KN/670108 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ನ್ಯೂ ಯಾರ್ಕ್

KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ಕೃಷ್ಣನ ಜ್ಞಾನವಿಲ್ಲದೆ ನಾವು ಆನಂದಮಯವಾಗಿರಲು ಸಾಧ್ಯವಿಲ್ಲ. ಆದರೆ ಸ್ವಭಾವತಃ ನಾವು ಆನಂದಮಯರಾಗಿದ್ದೇವೆ. ಬ್ರಹ್ಮ-ಸೂತ್ರದಲ್ಲಿ, ವೇದಾಂತ-ಸೂತ್ರದಲ್ಲಿ, ಆನಂದಮಯೋ ಅಭ್ಯಾಸಾತ್ ಎಂದು ಹೇಳಲಾಗಿದೆ. ಪ್ರತಿಯೊಂದು ಜೀವಂತ ಅಸ್ತಿತ್ವ, ಬ್ರಹ್ಮನ್. ಜೀವಂತ ಅಸ್ತಿತ್ವಗಳೂ ಬ್ರಹ್ಮನ್ ಮತ್ತು ಕೃಷ್ಣ ಕೂಡ ಪರ -ಬ್ರಹ್ಮನ್. ಆದ್ದರಿಂದ ಬ್ರಹ್ಮನ್ ಮತ್ತು ಪರ -ಬ್ರಹ್ಮನ್ , ಇಬ್ಬರೂ ಸ್ವಭಾವತಃ ಸಂತೋಷದಿಂದ ಕೂಡಿರುತ್ತಾರೆ. ಅವರಿಗೆ ಸಂತೋಷ, ಆನಂದ ಬೇಕು. ಆದ್ದರಿಂದ ನಮ್ಮ ಸಂತೋಷವು, ಬೆಂಕಿಯೊಂದಿಗೆ ಮತ್ತು ಬೆಂಕಿಯ ಕಿಡಿಗಳಿದ್ದಂತೆ, ಕೃಷ್ಣನೊಂದಿಗೆ ಸಂಬಂಧಿಸಿದೆ. ಬೆಂಕಿಯ ಕಿಡಿಗಳು, ಬೆಂಕಿಯೊಂದಿಗೆ ಎಷ್ಟು ಸಮಯದವರೆಗೆ ಪ್ರಕಟವಾಗಿರುವುದೋ, ಅಲ್ಲಿಯವರೆಗೆ ಸುಂದರವಾಗಿರುತ್ತದೆ. ಮತ್ತು ಬೆಂಕಿಯ ಕಿಡಿಗಳು ಮೂಲ ಬೆಂಕಿಯಿಂದ ಕೆಳಗೆ ಬಿದ್ದ ತಕ್ಷಣ, ಓಹ್, ಅದು ನಂದಿಸಲ್ಪಡುತ್ತದೆ, ಮತ್ತಿನ್ನು ಸುಂದರವಾಗಿಲ್ಲ. "
670108 - ಉಪನ್ಯಾಸ ಚೈ. ಚ. ಮಧ್ಯ ೨೨.೦೬-೧೦ - ನ್ಯೂ ಯಾರ್ಕ್