"ಪರಮ ಪ್ರಭು, ಅವನನ್ನು ವೈದಿಕ ಸಾಹಿತ್ಯದಲ್ಲಿ ಸರ್ವೋಚ್ಚ ನಾಯಕ ಎಂದು ಕರೆಯಲಾಗುತ್ತದೆ. ನಿತ್ಯೋ ನಿತ್ಯಾನಾಮ್ ಚೇತನಸ್ ಚೇತನಾನಾಮ್. ನಿತ್ಯ ಎಂದರೆ ಶಾಶ್ವತ, ಮತ್ತು ನಿತ್ಯಾನಾಮ್, ಅಂದರೆ ಇತರ ಅನೇಕ ಶಾಶ್ವತಗಳು. ನಾವು ಅನೇಕ ಇತರ ಶಾಶ್ವತರು. ಎಕ, ಆ ಒಂದು ಶಾಶ್ವತ... ಎಕೊ ಬಹೂನಾಮ್ ವಿದಧಾತಿ ಕಾಮಾನ್. ಎರಡು ರೀತಿಯ ಶಾಶ್ವತಗಳು. ನಾವು ಜೀವಿಗಳು, ನಾವು ಸಹ ಶಾಶ್ವತರು, ಮತ್ತು ಪರಮಾತ್ಮನು, ಅವನು ಸಹ ಶಾಶ್ವತ. ಶಾಶ್ವತತೆಗೆ ಸಂಬಂಧಿಸಿದವರೆಗು, ಗುಣಾತ್ಮಕ ಸ್ವಭಾವದಲ್ಲಿ ನಾವಿಬ್ಬರೂ ಸಮಾನರು. ಅವನು ಶಾಶ್ವತ, ಮತ್ತು ನಾವೂ ಶಾಶ್ವತ. ಸತ್-ಚಿತ್-ಆನಂದ-ವಿಗ್ರಹ (ಶ್ರೀ. ಭಾ 5.1). ಅವನು ಸಹ ಸಂಪೂರ್ಣ ಆನಂದ, ಮತ್ತು ನಾವೆಲ್ಲರೂ ಅದೇ ಗುಣದ ಭಾಗಾಂಶಗಳಾಗಿರುವುದರಿಂದ ನಾವೆಲ್ಲರೂ ಸಹ ಸಂಪೂರ್ಣ ಆನಂದಮಯ. ಆದರೆ ಅವನು ನಾಯಕ."
|