾಗಿಗಳಾದರೆ ನಾವು ಸುಖವಾಗಿರುತ್ತೇವೆ. ಬೇರೆ ರೀತಿಯಲ್ಲಿ ಸುಖವಾಗಿರುವುದು ಸಾಧ್ಯವಿಲ್ಲ ಸ್ವತಂತ್ರವಾಗಿ, ನಾವು ಮೊದಲೇ ವಿವರಿಸಿದಂತೆ, ಸ್ವತಂತ್ರವಾಗಿ ಹೊಟ್ಟೆಯೊಡನೆ ಸಹಕರಿಸದೆ ದೇಹದ ಯಾವುದೇ ಭಾಗವು, ಕೈ, ಕಾಲುಗಳು, ಬೆರಳುಗಳು ಹೇಗೆ ಸುಖಿಯಾಗಲು ಸಾಧ್ಯವಿಲ್ಲವೋ ಹಾಗೆಯೇ ನಾವು ಸ್ವತಂತ್ರವಾಗಿ ಭಗವಂತನಿಗೆ ಅಲೌಕಿಕವಾದ ಪ್ರೀತಿಯ ಸೇವೆಯನ್ನು ಅರ್ಪಿಸದೆ ಸುಖವಾಗಿರುವುದು ಸಾಧ್ಯವಿಲ್ಲ. ಭಗವದ್ಗೀತೆಯಲ್ಲಿ ಬೇರೆ ಬೇರೆ ದೇವತೆಗಳನ್ನು ಪೂಜಿಸುವುದನ್ನು ಅನುಮೋದಿಸಿಲ್ಲ ಏಕೆಂದರೆ ಭಗವದ್ಗೀತೆಯ ಏಳನೆಯ ಅಧ್ಯಾಯದ ಇಪ್ಪತ್ತನೆಯ ಶ್ಲೋಕದಲ್ಲಿ ಭಗವಂತ ಹೀಗೆ ಹೇಳಿದ್ದಾರೆ. ಕಾಮಸ್ ತೈಸ್ ತೈರ್ ಹೃತಜ್ಞಾನಃ ಪ್ರಪದ್ಯ0ತೇ ಅನ್ಯ ದೇವತಾಃ ಕಾಮಸ್ ತೈಸ್ ತೈರ್ ಹೃತಜ್ಞಾನಃ , ಯಾರು ಕಾಮವನ್ನು ಅನುಸರಿಸುತ್ತಾರೋ ಅವರು ಮಾತ್ರ ಪರಮ ಪುರುಷ ಶ್ರೀ ಕೃಷ್ಣನನ್ನು ಬಿಟ್ಟು ದೇವತೆಗಳನ್ನು ಪೂಜಿಸುತ್ತಾರೆ.