"ಆದ್ದರಿಂದ ಕೆಲವೊಮ್ಮೆ, ಈ ಭೌತಿಕ ಜೀವನದ ಬಗ್ಗೆ ನಮಗೆ ಜಿಗುಪ್ಸೆ ಆದಾಗ, ನಾವು ಎಲ್ಲವನ್ನೂ ಮರೆಯಲು ಬಯಸುತ್ತೇವೆ. ಕೆಲವೊಮ್ಮೆ ಮನುಷ್ಯನು ಮಧ್ಯ ಪಾನ ಮಾಡಲು ಶುರು ಮಾಡುತ್ತಾನೆ: ಓಹ್, ವ್ಯವಹಾರದ ಆತಂಕ, ಎಷ್ಟೊಂದು ಚಿಂತೆಗಳು, ಪರಿಹರಿಸಲಾಗುವುದಿಲ್ಲ. ನಾನು ಮಧ್ಯ ಪಾನ ಮಾಡುತ್ತೇನೆ. ಆಹ್. "ಆದ್ದರಿಂದ ಕೆಲವೊಮ್ಮೆ ನಾವು ಎಲ್ಎಸ್ಡಿ ಅಥವಾ ಇತರ ಮಾದಕವಸ್ತುಗಳಾದ ಗಾಂಜಾ, ಪಾನ್ ಸೇವಿಸಲು ಶುರುಮಾಡುತ್ತೇವೆ. ಆದ್ದರಿಂದ ಇದು ... ಅಲ್ಲಿ ಸುಷುಪ್ತಿಯ ಇಚ್ಛೆ ಇದೆ, ಸುಷುಪ್ತಿಯ ಹಂತಕ್ಕೆ ಹೋಗುತ್ತದೆ. ಕೆಲವೊಮ್ಮೆ ಅವರು ಘಾಡ ನಿದ್ರೆ ಮಾಡಲು ಇಂಜೆಕ್ಷನ್ ತೆಗೆದುಕೊಳ್ಳುತ್ತಾರೆ. ಈಗ ನಿದ್ರಾ ಮಾತ್ರೆಗಳೂ ಸಹ ಇವೆ, ಇನ್ನೂ ಎಷ್ಟೋ ವಸ್ತುಗಳಿವೆ. ಆದ್ದರಿಂದ ವಾಸ್ತವವಾಗಿ, ಶುದ್ಧ ಚೇತನ ಆತ್ಮವಾಗಿ, ನಾನು ಮರೆಯಲು ಬಯಸುತ್ತೇನೆ, ಆದರೆ ನಾನು ಸತ್ಯವಾದ ಮಾರ್ಗವನ್ನು ಒಪ್ಪಿಕೊಳ್ಳದ ಕಾರಣ, ಈ ಬೌತಿಕ ವಸ್ತು ಅಸ್ತಿತ್ವದಿಂದ ಹೊರಬರುವುದು ಹೇಗೆ, ಆದ್ದರಿಂದ ನಾವು ಯಾವುದನ್ನಾದರೂ ಕಲ್ಪಿತ ವಿಧಾನಗಳನ್ನು ಸ್ವೀಕರಿಸಬೇಕು. ಅದು ನಮ್ಮನ್ನು ರಕ್ಷಿಸುವುದಿಲ್ಲ. ಅದು ನಮ್ಮನ್ನು ರಕ್ಷಿಸುವುದಿಲ್ಲ. "
|