"ಭಾಗವತ -ಧರ್ಮ ಎಂದರೆ ಪರಮಾತ್ಮನೊಂದಿಗೆ ವ್ಯವಹರಿಸುವುದು. ಹಲವು ರೀತಿಯ ವ್ಯವಹಾರಗಳಿವೆ. ಆದ್ದರಿಂದ ನಮ್ಮ ವ್ಯವಹಾರಗಳು ದೇವೋತ್ತಮ ಪರಮ ಪುರುಷನೊಂದಿಗೆ ಇದ್ದಾಗ ಅದನ್ನು ಭಾಗವತ -ಧರ್ಮ ಎಂದು ಕರೆಯಲಾಗುತ್ತದೆ.ಭಾಗವತ ಎಂದರೆ ಭಗವಾನ್ ಪದದಿಂದ. ಭಗವಾನ್ ಎಂದರೆ ಎಲ್ಲಾ ಆರು ಐಶ್ವರ್ಯಗಳನ್ನು ಪೂರ್ಣವಾಗಿ ಪಡೆದುಕೊಂಡಿರುವ ವ್ಯಕ್ತಿ. ಅವನನ್ನು ಭಗವಾನ್ ಅಥವಾ ದೇವರು ಎಂದು ಕರೆಯಲಾಗುತ್ತದೆ. ಪ್ರಪಂಚದ ಹೆಚ್ಚಿನ ಧರ್ಮಗ್ರಂಥಗಳಲ್ಲಿ ದೇವರ ಕಲ್ಪನೆ ಇದೆ, ಆದರೆ ವಾಸ್ತವವಾಗಿ ದೇವರ ವ್ಯಾಖ್ಯಾನವಿಲ್ಲ. ಆದರೆ ಶ್ರೀಮದ್ ಭಾಗವತಮ್ನಲ್ಲಿ ನೀವು ದೇವರೆಂದರೆ ಏನು ಅರ್ಥವೆಂದು ವ್ಯಾಖ್ಯಾನವಿದೆ, ಏಕೆಂದರೆ ಅದು ದೇವರ ವಿಜ್ಞಾನ. ವ್ಯಾಖ್ಯಾನವೆಂದರೆ ಯಾವೊಬ್ಬ ವ್ಯಕ್ತಿ ಆರೂ ಐಶ್ವರ್ಯಗಳನ್ನು ಪೂರ್ಣವಾಗಿ ಪಡೆದಿದ್ದಾನೋ, ಅವನು ದೇವರು. "
|