KN/670318 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಸ್ಯಾನ್ ಫ್ರಾನ್ಸಿಸ್ಕೋ

KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ಶ್ರೀ ಚೈತನ್ಯ ಮಹಾಪ್ರಭುಗಳ ಮೊದಲು, ಶ್ರೀ ಕೃಷ್ಣನ ಗತಕಾಲಗಳ ಸ್ಥಳಗಳನ್ನು ಮರೆತುಬಿಟ್ಟಿದ್ದರು. 'ಈ ಭಾಗಗಳಲ್ಲಿ ಕೃಷ್ಣ ಹುಟ್ಟಿದ ಮತ್ತು ಅವನ ಕಾಲಕ್ಷೇಪಗಳನ್ನು ಇಲ್ಲಿ ಆಡಲಾಯಿತು' ಎಂದು ಮಾತ್ರ ಜನರಿಗೆ ತಿಳಿದಿತ್ತು. ಆದರೆ ಯಾವುದೇ ನಿರ್ದಿಷ್ಟ ಸ್ಥಳಗಳನ್ನು ಉತ್ಖನನ ಮಾಡಿರಲಿಲ್ಲ. ಆದರೆ ಚೈತನ್ಯ ಮಹಾಪ್ರಭು ... ಚೈತನ್ಯ ಮಹಾಪ್ರಭುಗಳು ಸನಾತನ ಗೋಸ್ವಾಮಿಯವರನ್ನು ಕಳುಹಿಸಿದ ನಂತರ, ಮಥುರಾ - ವೃಂದಾವನ ಎಂದು ಕರೆಯಲ್ಪಡುವ ಆ ಭೂ ಪ್ರದೇಶದ ಪ್ರಾಮುಖ್ಯತೆ ಬಹಳ ಮಹತ್ತಾಯಿತು. ಆ ನಗರದ ಮಹತ್ವವು ಈ ಸನಾತನ ಗೋಸ್ವಾಮಿಯಿಂದಾಗಿ, ಏಕೆಂದರೆ ಅಲ್ಲಿಗೆ ಹೋಗಿ ದೇವಾಲಯವನ್ನು ಸ್ಥಾಪಿಸಲು ಸನಾತನ ಗೋಸ್ವಾಮಿಯಾವರಿಗೆ ಅಧಿಕಾರ ನೀಡಲಾಯಿತು. ಆದ್ದರಿಂದ ಸನಾತನ ಗೋಸ್ವಾಮಿ ಮತ್ತು ರೂಪಾ ಗೋಸ್ವಾಮಿಗಳ ನಂತರ, ನೂರಾರು ಮತ್ತು ಸಾವಿರಾರು ದೇವಾಲಯಗಳನ್ನು ನಿರ್ಮಿಸಲಾಯಿತು, ಮತ್ತು ಸನಾತನ ಗೋಸ್ವಾಮಿಗಳ ನಂತರ ಅಲ್ಲಿ ಈಗ ಕನಿಷ್ಠ ಐದು ಸಾವಿರ ದೇವಾಲಯಗಳಿವೆ. "
670318 - ಉಪನ್ಯಾಸ ಚೈ ಚ ಆದಿ ೦೭.೧೪೯-೧೭೧ - ಸ್ಯಾನ್ ಫ್ರಾನ್ಸಿಸ್ಕೋ