"ಈ ಭೌತಿಕ ದೇಹ, ನಾವು ಯಾವಾಗಲೂ ತಿಳಿದಿರಬೇಕು, ಇದು ಬಾಹ್ಯ ವಸ್ತು. ಇದು ಕೇವಲ ಉಡುಪು ಎಂದು ನಾನು ಈಗಾಗಲೇ ನಿಮಗೆ ವಿವರಿಸಿದ್ದೇನೆ. ಉಡುಗೆ. ಉಡುಗೆ ನನ್ನ ದೇಹಕ್ಕೆ ಒಂದು ಬಾಹ್ಯ ವಸ್ತುವಾಗಿದೆ. ಅದೇ ರೀತಿ, ಈ ಸ್ಥೂಲ, ಮತ್ತು ಸೂಕ್ಷ್ಮ ದೇಹ - ಸ್ಥೂಲ ದೇಹದ ಐದು ಭೌತಿಕ ಅಂಶಗಳು, ಮತ್ತು ಸೂಕ್ಷ್ಮ ದೇಹದ ಮನಸ್ಸು, ಅಹಂ, ಬುದ್ಧಿ - ಅವು ನನ್ನ ಬಾಹ್ಯ ವಸ್ತುಗಳು. ಹಾಗಾಗಿ ನಾನು ಈಗ ಬಾಹ್ಯ ವಸ್ತುವಿನಲ್ಲಿ ಸೆರೆಯಾಗಿದ್ದೇನೆ. ಈ ಬಾಹ್ಯ ವಸ್ತುಗಳಿಂದ ಹೊರಬರುವುದೆ ನನ್ನ ಇಡೀ ಜೀವನದ ಉದ್ದೇಶವಾಗಿದೆ. ನನ್ನ ನಿಜವಾದ ಆಧ್ಯಾತ್ಮಿಕ ದೇಹದಲ್ಲಿ ನೆಲೆಗೊಳ್ಳಲು ನಾನು ಬಯಸುತ್ತೇನೆ. ನೀವು ಅಭ್ಯಾಸ ಮಾಡಿದರೆ ಅದನ್ನು ಮಾಡಬಹುದು."
|