"ಆದ್ದರಿಂದ ಕೃಷ್ಣಎಲ್ಲದಕ್ಕೂ ಮೂಲವಾಗಿದ್ದರೆ, ನೀವು ಕೃಷ್ಣನನ್ನು ಪ್ರೀತಿಸುತ್ತಿದ್ದರೆ, ಆಗ ನೀವು ಬ್ರಹ್ಮಾಂಡವನ್ನು ಪ್ರೀತಿಸುತ್ತೀರಿ. ವಾಸ್ತವವಾಗಿ ಅದು ಹಾಗೆ. ನೀವು ನಿಮ್ಮ ತಂದೆಯನ್ನು ಪ್ರೀತಿಸುತ್ತಿದ್ದರೆ, ನೀವು ನಿಮ್ಮ ಸಹೋದರನನ್ನು ಪ್ರೀತಿಸುತ್ತೀರಿ. ನಿಮ್ಮ ದೇಶವನ್ನು ಪ್ರೀತಿಸುತ್ತಿದ್ದರೆ, ನಿಮ್ಮ ದೇಶವಾಸಿಗಳನ್ನು ಪ್ರೀತಿಸುತ್ತೀರಿ. ನಾವು ವಿದೇಶದಲ್ಲಿದ್ದೇವೆ ಎಂದು ಭಾವಿಸೋಣ, ಮತ್ತು ಇಲ್ಲಿ ಒಬ್ಬ ಸಜ್ಜನ ಭಾರತ, ಭಾರತದಿಂದ; ನಾನು ಭಾರತದಿಂದ ಬಂದವನು. ಆದ್ದರಿಂದ ಸ್ವಾಭಾವಿಕವಾಗಿ ನಾವು ಕೇಳುತ್ತೇವೆ, "ಓಹ್, ನೀವು ಭಾರತದಿಂದ ಬಂದಿದ್ದೀರಾ? ನೀವು ಭಾರತದ ಯಾವ ಭಾಗದಿಂದ ಬರುತ್ತಿದ್ದೀರೀ ? "ಆ ವ್ಯಕ್ತಿಯ ಮೇಲೆ ಏಕೆ ಆಕರ್ಷಣೆ? ಏಕೆಂದರೆ ನಾನು ಭಾರತವನ್ನು ಪ್ರೀತಿಸುತ್ತೇನೆ. ಮತ್ತು ಅವನು ಭಾರತೀಯನಾಗಿರುವುದರಿಂದ ನಾನು ಅವನನ್ನು ಪ್ರೀತಿಸುತ್ತೇನೆ. ಆದ್ದರಿಂದ ಪ್ರೀತಿ ಮೂಲದಿಂದ ಪ್ರಾರಂಭವಾಗುತ್ತದೆ."
|