KN/670326 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಸ್ಯಾನ್ ಫ್ರಾನ್ಸಿಸ್ಕೋ

KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ನೀವು ನನ್ನನ್ನು ತಿಳಿದುಕೊಳ್ಳಲು ಅಥವಾ ನನ್ನ ಬಗ್ಗೆ ಏನಾದರೂ ತಿಳಿದುಕೊಳ್ಳಲು ಬಯಸಿದರೆ, ನೀವು ಕೆಲವು ಸ್ನೇಹಿತರನ್ನು ಕೇಳಬಹುದು," ಓಹ್, ಸ್ವಾಮಿಜಿ ಹೇಗಿದ್ದಾರೆ? "ಅವನು ಏನನ್ನಾದರೂ ಹೇಳಬಹುದು; ಇತರರು ಬೇರೆಯನ್ನೇನ್ನಾದರೂ. ಆದರೆ ನಾನು ನಿಮಗೆ ನಾನೇ ವಿವರಿಸಿದಾಗ," ಇದು ನನ್ನ ಸ್ಥಾನ. ನಾನು ಇದು, "ಅದು ಪರಿಪೂರ್ಣ. ಅದು ಪರಿಪೂರ್ಣ. ಆದ್ದರಿಂದ ನೀವು ಪರಿಪೂರ್ಣನಾದ ದೇವೋತ್ತಮ ಪರಮ ಪುರುಷನನ್ನು ತಿಳಿದುಕೊಳ್ಳಲು ಬಯಸಿದರೆ, ನೀವು ಊಹಿಸಲು ಸಾಧ್ಯವಿಲ್ಲ, ಧ್ಯಾನಿಸಲೂಬಾರದೂ. ಅದು ಸಾಧ್ಯವಿಲ್ಲ, ಏಕೆಂದರೆ ನಿಮ್ಮ ಇಂದ್ರಿಯಗಳು ಬಹಳ ಅಸಮಗ್ರವಾಗಿವೆ. ಆದ್ದರಿಂದ ದಾರಿ ಏನು? "ಸುಮ್ಮನೆ ಅವನಿಂದ ಕೇಳಿ. ಆದ್ದರಿಂದ ಅವನು ಭಗವದ್ಗೀತೆ ಹೇಳಲು ದಯೆಯಿಂದ ಬಂದಿದ್ದಾನೆ. ಶ್ರೋತವ್ಯ: " ಸುಮ್ಮನೆ ಕೇಳಲು ಪ್ರಯತ್ನಿಸಿ. " ಶ್ರೋತವ್ಯ ಮತ್ತು ಕೀರ್ತಿತವ್ಯಸ್ ಚ. ನೀವು ಕೃಷ್ಣ ಪ್ರಜ್ಞೆಯ ತರಗತಿಯಲ್ಲಿ ಸುಮ್ಮನೆ ಕೇಳಿದರೆ ಮತ್ತು ಕೇಳಿದರೆ, ಮತ್ತು ಹೊರಗೆ ಹೋಗಿ ಮರೆತುಬಿಟ್ಟರೆ, ಓಹ್, ಅದು ಚೆನ್ನಾಗಿರುವುದಿಲ್ಲ. ಅದು ನಿಮ್ಮನ್ನು ಸುಧಾರಿಸುವುದಿಲ್ಲ. ನಂತರ, ಏನು? ಕೀರ್ತಿತವ್ಯಸ್ ಚ: "ನೀವು ಏನು ಕೇಳುತ್ತಿದ್ದರೂ, ನೀವು ಇತರರಿಗೆ ಹೇಳಬೇಕು." ಅದು ಪರಿಪೂರ್ಣತೆ."
670326 - ಉಪನ್ಯಾಸ ಶ್ರೀ.ಭಾ. ೦೧ .೦೨ .೧೨ -೧೪ ಮತ್ತು ಜಗನ್ನಾಥ ದೇವತೆಗಳ ಸ್ಥಾಪನೆ - ಸ್ಯಾನ್ ಫ್ರಾನ್ಸಿಸ್ಕೋ