"ಎಲ್ಲಾ ವೈದಿಕ ಸಾಹಿತ್ಯದಲ್ಲೂ ಒಂದೇ ವಿಷಯವಿದೆ. ವೇದೈಶ್ ಚ ಸರ್ವೈರ್ ಅಹಮ್ ಏವ ವೇದ್ಯ: (ಭ.ಗೀ 15.15). ಕೊನೆಯ ಗುರಿ, ಅಂತಿಮ ಗುರಿ, ಅದು ಕೃಷ್ಣನು. ಆದ್ದರಿಂದ ಭಗವದ್ಗೀತೆಯಲ್ಲಿ ಇದನ್ನು ಹೇಳಲಾಗಿದೆ – ಸರ್ವ-ಧರ್ಮಾನ್ ಪರಿತ್ಯಜ್ಯ ಮಾಮ್ ಏಕಂ ಶರಣಂ ವ್ರಜ (ಭ.ಗೀ 18.66). ಭಾಗವತಂ ಹೇಳುತ್ತದೆ – ಅಕಾಮಃ ಸರ್ವ-ಕಾಮೋ ವಾ (ಶ್ರೀ.ಭಾ 2.3.10). ನೀವು ಭೌತಿಕವಾಗಿ ಅಪೇಕ್ಷಿಸುತ್ತಿದ್ದರೂ ಸಹ, ನೀವು ಕೃಷ್ಣನನ ಬಳಿ ಹೋಗಬೇಕು. ಕೃಷ್ಣನು ಕೂಡ ದೃಢೀಕರಿಸುತ್ತಾನೆ, ಭಜತೇ ಮಾಮ್ ಅನನ್ಯ ಭಾಕ್ ಸಾಧುರ್ ಏವ ಸ ಮನ್ತವ್ಯಃ (ಭ.ಗೀ 9.30). ಅಪಿ ಚೇತ್ ಸು-ದುರಾಚಾರೋ. ಯಾರೂ ದೇವರನ್ನು ಕೇಳಬಾರದು. ಆದರೆ, ಯಾರಾದರರು ಕೇಳಿದರೆ, ಅವನನ್ನು ಒಪ್ಪಿಕೊಳ್ಳುತ್ತೇವೆ, ಏಕೆಂದರೆ ಅವನು ಗುರಿ ತಲುಪಿದ್ದಾನೆ, ಕೃಷ್ಣನನ್ನು. ಅದು ಅವನ ಉತ್ತಮ ಅರ್ಹತೆ. ಅವನು ಕೃಷ್ಣ ಪ್ರಜ್ಞೆಯಲ್ಲಿದ್ದಾನೆ. ಆದ್ದರಿಂದ ಎಲ್ಲಾ ದೋಷಗಳು ಇರಬಹುದು, ಆದರೆ ಒಬ್ಬನು ಕೃಷ್ಣ ಪ್ರಜ್ಞಾವಂತನಾದಾಗ ಎಲ್ಲವೂ ಚೆನ್ನಾಗಿರುತ್ತದೆ.”
|