KN/670106 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ನ್ಯೂ ಯಾರ್ಕ್
KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ |
"ಒಂದು ಮಗುವಿನ ಹಾಗೆ. ಒಂದು ಸುಂದರವಾದ ಮೋಟಾರು ಕಾರು ಬೀದಿಯಲ್ಲಿ ಓಡುತ್ತಿರುವುದನ್ನು ಮಗು ನೋಡುತ್ತದೆ, ಮೋಟಾರು ಕಾರು ತನ್ನದೇ ಪ್ರಕಾರದಲ್ಲಿ ಯಾರ ಸಹಾಯವೂ ಇಲ್ಲದೆ ಓಡುತ್ತಿದೆ ಎಂದು ಅವನು ಭಾವಿಸುತ್ತಾನೆ. ಅದು ಬುದ್ಧಿವಂತಿಕೆಯಲ್ಲ. ಮೋಟಾರು ಕಾರು ಓಡುತ್ತಿಲ್ಲ ... ಅದರ ಹೊರತಾಗಿಯೂ .. ಇಲ್ಲಿರುವಂತೆಯೇ ನಮಗೆ ಈ ಟೇಪ್ ರೆಕಾರ್ಡರ್, ಈ ಮೈಕ್ರೊಫೋನ್ ಸಿಕ್ಕಿದೆ. ಯಾರೋ ಹೇಳಬಹುದು, "ಓಹ್, ಇವುಗಳು ಎಷ್ಟು ಉತ್ತಮ ಆವಿಷ್ಕಾರಗಳಾಗಿವೆ. ಅವೆಲ್ಲವೂ ತುಂಬಾ ಚೆನ್ನಾಗಿ ಕೆಲಸ ಮಾಡುತ್ತಿವೇ. "ಆದರೆ ಈ ಟೇಪ್ ರೆಕಾರ್ಡರ್ ಅಥವಾ ಈ ಮೈಕ್ರೊಫೋನ್ ಒಂದು ಕ್ಷಣ ವೈಯಕ್ತಿಕ ಆತ್ಮವು ಮುಟ್ಟದ ಹೊರತು ಕೆಲಸ ಮಾಡಲು ಸಾಧ್ಯವಿಲ್ಲ ಎನ್ನುವುದನ್ನು ಗಮನಿಸಬೇಕು. ಇದು ಬುದ್ಧಿವಂತಿಕೆ. ಯಂತ್ರವನ್ನು ನೋಡುವದರಿಂದ ನಾವು ವಿಸ್ಮಿತರಾಗಬಾರದು. ಯಾರು ಯಂತ್ರವನ್ನು ಕೆಲಸ ಮಾಡುವ ಹಾಗೆ ಮಾಡುತಿದ್ದಾರೆ ಎನ್ನುವುದನ್ನು ನಾವು ಕಂಡುಹಿಡಿಯಲು ಪ್ರಯತ್ನಿಸಬೇಕು . ಅದು ಬುದ್ಧಿವಂತಿಕೆ, 'ಸುಖಾರ್ಥ-ವಿವೇಕನಮ್', ಸೂಕ್ಷ್ಮತೆಯನ್ನು ನೋಡಲು. " |
670106 - ಉಪನ್ಯಾಸ ಭ. ಗೀತಾ ೧೦.೦೪-೦೫ - ನ್ಯೂ ಯಾರ್ಕ್ |