KN/661226 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ನ್ಯೂ ಯಾರ್ಕ್

KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ನೀನು ಏನು?, ಎಂದು ನಾನು ನಿನ್ನನ್ನು, ಅಥವಾ ನೀನು ನನ್ನನ್ನು ಕೇಳಿದಾಗ, ನಾನು ಈ ದೇಹದ ಸಂಬಂಧದಲ್ಲಿ ಏನನ್ನಾದರೂ ಹೇಳುತ್ತೇನೆ. ನೀವು ಹುಚ್ಚರಲ್ಲವೇ? ನೀವು ಹುಚ್ಚರಲ್ಲ ಎಂದು ನಿಮ್ಮಲ್ಲಿ ಯಾರಾದರೂ ಹೇಳಬಲ್ಲಿರಾ? ನಿಮ್ಮ ಅಸ್ತಿತ್ವಕ್ಕೆ ಸಂಬಂಧಿಸಿದಹಾಗೆ, ನೀವಲ್ಲದ ಒಂದನ್ನು ನೀವು ಎಂದು ಗುರುತಿಸಿಕೊಂಡರೆ ನೀವು ಹುಚ್ಚರಲ್ಲವೇ? ನೀವು ಹುಚ್ಚರಲ್ಲವೇ? ಆದ್ದರಿಂದ, ಈ ದೇಹದೊಂದಿಗೆ ಗುರುತಿಸಿಕೊಳ್ಳುವ ಪ್ರತಿಯೊಬ್ಬನೂ ಹುಚ್ಚನಾಗಿದ್ದಾನೆ. ಅವನು ಒಬ್ಬ ಹುಚ್ಚ. ಅದು ಜಗತ್ತಿಗೆ ಒಂದು ಸವಾಲು. ದೇವರ ಆಸ್ತಿ, ದೇವರ ಭೂಮಿ, ದೇವರ ಜಗತ್ತನ್ನು ತನ್ನ ಸ್ವಂತ ಆಸ್ತಿ ಎಂದು ಹೇಳಿಕೊಳ್ಳುವ ಯಾರಾದರೂ ಸರಿ ಅವನು ಒಬ್ಬ ಹುಚ್ಚ. ಇದು ಒಂದು ಸವಾಲು. ಇದು ಅವನ ಆಸ್ತಿ, ಇದು ಅವನ ದೇಹ ಎಂದು ಯಾರಾದರೂ ಸ್ಥಾಪಿಸಲಿ ನೋಡೋಣ. ನೀವು ಸ್ವಭಾವತಃ, ಪ್ರಕೃತಿಯ ತಂತ್ರಗಳಿಂದ, ನಿಮ್ಮನ್ನು ಯಾವುದೋ ಒಂದು ಸ್ಥಳಕ್ಕೆ ಹಾಕಲಾಗುತ್ತದೆ. ನಿಮ್ಮನ್ನು ಯಾವುದೋ ದೇಹಕ್ಕೆ ಹಾಕಲಾಗುತ್ತದೆ. ಯಾವುದೋ ಪ್ರಜ್ಞೆಗೆ ಒಳಪಡಿಸಲಾಗುತ್ತದೆ, ಮತ್ತು ನೀವು ಪ್ರಕೃತಿಯ ನಿಯಮಗಳಿಂದ ನಿರ್ದೇಶಿಸಲ್ಪಡುತ್ತೀರಿ. ಆದರೂ ನೀವು ಇವುಗಳಿಗೋಸ್ಕರ ಹುಚ್ಚರಾಗಿದ್ದೀರಿ.”
661226 - ಉಪನ್ಯಾಸ BG 09.34 - ನ್ಯೂ ಯಾರ್ಕ್