KN/670109 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ನ್ಯೂ ಯಾರ್ಕ್

KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ಶಾಶ್ವತವಾಗಿ ವಿಮೋಚನೆಗೊಂಡ ಆತ್ಮಗಳು, ಅವರು ಕೃಷ್ಣನನ್ನು ಪ್ರೀತಿಸುವುದರ ಮೂಲಕ ಸರಳವಾಗಿ ತೃಪ್ತರಾಗುತ್ತಾರೆ. ಅದು ಅವರ ತೃಪ್ತಿ. ಪ್ರತಿಯೊಬ್ಬರೂ ಪ್ರೀತಿಸಲು ಬಯಸುತ್ತಾರೆ. ಅದು ಸ್ವಾಭಾವಿಕ ಪ್ರವೃತಿ. ಪ್ರತಿಯೊಬ್ಬರೂ. ಪ್ರೀತಿಸುವ ವಸ್ತು ಇಲ್ಲದಿದ್ದಾಗ, ಈ ಭೌತಿಕ ಜಗತ್ತಿನಲ್ಲಿ ನಾವು ಕೆಲವೊಮ್ಮೆ ಬೆಕ್ಕುಗಳನ್ನು ಮತ್ತು ನಾಯಿಗಳನ್ನು ಪ್ರೀತಿಸುತ್ತೇವೆ. ನೀವೇ ನೋಡಿ ? ಯಾಕೆಂದರೆ ನಾನು ಯಾರನ್ನಾದರೂ ಪ್ರೀತಿಸಬೇಕು. ನನಗೆ ಯಾವುದೇ ಸೂಕ್ತ ವ್ಯಕ್ತಿಯನ್ನು ಪ್ರೀತಿಸಲು ಸಿಗದಿದ್ದಾಗ, ನನ್ನ ಪ್ರೀತಿಯನ್ನು ಕೆಲವು ಹವ್ಯಾಸಕ್ಕೆ, ಕೆಲವು ಪ್ರಾಣಿಗಳಿಗೆ ತಿರುಗಿಸುತ್ತೇನೆ, ಏಕೆಂದರೆ ಪ್ರೀತಿ ಇದೆ. ಆದ್ದರಿಂದ ಇದು ಸುಪ್ತವಾಗಿದೆ. ಕೃಷ್ಣನಿಗೋಸ್ಕರ ನಮ್ಮ ಪ್ರೀತಿ ಸುಪ್ತವಾಗಿದೆ, ಅದು ನಮ್ಮೊಳಗಿದೆ, ಆದರೆ ಕೃಷ್ಣನ ಬಗ್ಗೆ ನಮಗೆ ಯಾವುದೇ ಮಾಹಿತಿಯಿಲ್ಲದ ಕಾರಣ, ಆದ್ದರಿಂದ ನಾವು ನಮ್ಮ ಪ್ರೀತಿಯನ್ನು ಯಾವುದೊ ವಿಷಯಗಳಲ್ಲಿ ತೊಡಗಿಸಿಕೊಂಡು ಹತಾಶೆಗೊಳಗಾಗುತ್ತೇವೆ. ಅದು ಪ್ರೀತಿಯ ವಸ್ತುವಲ್ಲ. ಆದ್ದರಿಂದ ನಾವು ಹತಾಶೆಗೊಂಡಿದ್ದೇವೆ. "

670109 - ಉಪನ್ಯಾಸ ಚೈ ಚ ಮಧ್ಯ ೨೨.೧೧-೧೫ - ನ್ಯೂ ಯಾರ್ಕ್