KN/661217 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ನ್ಯೂ ಯಾರ್ಕ್

KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
“ಈ ಭೌತಿಕ ಸೃಷ್ಟಿಗೆ ಸಂಬಂಧಿಸಿದವರೆಗು, ‘ಅವನ ಭೌತಿಕ ಶಕ್ತಿಯಿಂದ, ಅವನು ಈ ಭೌತಿಕ ಜಗತ್ತನ್ನು, ಮತ್ತು ಭೌತಿಕ ಪ್ರಪಂಚದ ಅನಿಯಮಿತ ವಿಶ್ವಗಳನ್ನು, ಪ್ರಕಟಿಸುತ್ತಾನೆ’ ಎಂದು ಇಲ್ಲಿ ಹೇಳಲಾಗಿದೆ. ಆದ್ದರಿಂದ ಭೌತಿಕ ಪ್ರಪಂಚವು ಶೂನ್ಯದಿಂದ, ಅನೂರ್ಜಿತದಿಂದ, ಹೊರಬಂದಿದೆ ಎಂದು ಯಾರೂ ಭಾವಿಸಬಾರದು. ಇಲ್ಲ. ಇದು ಎಲ್ಲಾ ವೈದಿಕ ಸಾಹಿತ್ಯಗಳಲ್ಲಿ, ವಿಶೇಷವಾಗಿ ಬ್ರಹ್ಮ-ಸಂಹಿತೆಯಲ್ಲಿ ದೃಡೀಕರಿಸಲ್ಪಟ್ಟಿದೆ, ಮತ್ತು ಭಗವದ್ಗೀತೆಯಲ್ಲಿಯೂ ಸಹ ಇದನ್ನು ಹೇಳಲಾಗಿದೆ, ಮಯ್ಯಾಧ್ಯಕ್ಷೇಣ ಪ್ರಕೃತಿಃ ಸೂಯತೆ ಸ-ಚರಾಚರಂ (ಭ.ಗೀ 9.10). ಆದ್ದರಿಂದ ಭೌತಿಕ ಪ್ರಕೃತಿಯು ಸ್ವತಂತ್ರವಾಗಿಲ್ಲ. ಭೌತದ್ರವ್ಯವು ಸ್ವಯಿಚ್ಛೆಯಿಂದ ಕಾರ್ಯನಿರ್ವಹಿಸುತ್ತಿದೆ ಎಂಬುದು ಒಂದು ತಪ್ಪು ತಿಳುವಳಿಕೆ, ತಪ್ಪು ಪರಿಕಲ್ಪನೆ. ಭೌತದ್ರವ್ಯಕ್ಕೆ ಕಾರ್ಯ ಮಾಡಲು ಯಾವುದೇ ಶಕ್ತಿಯಿಲ್ಲ. ಇದು ಜಡ-ರೂಪಾ. ಜಡ-ರೂಪಾ ಎಂದರೆ ಅದಕ್ಕೆ ಚಲಿಸುವ ಸಾಮರ್ಥ್ಯವಿಲ್ಲ, ಅಥವಾ ಉಪಕ್ರಮಶಕ್ತಿಯಿಲ್ಲ. ಭೌತದ್ರವ್ಯಕ್ಕೆ ಉಪಕ್ರಮಶಕ್ತಿಯಿಲ್ಲ. ಆದ್ದರಿಂದ ಪರಮಾತ್ಮನ ನಿರ್ದೇಶನವಿಲ್ಲದೆ ಭೌತದ್ರವ್ಯವು ಈ ರೀತಿಯಲ್ಲಿ ಪ್ರಕಟವಾಗಲು ಸಾಧ್ಯವಿಲ್ಲ.”
661217 - ಉಪನ್ಯಾಸ CC Madhya 20.255-281 - ನ್ಯೂ ಯಾರ್ಕ್