"ಯಾರು ಈ ಕೃಷ್ಣಪ್ರಜ್ಞೆಯ ತತ್ವವನ್ನು ಸ್ವೀಕರಿಸಿ ಕೃಷ್ಣಪ್ರೇಮವನ್ನು ಬೆಳೆಸಿಕೊಳ್ಳುತಾರೋ, ಅವರು ಪ್ರತಿ ಕ್ಷಣದಲ್ಲೂ, ಪ್ರತಿ ಹೆಜ್ಜೆಯಲ್ಲೂ, ಪ್ರತಿ ವಸ್ತುವಿನಲ್ಲೂ ಭಗವಂತನನ್ನು ಕಾಣುತ್ತಾರೆ. ಅಂಥವರು ಒಂದು ಕ್ಷಣವು ಕೂಡ ಭಗವಂತನ ದೃಷ್ಟಿಯಿಂದ ದೂರವಾಗುವುದಿಲ್ಲ. ಭಗವದ್ ಗೀತೆಯಲ್ಲಿ ಹೀಗೆ ಹೇಳಲಾಗಿದೆ - ತೇಸು ತೆ ಮಯಿ. ಯಾವ ಭಕ್ತ ಪ್ರೇಮಿಸಿದ್ದಾನೋ, ಯಾರು ಭಗವಂತನ ಬಗ್ಗೆ ಪ್ರೇಮವನ್ನು ಬೆಳೆಸಿಕೊಂಡಿದ್ದಾನೋ, ಅವನು ಪ್ರತಿ ಕ್ಷಣವೂ ಭಗವಂತನನ್ನು ನೋಡುತಿರುತ್ತಾನೆ. ಅದೇ ರೀತಿ ಭಗವಂತನು ಕೂಡ ಪ್ರತಿ ಕ್ಷಣ ಆ ಭಕ್ತನನ್ನು ನೋಡುತಿರುತ್ತಾನೆ. ಅವರು ಎಂದಿಗೂ ಬೇರೆಯಾಗುವುದಿಲ್ಲ. ಇದು ಸುಲಭ ಪದ್ಧತಿ. ಈ ಹರಿ ಕೀರ್ತನೆ ಎಂಬ ಸುಲಭ ಪದ್ಧತಿ ಈ ಕಲಿಯುಗಕ್ಕಾಗಿ ಸೂಚಿಸಲಾಗಿದೆ. ಇದನ್ನು ನಾವು, ಪ್ರಾಮಾಣಿಕವಾಗಿ, ಯಾವ ಅಪರಾಧಗಲಿಲ್ಲದೆ ನಂಬಿಕೆಯಿಟ್ಟು ಮಾಡಿದರೆ, ಭಗವಂತನ ನೋಡುವುದು ಭಕ್ತನಿಗೆ ಕಷ್ಟಕರವೇನು ಅಲ್ಲ"
|