"ಈ ಪರಮಾಣು ಯುಗದಲ್ಲಿ ನಿಮಗೆ ತಿಳಿದಿದೆ, ಪರಮಾಣುವು ಭೌತಿಕ ಅಸ್ತಿತ್ವದ ಅತಿಸೂಕ್ಷ್ಮ ಪ್ರಮಾಣ, ಅದೇ ರೀತಿ, ಆಧ್ಯಾತ್ಮಿಕ ಪರಮಾಣುವಿನ ಅಸ್ತಿತ್ವವಿದೆ. ಈಗ, ಈ ಆಧ್ಯಾತ್ಮಿಕ ಪರಮಾಣುವಿನ ಅಸ್ತಿತ್ವವಿದೆ. ಹಿಂದೆ ನಾನು ವಿವರಿಸಿದ್ದೇನೆ, ಮತ್ತು ಬಹಳ ಬಾರಿ, ಪರಮಾಣುವನ್ನು ಪದ್ಮ ಪರಾಣದಲ್ಲಿ, ವೈದಿಕ ಸಾಹಿತ್ಯದಲ್ಲಿ ಕೂಡ, ವಿವರಿಸಲಾಗಿದೆ. ಮತ್ತು ಆ ಆಧ್ಯಾತ್ಮಿಕ ಶಕ್ತಿಯ, ಅಂದರೆ ಪರಮಾಣು, ಆಧ್ಯಾತ್ಮಿಕ ಪರಮಾಣುವಿನ ರೂಪ ಏನು? ಇದು ಕೂದಲಿನ ಮೇಲಿನ ತುದಿಯ ಹತ್ತು ಸಾವಿರನೇಯ ಭಾಗವಾಗಿದೆ. ನೀವು ಕೂದಲಿನ ಮೇಲಿನ ತುದಿಯವರೆಗೆ ತಿಳಿದಿರುವಿರಿ. ಅದು ಸಣ್ಣ ವಿಷಯ. ಈಗ ಅದನ್ನು ಹತ್ತು ಸಾವಿರ ಭಾಗಗಳಾಗಿ ವಿಂಗಡಿಸಿ, ಆ ಒಂದು ಭಾಗವು ಆಧ್ಯಾತ್ಮಿಕ ಪರಮಾಣು, ಅದು ನೀವೇ. ಇದು ನಮ್ಮ ನಿಲುವು."
|