"ಸಾವಿನ ಸಮಯದಲ್ಲಿ, ನೀವು ಏನು ಯೋಚಿಸುತ್ತಿದ್ದೀರೋ, ನಿಮ್ಮ ಮುಂದಿನ ಜೀವನವನ್ನು ಹಾಗೇ ಸಿದ್ಧಪಡಿಸುತ್ತಿದ್ದೀರಿ ಎಂದರ್ಥ. ಆದ್ದರಿಂದ ಇಡೀ ಜೀವನವನ್ನು ಹೀಗೆ ಸಂಸ್ಕರಿಸಲಾಗುವುದು, ಆದರೆ ಆಗ ನಮ್ಮ ಜೀವನದ ಕೊನೆಯಲ್ಲಿ ನಾವು ಕನಿಷ್ಟ ಪಕ್ಷ ಕೃಷ್ಣನ ಬಗ್ಗೆ ಯೋಚಿಸಬಹುದು. ಆಗ ಖಚಿತವಾಗಿ ಹಾಗು ಖಂಡಿತವಾಗಿ ನೀವು ಕೃಷ್ಣನ ಬಳಿ ಸೇರುತ್ತೀರಿ. ಈ ಅಭ್ಯಾಸವನ್ನು ಮಾಡಬೇಕಾಗಿದೆ. ನಾವು ಬಲಿಷ್ಟ ಮತ್ತು ದೃಡವಾಗಿರುವಾಗ, ಹಾಗು ನಮ್ಮ ಪ್ರಜ್ಞೆಯು ಸರಿಯಾದ ಚಿಂತನೆಯಲ್ಲಿರುವಾಗಲೆ ಅಭ್ಯಾಸ ಮಾಡಿಕೊಳ್ಳಬೇಕು. ಆದ್ದರಿಂದ ಇಂದ್ರಿಯ ತೃಪ್ತಿಗಾಗಿ ಅನೇಕ ವಿಷಯಗಳಲ್ಲಿ ಸಮಯವನ್ನು ವ್ಯರ್ಥ ಮಾಡುವ ಬದಲು, ನಾವು ಕೃಷ್ಣ ಪ್ರಜ್ಞೆಯ ಮೇಲೆ ಕೇಂದ್ರೀಕರಿಸುತ್ತಿದ್ದರೆ, ನಾವು ನಮ್ಮ ಐಹಿಕ ಅಸ್ತಿತ್ವದ ಎಲ್ಲಾ ದುಃಖಗಳಿಗೆ ಪರಿಹಾರವನ್ನು ಮಾಡುತ್ತಿದ್ದೇವೆ ಎಂದರ್ಥ. ಅದು ಪ್ರಕ್ರಿಯೆ, ಕೃಷ್ಣ ಪ್ರಜ್ಞೆ, ಯಾವಾಗಲೂ ಕೃಷ್ಣನ ಚಿಂತನೆ."
|