“ಬ್ರಹ್ಮನ ಒಂದು ದಿನ ತಿಳಿಯಬೇಕೆಂದರೆ 4,300,000ವನ್ನು 1000ದಿಂದ ಗುಣಿಸಿ. ಅದು ಬ್ರಹ್ಮನ ಹನ್ನೆರಡು ಗಂಟೆಗಳು. ಅದೇ ರೀತಿ, ಇಪ್ಪತ್ನಾಲ್ಕು ಗಂಟೆಗಳು, ಒಂದು ದಿನ. ಈಗ ಅಂತಹ ಒಂದು ತಿಂಗಳು, ಅಂತಹ ಒಂದು ವರ್ಷ, ಅಂತಹ ನೂರು ವರ್ಷಗಳನ್ನು ಲೆಕ್ಕಹಾಕಿ. ಬ್ರಹ್ಮನ ನೂರು ವರ್ಷಗಳು ಮಹಾವಿಷ್ಣುವಿನ ಒಂದು ಉಸಿರಾಟದ ಅವಧಿ, ನಾವು ಉಸಿರಾಡುವಂತೆಯೇ, ನಮ್ಮ ಉಚ್ಛ್ವಾಸ ನಿಶ್ವಾಸ ನಡೆಯುತ್ತಿದೆ. ಆದ್ದರಿಂದ ಉಸಿರಾಟದ ಅವಧಿಯಲ್ಲಿ, ಉಸಿರು ಬಿಟ್ಟಾಗ, ಈ ಎಲ್ಲಾ ಬ್ರಹ್ಮಾಂಡಗಳು ಸೃಷ್ಟಿಯಾಗುತ್ತವೆ, ಮತ್ತು ಉಸಿರೆಳೆದಾಗ, ಎಲ್ಲವೂ ಕೊನೆಯಾತ್ತವೆ, ಖಾತೆಯನ್ನು ಮುಚ್ಚಲಾಗುತ್ತದೆ. ಹೀಗೆ ಇದು ನಡೆಯುತ್ತಿದೆ. ಅಂತಹ ಮಹಾವಿಷ್ಣುವು ಒಂದು ಭಾಗಾಂಶ, ಕೃಷ್ಣನ ವಿಸ್ತರಣೆಯ ನಾಲ್ಕನೆಯ ಭಾಗವಾಗಿದ್ದಾನೆ.”
|