KN/661213 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ನ್ಯೂ ಯಾರ್ಕ್

KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
“ಆದ್ದರಿಂದ ಅವನ ಸ್ವಯಂ-ರೂಪದಲ್ಲಿ, ಅವನ ಸಾಕಾರ ವೈಶಿಷ್ಟ್ಯದಲ್ಲಿ, ಅವನು ಯಾವಾಗಲೂ ವೃಂದವಾನದಲ್ಲಿಯೇ ಇರುತ್ತಾನೆ, ಮತ್ತು ಅವನು ಗೋಪಾಲ ಬಾಲಕನಂತೆ ಇರುತ್ತಾನೆ. ಅದು ಅವನ ನಿಜವಾದ ವೈಶಿಷ್ಟ್ಯ, ಕೃಷ್ಣ. ಕುರುಕ್ಷೇತ್ರ ರಣರಂಗದಲ್ಲಿ ಇರುವ ಕೃಷ್ಣ, ಅದು ಕೃಷ್ಣನ ನಿಜವಾದ ವೈಶಿಷ್ಟ್ಯವಲ್ಲ. ಒಬ್ಬ ವ್ಯಕ್ತಿಯಂತೆ… ಹೈಕೋರ್ಟ್ ನ್ಯಾಯಾಧೀಶರಂತೆ, ಅವರ ನೈಜ ವೈಶಿಷ್ಟ್ಯವನ್ನು ನೀವು ಎಲ್ಲಿ ಕಾಣುತ್ತೀರಿ? ಅವರ ನಿಜವಾದ ವೈಶಿಷ್ಟ್ಯವನ್ನು ನೀವು ಅವರ ಮನೆಯಲ್ಲಿ ಕಾಣುವಿರಿ, ಕುರ್ಚಿಯಲಿ ಅಲ್ಲ. ಕುರ್ಚಿಯಲ್ಲಿರುವಾಗ, ಅವರ ತಂದೆ ಬಂದರು ಕೂಡ , ಹೈಕೋರ್ಟ್ ನ್ಯಾಯಾಧೀಶರ ತಂದೆ, ಅವರು ನ್ಯಾಯಾಧೀಶರನ್ನು 'ನನ್ನ ಸ್ವಾಮಿ' ಎಂದು ಸಂಬೋಧಿಸಬೇಕಾಗುತ್ತದೆ. ಅದು ನ್ಯಾಯಾಲಯ. ಮನೆಯಲ್ಲಿರುವ ವ್ಯಕ್ತಿಯು, ಹಾಗು ನ್ಯಾಯಾಲಯದಲ್ಲಿ ಇರುವ ವ್ಯಕ್ತಿಯು ವಿಭಿನ್ನವಾಗಿರುತ್ತಾರೆ, ಆದರೆ ಅವರು ಒಂದೇ ವ್ಯಕ್ತಿ. ಅದೇ ರೀತಿ, ನಿಜವಾದ ದೇವೋತ್ತಮ ಪರಮ ಪರುಷ, ಕೃಷ್ಣ, ಎಂದಿಗೂ ವೃಂದಾವನದಿಂದ ಹೊರಗೆ ಹೋಗುವುದಿಲ್ಲ. ಅವನು ಯಾವಾಗಲೂ ಗೋಪಾಲ ಬಾಲಕನಾಗಿಯೆ ಇರುತ್ತಾನೆ. ಅಷ್ಟೆ.”
661213 - ಉಪನ್ಯಾಸ CC Madhya 20.164-173 - ನ್ಯೂ ಯಾರ್ಕ್