"ಒಬ್ಬರು ಕ್ರಷ್ಣನ ಸರ್ವೋಚ್ಚ ಸ್ವರೂಪವನ್ನು ಹೇಗೆ ನೋಡುತ್ತಾರೆ? ಸರಳವಾಗಿ, ಸೇವೆಯ ವಿಧಾನದಿಂದ. ಇಲ್ಲದಿದ್ದರೆ, ಅದು ಸಾಧ್ಯವಿಲ್ಲ. ಸೇವೆನ್ಮುಖೇ ಹಿ ಜಿಹ್ವಾದೌ (ಭಕ್ತಿ-ರಸಾಮೃತ -ಸಿಂಧು ೧.೨.೨೩೪ ). ನೀವು ಸೇವಾ ಮನೋಭಾವದಲ್ಲಿ ನಿರತರಾಗಿದ್ದರೆ, ದೇವರು ತನ್ನನ್ನು ತಾನೇ ಬಹಿರಂಗಪಡಿಸುತ್ತಾನೆ. ನೀವು ದೇವರನ್ನು ನೋಡಲಾಗುವುದಿಲ್ಲ. ನೀವು ... ನಿಮ್ಮ ಸಣ್ಣ ಪ್ರಯತ್ನದಿಂದ ನೀವು ದೇವರನ್ನು ನೋಡಲಾಗುವುದಿಲ್ಲ. ಇದು ಸಾಧ್ಯವಿಲ್ಲ. ಮಧ್ಯರಾತ್ರಿಯ ಹಾಗೆ, ಅಂಧಕಾರದಲ್ಲಿ, ಸೂರ್ಯನನ್ನು ನೋಡಲು ಸಾಧ್ಯವಿಲ್ಲ. ಯಾವಾಗ ಸೂರ್ಯನು ಸ್ವಪ್ರಕಟಗೊಳ್ಳುತ್ತಾನೋ ಆಗ ನೀವು ಸೂರ್ಯನನ್ನು ನೋಡಬಹುದು. ಸೂರ್ಯದಯಕ್ಕೆ ಸಮಯ ಇದೆ, ಬೆಳಿಗ್ಗೆ 4:30 ಅಥವಾ 5:00, ಒಮ್ಮೆಗೇ ಬಹಿರಂಗಪಡಿಸುತ್ತದೆ. ಮತ್ತು ಸೂರ್ಯನು ತನ್ನನ್ನು ಪ್ರಕಟಗೊಳಿಸಿದ ತಕ್ಷಣ, ನೀವೇ ನೋಡುತ್ತೀರಿ, ನೀವು ಸೂರ್ಯನನ್ನು ನೋಡುತ್ತೀರಿ ಮತ್ತು ನೀವು ಜಗತ್ತನ್ನು ನೋಡುತ್ತೀರಿ. ಮತ್ತು ಎಷ್ಟು ದಿನ ನೀವು ಸೂರ್ಯನನ್ನು ನೋಡುವುದಿಲ್ಲವೊ, ಅಲ್ಲಿಯವರುಗೂ ನೀವು ಕತ್ತಲೆಯಲ್ಲಿರುತ್ತೀರಿ, ಜಗತ್ತು ಕತ್ತಲೆಯಲ್ಲಿದೆ ಮತ್ತು ನೀವು ನೋಡಲಾಗುವುದಿಲ್ಲ. "
|