KN/670327b ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಸ್ಯಾನ್ ಫ್ರಾನ್ಸಿಸ್ಕೋ

KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ಆದ್ದರಿಂದ ನನ್ನ ಪ್ರಸ್ತುತ ಕಾರ್ಯವು ಮತ್ತೊಂದು ಚಿತ್ತಾರವನ್ನು ಮುಂದಿನದಕ್ಕೆ ರಚಿಸುತ್ತಿದೆ. ಯಾವ ರೀತಿ ನನ್ನ ಹಿಂದಿನ ಚಟುವಟಿಕೆಗಳಂತೆ ನಾನು ಈ ದೇಹವನ್ನು ರಚಿಸಿದೆನೋ, ಅದೇ ರೀತಿ, ನನ್ನ ಪ್ರಸ್ತುತ ಚಟುವಟಿಕೆಗಳಿಂದ ಕೂಡ ನಾನು ನನ್ನ ಮುಂದಿನ ದೇಹವನ್ನು ರಚಿಸುತ್ತಿದ್ದೇನೆ. ಆದ್ದರಿಂದ ಆತ್ಮದ ಈ ವರ್ಗಾವಣೆ ನಡೆಯುತ್ತಾ ಇದೆ. ಆದರೆ ನೀವು ಈ ಕೃಷ್ಣ ಪ್ರಜ್ಞೆಯ ಪ್ರಕ್ರಿಯೆಯನ್ನು ಅಳವಡಿಸಿಕೊಂಡರೆ, ಆಗ ಕರ್ಮ-ಗ್ರಂಥಿ -ನಿಬಂಧನಮ್ ಚಿಂದಂತಿ. ಈ ಗಂಟು ಒಂದರ ನಂತರ ಒಂದರಂತೆ ಇದು ಕತ್ತರಿಸಲ್ಪಡುತ್ತದೆ. ಆದ್ದರಿಂದ ಅದು ತುಂಬಾ ಚೆನ್ನಾಗಿದ್ದರೆ ... ಭಾಗವತ ಹೇಳುತ್ತದೆ 'ಯದ್ ಅನುಧ್ಯಾಸಿನಾ' ಎಂದು. ಸುಮ್ಮನೆ ಈ ಪ್ರಕ್ರಿಯೆಯನ್ನು ಅನುಸರಿಸುವ ಮೂಲಕ, ಯದ್ ಅನುಧ್ಯಾಸಿನಾ ಯುಕ್ತಾಹ, ತೊಡಗಿಸಿಕೊಂಡಿರುವುದು, ಕರ್ಮ-ಬಂಧ-ನಿಬಂಧನಂ, ನಮ್ಮ ಕರ್ಮಾಫಲಗಳ ತುಂಡುಗಳನ್ನು ಒಂದರ ನಂತರ ಒಂದಾಗಿ, ಚಿಂದಂತಿ, ಕತ್ತರಿಸಲ್ಪಡತ್ತೆ. ಕೋವಿದಾಹ, ಒಬ್ಬ ಬುದ್ಧಿವಂತ ಮನುಷ್ಯ ಇದ್ದರೆ, ತಸ್ಯ ಕೋ ನಾ ಕುರ್ಯಾತ್ ಕಥಾ-ರತಿಂ. ಕೃಷ್ಣನ ವಿಷಯಗಳ ಬಗ್ಗೆ ಕೇಳಲು ಬುದ್ಧಿವಂತ ಮನುಷ್ಯ ಸ್ವತಃ ಏಕೆ ತೊಡಗಿಸಿಕೊಳ್ಳಬಾರದು? ಏನಾದರೂ ಅಡಚಣೆಗಳು ಇವೆಯೇ ? "
670327 - ಉಪನ್ಯಾಸ ಶ್ರೀ.ಭಾ. ೦೧.೦೨.೧೪-೧೬ - ಸ್ಯಾನ್ ಫ್ರಾನ್ಸಿಸ್ಕೋ