KN/660311 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ನ್ಯೂ ಯಾರ್ಕ್

KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ಈಗ, ನಮ್ಮ ವಿಚಾರ ಏನೆಂದರೆ, ತಾಯಿಯ ಗರ್ಭದಿಂದ, ನಮ್ಮ ಜನನದ ಆರಂಭದಿಂದಲೂ, ದೇಹವು ಬೆಳೆದಂತೆ, ಅದೇ ರೀತಿ, ದೇಹದಿಂದ ಹೊರಬಂದ ನಂತರವೂ ಅದು ಬೆಳೆಯುತ್ತದೆ. ಆದರೆ ಆತ್ಮವು, ಅದೇ. ದೇಹವು ಬೆಳಯುತ್ತದೆ. ಆದ್ದರಿಂದ... ಈಗ ಈ ಬೆಳವಣಿಗೆ - ಈ ಸಣ್ಣ ಮಗುವಿನಿಂದ, ಅವನು ದೊಡ್ಡ ಮಗುವಾಗುತ್ತಾನೆ, ನಂತರ ಅವನು ಹುಡುಗನಾಗುತ್ತಾನೆ, ನಂತರ ಯುವಕನಾಗುತ್ತಾನೆ, ನಂತರ ಕ್ರಮೇಣ ನನ್ನಂತಹ ವೃದ್ಧನಾಗುತ್ತಾನೆ, ಮತ್ತು ನಂತರ ಕ್ರಮೇಣ, ಈ ದೇಹವು ಇನ್ನು ಮುಂದೆ ಉಪಯುಕ್ತವಾಗದಿದ್ದಾಗ, ಅದನ್ನು ಬಿಟ್ಟುಬಿಡಬೇಕು, ಮತ್ತು ಇನ್ನೊಂದು ದೇಹವನ್ನು ತೆಗೆದುಕೊಳ್ಳಬೇಕಾಗುತ್ತದೆ. ಇದು ಆತ್ಮದ ದೇಹಾಂತರ ಪ್ರಕ್ರಿಯೆ. ಈ ಸರಳ ಪ್ರಕ್ರಿಯೆಯನ್ನು ಅರ್ಥಮಾಡಿಕೊಳ್ಳಲು ಯಾವುದೇ ತೊಂದರೆ ಇಲ್ಲ ಎಂದು ನಾನು ಭಾವಿಸುತ್ತೇನೆ."
660311 - ಉಪನ್ಯಾಸ BG 02.13 - ನ್ಯೂ ಯಾರ್ಕ್