KN/661214 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ನ್ಯೂ ಯಾರ್ಕ್

KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
“ಸಂಕರ್ಷಣನ ಮೂರು ವಿಸ್ತರಣೆಗಳಿವೆ. ಅವರನ್ನು ವಿಷ್ಣು ಎಂದು ಕರೆಯಲಾಗುತ್ತದೆ – ಮಹಾವಿಷ್ಣು, ಗರ್ಭೋದಕಶಾಯೀ ವಿಷ್ಣು, ಮತ್ತು ಕ್ಷೀರೊದಕಶಾಯೀ ವಿಷ್ಣು – ಸಂಕರ್ಷಣನಿಂದ. ಮಾಹಾವಿಷ್ಣು… ಭೌತಿಕ ಪ್ರಪಂಚವನ್ನು ರಚಿಸಿದಾಗ, ಮಹಾವಿಷ್ಣುವಿನ ವಿಸ್ತರಣೆ ಇರುತ್ತದೆ. ಮಹಾವಿಷ್ಣುವಿನಿಂದ ಈ ಎಲ್ಲಾ ಬ್ರಹ್ಮಾಂಡಗಳು ಉತ್ಪತ್ತಿಯಾಗುತ್ತವೆ. ಮತ್ತು ಮಹಾವಿಷ್ಣುವಿನಿಂದ ಗರ್ಭೋದಕಶಾಯೀ ವಿಷ್ಣು ವಿಸ್ತರಿಸಲ್ಪಡುತ್ತಾನೆ. ಈ ಗರ್ಭೋದಕಶಾಯೀ ವಿಷ್ಣುವು ಪ್ರತಿ ಒಂದು ಬ್ರಹ್ಮಾಂಡದಲ್ಲೂ ಪ್ರವೇಶಿಸುತ್ತಾನೆ, ಮತ್ತು ಪ್ರತಿ ಒಂದು ಬ್ರಹ್ಮಾಂಡದಲ್ಲೂ, ಗರ್ಭೋದಕಶಾಯೀ ವಿಷ್ಣುವಿನಿಂದ, ಕ್ಷೀರೊದಕಶಾಯೀ ವಿಷ್ಣು ವಿಸ್ತರಿಸಲ್ಪಡುತ್ತಾನೆ. ಆ ಕ್ಷೀರೊದಕಶಾಯೀ ವಿಷ್ಣು ಈ ಬ್ರಹ್ಮಾಂಡದೊಳಗೆ ಧ್ರುವ ನಕ್ಷತ್ರದ ಬಳಿ ಒಂದು ಗ್ರಹವನ್ನು ಹೊಂದಿದ್ದಾನೆ. ಮತ್ತು ಆ ಕ್ಷೀರೊದಕಶಾಯೀ ವಿಷ್ಣುವಿನಿಂದ, ಪರಮಾತ್ಮ ಎಂಬ ವಿಸ್ತರಣೆಯು ಎಲ್ಲರ ಹೃದಯದಲ್ಲಿ ವಿತರಿಸಲ್ಪಡುತ್ತಾನೆ.”
661214 - ಉಪನ್ಯಾಸ CC Madhya 20.172 - ನ್ಯೂ ಯಾರ್ಕ್