"ಆದ್ದರಿಂದ ಯಾರು ಅಭಿವೃದ್ಧಿಯ ಎರಡನೇ ಹಂತದಲ್ಲಿತ್ತಾನೋ ಅವನು ದೇವರನ್ನು ತಿಳಿದಿದ್ದಾನೆ, ಅವನು ದೇವರನ್ನು ಪ್ರೀತಿಸುತ್ತಾನೆ, ಮತ್ತು ದೇವರೊಂದಿಗಿನ ಸಂಬಂಧದಲ್ಲಿ ಅವನು ಭಕ್ತರನ್ನು ಪ್ರೀತಿಸುತ್ತಾನೆ ..., ಅವನು ದೇವರ ಭಕ್ತರೊಂದಿಗೆ ಸ್ನೇಹವನ್ನು ಮಾಡುತ್ತಾನೆ. ಈಶ್ವರೇ ತದ್-ಅಧೀನೇಷು ಬಾಲಿಶೇಷು ( ಶ್ರೀಮದ್ ಭಾ. ೧೧.೨.೪೬) ಮತ್ತು ಅಮಾಯಕರ ಬಗ್ಗೆ ... ಮುಗ್ಧರು ಎಂದರೆ ಅವರು ಅಪರಾಧಿಗಳಲ್ಲ, ಆದರೆ ಅವರಿಗೆ ದೇವರು ಎಂದರೇನು, ಅವನ ಸಂಬಂಧ ಏನು; ಎನ್ನುವುದು ಗೊತ್ತಿರುವುದಿಲ್ಲ, ಸಾಮಾನ್ಯ ಮನುಷ್ಯ. ಅವರಿಗೆ ಜ್ಞಾನೋದಯ ನೀಡುವುದು, ಕೃಷ್ಣ ಪ್ರಜ್ಞೆಯ ಎರಡನೇ ಹಂತದಲ್ಲಿರುವ ವ್ಯಕ್ತಿಯ ಕರ್ತವ್ಯ. ಮತ್ತು ಯಾರು ನಾಸ್ತಿಕರೋ, ಉದ್ದೇಶಪೂರ್ವಕವಾಗಿ ದೇವರ ವಿರುದ್ಧ, ಅವರಿಂದ ದೂರವಿರಬೇಕು . "
|