"ಭಗವದ್ಗೀತೆಯಲ್ಲಿ ಭಗವಂತನು," ನನಗಿಂತ ಶ್ರೇಷ್ಠವಾದುದು ಏನೂ ಇಲ್ಲ "ಎಂದು ಹೇಳುತ್ತಾನೆ. ಆದ್ದರಿಂದ ಭಗವದ್ಗೀತೆಯ ಈ ಹೇಳಿಕೆಯನ್ನು ಶ್ರೀಮದ್ಭಾಗವತಮ್ ದಲ್ಲಿ ಕೂಡ ಈ ಶ್ಲೋಕದಿಂದ ದೃಡೀಕರಿಸಲಾಗಿದೆ. ಆನಂದ-ಮಾತ್ರಂ. ಕೃಷ್ಣನ ಈ ಅಲೌಕಿಕ ದೇಹದಲ್ಲಿ, ದೇವೋತ್ತಮ ಪರಮ ಪುರುಷ, ಇದು ಕೇವಲ ಆನಂದಮ್, ಆನಂದಮಯವಾಗಿದೆ. ಈ ದೇಹ, ನಮ್ಮ ಭೌತಿಕ ದೇಹ, ನಿರಾನಂದಮ್, ಆನಂದವಿಲ್ಲದಿರುವುದು ಎಂಬುದನ್ನು ನಾವು ಗಮನಿಸಬೇಕು. ನಮ್ಮ ಇಂದ್ರಿಯಗಳ ಸೀಮಿತ ಸಂಪನ್ಮೂಲಗಳಿಂದ ನಾವು ಆನಂದ ಅಥವಾ ಸಂತೋಷವನ್ನು ಹೊಂದಲು, ಅಡವಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದೇವೆ, ಆದರೆ ವಾಸ್ತವವಾಗಿ, ಯಾವುದೇ ಆನಂದ, ಪರಮ ಸುಖಗಳು ಇಲ್ಲ. ಇದು ಎಲ್ಲಾ ಶೋಚನೀಯವಾಗಿದೆ. ಈ ಶೋಚನೀಯ ದೇಹವನ್ನು ಪ್ರತಿಯೊಂದರಲ್ಲೂ ಖಂಡಿಸಲಾಗಿದೆ, ನಾನು ಹೇಳುವುದೆಂದೆರೆ ಬಹುಮಟ್ಟಿಗೆ, ಅಧ್ಯಾಯದಲ್ಲಿ ಮತ್ತು ಪ್ರತಿ ಶ್ಲೋಕದಲ್ಲಿ, ಪ್ರತಿ ಪದ್ಯದಲ್ಲಿ".
|