KN/Prabhupada 1078 - ಮನಸ್ಸು ಮತ್ತು ಬುದ್ಧಿಯನ್ನು 24ಗಂಟೆಗಳೂ ಭಗವಂತನ ವಿಚಾರದಲ್ಲಿ ಲೀನಮಾಡುವುದು

Revision as of 15:32, 24 May 2015 by Visnu Murti (talk | contribs) (Created page with "<!-- BEGIN CATEGORY LIST --> Category:1080 Kannada Pages with Videos Category:Prabhupada 1078 - in all Languages Category:KN-Quotes - 1966 Category:KN-Quotes - L...")
(diff) ← Older revision | Latest revision (diff) | Newer revision → (diff)


Invalid source, must be from amazon or causelessmery.com

660219-20 - Lecture BG Introduction - New York

ಯಾವಾಗ ನಮಗೆ ಭಗವಂತನ ಮೇಲೆ ಅಗಾಢ ಪ್ರೇಮವಿರುತ್ತದೋ, ಆಗ ಮಾತ್ರ ನಮಗೆ ನಮ್ಮ ಕರ್ತವ್ಯಗಳನ್ನು ಮಾಡುತ್ತಾ ಸದಾ ಭಗವಂತನನ್ನು ಸ್ಮರಿಸಲು ಸಾಧ್ಯವಾಗುತ್ತದೆ. ನಾವು ಈ ಪ್ರೇಮಾಭಾವವನ್ನು ಬೆಳೆಸಿಕೊಳ್ಳಬೇಕು, ಅರ್ಜುನನು ಸದಾ ಭಗವಂತನ ಚಿಂತನೆಯನ್ನು ಮಾಡುತ್ತಿದ್ದನು. 24 ಗಂಟೆಗಳಲ್ಲಿ ಒಂದು ಕ್ಷಣವೂ ಕೂಡ ಕೃಷ್ಣನನ್ನು ಮರೆಯಲಿಲ್ಲ. ಅರ್ಜುನನು ಕೃಷ್ಣನ ನಿತ್ಯ ಸಂಗಾತಿ ಹಾಗೂ ಕ್ಷತ್ರಿಯ. ಕೃಷ್ಣನನು ಅರ್ಜುನನಿಗೆ ಯುದ್ಧವನ್ನು ಬಿಡಲು ಸಲಹೆ ಮಾಡಲಿಲ್ಲ. ಕಾಡಿಗೆ, ಹಿಮಾಲಯಕ್ಕೆ ಹೋಗಿ ಧ್ಯಾನಿಸು ಎಂದೂ ಹೇಳಲಿಲ್ಲ. ಯೋಗಪದ್ಧತಿಯನ್ನು ತಿಳಿಸಿದಾಗ ಅರ್ಜುನನು "ಈ ಪದ್ಧತಿಯು ನನ್ನಿಂದ ಸಾಧ್ಯವಿಲ್ಲ" ಎಂದು ತಿರಸ್ಕರಿಸಿದನು. ನಂತರ ಭಗವಂತ "ಯೋಗಿನಾಮಪಿ ಸರ್ವೇಷಾಂ ಮದ್ಗಥೆ ಅಂತರಾತ್ಮನ (ಭ ಗೀತೆ 6.47) ಎಂದನು. ಮದ್ಗಥೆ ಅಂತರಾತ್ಮನ, ಶ್ರದ್ಧವಾನ್ ಭಜತೆ ಯೋ ಮಾಂ ಸ ಮೇ ಯುಕ್ತ ತಮೋ ಮತಃ ಆದ್ದರಿಂದ ಯಾರು ಭಗವಂತನನ್ನು ಕುರಿತು ಸದಾ ಚಿಂತಿಸುತ್ತಾರೋ ಅವರೇ ಅತ್ಯಂತ ಶ್ರೇಷ್ಟ ಯೋಗಿ. ಅವನೇ ಪರಮ ಜ್ಞಾನಿ ಹಾಗೂ ಪರಮ ಭಕ್ತ. ಭಗವಂತ ತಸ್ಮಾತ್ ಸರ್ವೇಶು ಕಾಲೇಷು ಮಾಂ ಅನುಸ್ಮರ ಯುಧ್ಧ್ಯ ಚ ಎಂದಿದ್ದಾನೆ (ಭ ಗೀತೆ 8.7) ಕ್ಷತ್ರಿಯನಾಗಿ ಯುದ್ಧ ಮಾಡುವ ವೃತ್ತಿಯನ್ನು ಬಿಡಲಾಗುವುದಿಲ್ಲ, ಯುದ್ಧ ಮಾಡಲೇಬೇಕು. ಅದೇ ಸಮಯದಲ್ಲಿ ನನ್ನನ್ನು ಸ್ಮರಿಸುವ ಅಭ್ಯಾಸವನ್ನು ಮಾಡಬೇಕು. ಅಂತಕಾಲೇ ಚ ಸ್ಮರನ್, ಆಗ ಮರಣ ಕಾಲ್ದಲ್ಲಿ ನನ್ನನ್ನು ಸ್ಮರಿಸಲು ಸಾಧ್ಯ. ಮಯಿ ಅರ್ಪಿತ ಮನೋ ಬುದ್ಧಿರ್ ಮಾಂ ಏವೈಷ್ಯಾಸಿ ಅಸಂಶಯಃ ಇದರಲ್ಲಿ ಸಂಶಯವಿಲ್ಲವೆಂದು ಮತ್ತೆ ಹೇಳುತ್ತಿದ್ದಾನೆ. ಒಬ್ಬನು ಭಗವಂತನ ಸೇವೆಯಲ್ಲಿ ಸಂಪೂರ್ಣವಾಗಿ ಶರಣಾದರೆ ಭಗವಂತನ ಆಧ್ಯಾತ್ಮಿಕ ಪ್ರೇಮಮಯ ಸೇವೆಯಲ್ಲಿ, ಮಯಿ ಅರ್ಪಿತ ಮನೋ ಬುದ್ಧಿರ್ ಏಕೆಂದರೆ, ವಾಸ್ತವಿಕದಲ್ಲಿ, ನಾವು ನಮ್ಮ ದೇಹದಿಂದ ಅಲ್ಲ, ಮನಸ್ಸು ಮತ್ತು ಬುಧ್ಧಿಯಿಂದ ಕೆಲಸ ಮಾಡುತ್ತೇವೆ. ನಮ್ಮ ಮನಸ್ಸು ಮತ್ತು ಬುಧ್ಧಿ ಯಾವಾಗ ಭಗವಂತನ ಚಿಂತನೆಯಲ್ಲಿ ತೊಡಗಿರುತ್ತದೋ ಆಗ ಸಹಜವಾಗಿ ನಮ್ಮ ಇಂದ್ರಿಯಗಳು ಕೂಡ ಭಗವಂತನ ಸೇವೆಯಲ್ಲಿ ತೊಡಗುತ್ತದೆ. ಇದು ಭಗವದ್ಗೀತೆಯ ರಹಸ್ಯ. ನಾವು ಮನಸ್ಸು ಮತ್ತು ಬುದ್ಧಿಯಿಂದ 24 ಗಂಟೆಗಳೂ ಭಗವಂತನ ಚಿಂತನೆಯಲ್ಲಿ ತೊಡಗುವ ಕಲೆಯನ್ನು ಕಲಿಯಬೇಕು. ಅದು ನಮ್ಮನ್ನು ಈ ದೇಹವನ್ನು ತ್ಯಜಿಸಿದ ನಂತರ ಭಗವಂತನ ಧಾಮಕ್ಕೆ ಅಥವಾ ಆಧ್ಯಾತ್ಮಿಕ ಪ್ರಕೃತಿಗೆ ಕರೆದೊಯ್ಯಲು ಸಹಾಯ ಮಾಡುತ್ತದೆ. ಆಧುನಿಕ ವಿಜ್ಞಾನಿಗಳು ವರ್ಷಾನುವರ್ಷಗಳಿಂದ ಚಂದ್ರ ಲೋಕಕ್ಕೆ ಹೋಗಲು ಯತ್ನಿಸುತ್ತಿದ್ದಾರೆ, ಆದರೆ ಈವರೆಗೂ ಸಾಧ್ಯವಾಗಿಲ್ಲ. ಇಲ್ಲಿ ಭಗವದ್ಗೀತೆಯಲ್ಲಿ ಸಲಹೆ ಇದೆ. ಒಬ್ಬ ವ್ಯಕ್ತಿ 50 ವರ್ಷಗಳು ಬದುಕುತ್ತಾನೆಂದು ಕೊಳ್ಳೋಣ ಅವನು ಆಧ್ಯಾತ್ಮಿಕವಾಗಿ ಮೇಲೇರಲು ಪ್ರಯತ್ನಿಸಿದರೆ ಅದು ತುಂಬಾ ಒಳ್ಳೆಯದು. ಒಬ್ಬನು 5 ಅಥವಾ 10 ವರ್ಷ ಪ್ರಾಮಾಣಿಕವಾಗಿ ಪ್ರಯತ್ನಿಸಿದರೂ ಮಯಿ ಅರ್ಪಿತ ಮನೋ ಬುಧ್ಧೀರ್, ಇದು ಅಭ್ಯಾಸದ ಪ್ರಶ್ನೆ ಈ ಅಭ್ಯಾಸವು ಭಕ್ತಿಸೇವೆಯಿಂದ ಬಹಳ ಸುಲಭ. ಶ್ರವಣಂ ಶ್ರವಣಂ. ಅತ್ಯಂತ ಸುಲಭವಾದ ಮಾರ್ಗವೆಂದರೆ ಕೇಳಿಸಿಕೊಳ್ಳುವುದು. ಶ್ರವಣಂ ಕೀರ್ತನಂ ವಿಷ್ಣೋ ಸ್ಮರಣಂ ಪಾದಸೇವನಂ ಆರ್ಚನಂ ವಂದನಂ ದಾಸ್ಯಂ ಸಖ್ಯಂ ಅತ್ಮನಿವೇದನಂ (ಶ್ರೀ ಭಾಗವತಂ 7.5.23) ಈ ಒಂಬತ್ತು ವಿಧಗಳಲ್ಲಿ ಶ್ರವಣವು (ಕೇಳಿಸಿಕೊಳ್ಳುವುದು) ಅತ್ಯಂತ ಸುಲಭ ಮಾರ್ಗ.