ಹರೇರ್ ನಾಮ ಹರೇರ್ ನಾಮ ಹರೇರ್ ನಾಮ್ ಯೇವ ಕೇವಲಂ (Vanisource: ಚೈ.ಚ ಆದಿ. ೧೭.೨೧). ಎಂದರೆ, "ಈ ಯುಗದಲ್ಲಿ ಆತ್ಮ ಸಾಕ್ಷಾತ್ಕಾರಕ್ಕಾಗಿ ಹರೇ ಕೃಷ್ಣ, ಹರೇ ಕೃಷ್ಣ, ಕೃಷ್ಣ, ಕೃಷ್ಣ, ಹರೇ, ಹರೇ, ಹರೇ ರಾಮ, ಹರೇ ರಾಮ, ರಾಮ, ರಾಮ, ಹರೇ, ಹರೇ," ಎಂದು ಜಪಿಸುವುದು ಬಿಟ್ಟು, ಬೇರೆ ಪರ್ಯಾಯವಿಲ್ಲ, ಹರೇರ್ ನಾಮ, ದೇವರ ಪವಿತ್ರವಾದ ಹೆಸರು. ಆದ್ದರಿಂದ ಪ್ರಸ್ತುತ ಕ್ಷಣದಲ್ಲಿ ಪತನವಾದ ಯುಗವನ್ನು ಪರಿಗಣಿಸಿ, ದೇವರು ಎಷ್ಟು ಕರುಣಾಮಯಿ ಮತ್ತು ದಯೆ ಹೊಂದಿದ್ದಾನೆ ಎಂದರೆ, ಅವನು ತನ್ನನ್ನು ತನ್ನ ಧ್ವನಿ, ಧ್ವನಿಯ ಕಂಪನವಾಗಿ ಪ್ರಸ್ತುತನಾಗಿದ್ದಾನೆ, ಯಾವುದನ್ನು ಪ್ರತಿಯೊಬ್ಬರೂ ತಮ್ಮ ನಾಲಿಗೆಯಿಂದ ಉತ್ಪತ್ತಿಗೊಳಿಸಬಲ್ಲರು ಮತ್ತು ಕೇಳಬಲ್ಲರು ಮತ್ತು ದೇವರು ಅಲ್ಲಿದ್ದಾನೆ."
|