KN/670303b ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಸ್ಯಾನ್ ಫ್ರಾನ್ಸಿಸ್ಕೋ

KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ಆಡುತ್ತಿರುವ ಈ ಮಗು, ಅವನು ಈಗ, ಅವನು ಸಣ್ಣ ದೇಹವನ್ನು ಪಡೆದಿದ್ದಾನೆ. ಅದೇ ರೀತಿ, ಯಾವಾಗ ಅವನು ತನ್ನ ತಂದೆಯಂತೆ ದೇಹವನ್ನು ಪಡೆಯುತ್ತಾನೋ, ಅವನು ಅನೇಕ ದೇಹಗಳನ್ನು ಬದಲಾಯಿಸಬೇಕಾಗುತ್ತದೆ. ಎಷ್ಟೋ ದೇಹಗಳು. ಆದ್ದರಿಂದ ದೇಹಗಳು ಬದಲಾಗುತ್ತವೆ ಆದರೆ ಅವನು, ಆತ್ಮವು, ಹಾಗೆ ಇರುತ್ತದೆ. ಮತ್ತು ಈಗ, ಈ ಬಾಲ್ಯದಲ್ಲಿ, ಅಥವಾ ಅವನ ತಾಯಿಯ ಗರ್ಭದಲ್ಲಿ, ಅಥವಾ ದೇಹವು ತನ್ನ ತಂದೆಯ ಹಾಗೆಯೇ ಇರುವಾಗ, ಅಥವಾ ದೇಹವು ತನ್ನ ಅಜ್ಜನಂತೆಯೇ ಇರುವಾಗ-ಅದೇ ಆತ್ಮವು ಮುಂದುವರಿಯುತ್ತದೆ. ಆದ್ದರಿಂದ ಆತ್ಮವು ಶಾಶ್ವತವಾಗಿರುವುದು ಮತ್ತು ದೇಹವು ಬದಲಾಗುತ್ತಿರುತ್ತದೆ. ಇದನ್ನು ಭಗವದ್ಗೀತೆಯಲ್ಲಿ ವಿವರಿಸಲಾಗಿದೆ: ಅಂತವಂತ ಇಮೇ ದೇಹಾ ನಿತ್ಯಸ್ಯೋಕ್ತಾ ಶರೀರಿಣಃ ( ಭ. ಗೀತಾ ೨.೧೮). ಈ ದೇಹವು ತಾತ್ಕಾಲಿಕವಾಗಿದೆ, ತಾತ್ಕಾಲಿಕ. ಒಂದೋ ಈ ಬಾಲ್ಯದ ದೇಹ ಅಥವಾ ಕಿಶೋರಾವಸ್ಥೆಯ ದೇಹ ಅಥವಾ ಯೌವ್ವನದ ದೇಹ ಅಥವಾ ಪ್ರಬುದ್ಧ ದೇಹ ಅಥವಾ ಹಳೆಯ ದೇಹ, ಅವೆಲ್ಲವೂ ತಾತ್ಕಾಲಿಕ. ಪ್ರತಿ ಕ್ಷಣ, ಪ್ರತಿ ಸೆಕೆಂಡ್, ನಾವು ಬದಲಾಗುತ್ತಿದ್ದೇವೆ. ಆದರೆ ದೇಹದೊಳಗಿನ ಆತ್ಮ, ಅದು ಶಾಶ್ವತವಾಗಿದೆ. "
670303 - ಉಪನ್ಯಾಸ ಶ್ರೀ.ಭಾ. ೦೭.೦೬.೦೧ - ಸ್ಯಾನ್ ಫ್ರಾನ್ಸಿಸ್ಕೋ