"ಭಗವದ್ಗೀತೆಯಲ್ಲಿ ಭಗವಂತನು ಹೇಳಿದ್ದಾನೆ, ಮಯಾ ತತಂ ಇದಂ ಸರ್ವಂ ಜಗದ್ ಅವ್ಯಕ್ತ-ಮೂರ್ತಿನಾ (ಭ.ಗೀ 9.4): "ನಾನು ಬ್ರಹ್ಮಾಂಡದಾದ್ಯಂತ, ಅಭಿವ್ಯಕ್ತಿಯಾದ್ಯಂತ, ನನ್ನ ನಿರಾಕಾರ ಲಕ್ಷಣದಲ್ಲಿ ಹರಡಿದ್ದೇನೆ.” ಮತ್-ಸ್ತಾನಿ ಸರ್ವ-ಭಾತಾನಿ ನಾಹಂ ತೇಷು ಅವಸ್ಥಿತಃ : "ಎಲ್ಲವೂ ನನ್ನ ಮೇಲೆ ಅವಲಂಬಿಸಿರುತ್ತದೆ, ಆದರೆ ನಾನು ಅಲ್ಲಿ ಇಲ್ಲ.” ಪಶ್ಯ ಮೇ ಯೋಗಂ ಐಶ್ವರಂ (ಭ.ಗೀ 9.5). ಏಕಕಾಲದಲ್ಲಿ ಒಂದು ಮತ್ತು ವಿಭಿನ್ನ, ಈ ತತ್ತ್ವಶಾಸ್ತ್ರವನ್ನು ಚೈತನ್ಯ ಮಹಾಪ್ರಭುಗಳು ಒಪ್ಪಿಕೊಂಡಿದ್ದಾರೆ, ಹಾಗು ಇದನ್ನು ಭಗವದ್ಗೀತೆಯಲ್ಲಿಯೂ ಸ್ವೀಕರಿಸಲಾಗಿದೆ; ಮತ್ತಃ ಪರತರಂ ನಾನ್ಯತ್ ಕಿಂಚಿದ್ ಅಸ್ತಿ ಧನಂಜಯ (ಭ.ಗೀ 7.7). ಆದರೆ ಈ ರೂಪ, ಈ ಎರಡು ಕೈಗಳು, ಕೊಳಲಿನೊಂದಿಗೆ, ಕೃಷ್ಣ, ಕೃಷ್ಣನ ರೂಪ, ಇದನ್ನು ಮೀರಿ ಏನೂ ಇಲ್ಲ. ಆದ್ದರಿಂದ ಒಬ್ಬರು ಈ ಹಂತಕ್ಕೆ ಬರಬೇಕು."
|