KN/670205 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಸ್ಯಾನ್ ಫ್ರಾನ್ಸಿಸ್ಕೋ

KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ಕರ್ಮಿ ಎಂದರೆ ಯಾರು ಸುಮ್ಮನೆ ಇಂದ್ರಿಯ ಸಂತೃಪ್ತಿಗಾಗಿ ಹಗಲು ರಾತ್ರಿ ಶ್ರಮಿಸುತ್ತಿರುತ್ತಾರೋ ಅವರು. ಅಷ್ಟೆ. ಅವರನ್ನು ಕರ್ಮಿ ಎಂದು ಕರೆಯಲಾಗುತ್ತದೆ. ಮತ್ತು ಜ್ಞಾನಿ ಎಂದರೆ ಅವರು ಮಾನಸಿಕ ಊಹಾಪೋಹಗಳಿಂದ ಪರಿಹಾರವನ್ನು ಕಂಡುಕೊಳ್ಳುತ್ತಿದ್ದಾರೆ. ಮತ್ತು ಯೋಗಿ ಎಂದರೆ ಅವರು ದೈಹಿಕ ವ್ಯಾಯಾಮದಿಂದ ಆಧ್ಯಾತ್ಮಿಕ ಮೋಕ್ಷವನ್ನು ಕಂಡುಹಿಡಿಯಲು ಪ್ರಯತ್ನಿಸುತ್ತಿದ್ದಾರೆ. ಅವರೆಲ್ಲರೂ, ಕಟ್ಟುನಿಟ್ಟಾದ ಅರ್ಥದಲ್ಲಿ ಭೌತವಾದಿಗಳು. ಆಧ್ಯಾತ್ಮಿಕವಾದದ ಪ್ರಶ್ನೆಯೇ ಇಲ್ಲ. ಆಧ್ಯಾತ್ಮಿಕತೆಯು ಅಲ್ಲಿ ಮಾತ್ರ ಎಲ್ಲಿ ಒಬ್ಬ ಆತ್ಮದ ಸಾಂವಿಧಾನಿಕ ಸ್ಥಾನ ಯಾವುದು ಎಂದು ಅರ್ಥಮಾಡಿಕೊಳ್ಳುತ್ತಾನೋ ಮತ್ತು ಅದಕ್ಕೆ ಅನುಗುಣವಾಗಿ ಕಾರ್ಯನಿರ್ವಹಿಸುತ್ತಾನೋ. ಆದ್ದರಿಂದ ಭಕ್ತಿ, ಈ ಭಕ್ತಿ ಸೇವೆ ಮಾತ್ರ ಆಧ್ಯಾತ್ಮಿಕತೆ, ಏಕೆಂದರೆ ಭಕ್ತರಾಗಿರುವವರು, ಅವರು ಶಾಶ್ವತವಾಗಿ ಸರ್ವೋತ್ತಮ ಭಗವಂತನ ಭಾಗ ಮತ್ತು ಅಂಶವೆಂದು ತಿಳಿದಿದ್ದಾರೆ ಮತ್ತು ಆದ್ದರಿಂದ ಪರಮಾತ್ಮನ ಅತೀಂದ್ರಿಯ ಪ್ರೀತಿಯ ಸೇವೆಯಲ್ಲಿ ತೊಡಗಿಸಿಕೊಳ್ಳುವುದು ಆಧ್ಯಾತ್ಮಿಕತೆ. "
670205 - ಉಪನ್ಯಾಸ ಚೈ. ಚ. ಆದಿ. ೦೭. ೩೯-೪೭ - ಸ್ಯಾನ್ ಫ್ರಾನ್ಸಿಸ್ಕೋ