KN/680320 ಮುಂಜಾನೆಯ ವಾಯು ವಿಹಾರ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಸ್ಯಾನ್ ಫ್ರಾನ್ಸಿಸ್ಕೋ

KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ಜೀವಿಯನ್ನು ಭಗವದ್ಗೀತೆಯಲ್ಲಿ ಸರ್ವಗ ಎಂದು ವಿವರಿಸಲಾಗಿದೆ. ಸರ್ವಗ ಎಂದರೆ ಅವನು ಈ ಬ್ರಹ್ಮಾಂಡದೊಳಗೆ ಎಲ್ಲಿ ಬೇಕಾದರೂ ಹೋಗಬಹುದು. ಅವನು ಆಧ್ಯಾತ್ಮಿಕ ಆಕಾಶದಲ್ಲಿಯೂ ಹೋಗಬಹುದು. ಸರ್ವಗಾ ಎಂದರೆ ಎಲ್ಲೆಡೆ ಸೇರಿದಂತೆ, ಅವನು ಇಷ್ಟಪಟ್ಟರೆ. ನಾನು ನಿನ್ನೆ ರಾತ್ರಿ ವಿವರಿಸಿದಂತೆ, ಯಾಂತಿ ದೇವಾ-ವ್ರತಾ ದೇವಾನ್ ( ಭ ಗೀತಾ ೯.೨೫). ಅವನು ಇಷ್ಟಪಟ್ಟರೆ, ಅವನು ದೇವತೆಗಳ ಗ್ರಹಗಳಿಗೆ, ಪಿತೃಲೋಕಕ್ಕೆ ಹೋಗಬಹುದು, ಅವನು ಇಲ್ಲಿಯೇ ಉಳಿಯಬಹುದು, ಅಥವಾ ಅವನು ಇಷ್ಟಪಟ್ಟರೆ ಅವನು ಕೃಷ್ಣನ ಲೋಕಕ್ಕೆ ಹೋಗಬಹುದು. ಅವನಿಗೆ ಈ ಸ್ವಾತಂತ್ರ್ಯ ಲಭಿಸಿದೆ. ಅನೇಕ ಸರ್ಕಾರಿ ಹುದ್ದೆಗಳಿರುವಂತೆ. ಅವುಗಳಲ್ಲಿ ಯಾವುದಾದರೂ ಒಂದನ್ನು ನೀವು ಆಯ್ಕೆ ಮಾಡಬಹುದು, ಆದರೆ ನೀವು ಅದಕ್ಕೆ ಅರ್ಹರಾಗಿರಬೇಕು. ಆದ್ದರಿಂದ ಇದು ಅರ್ಹತೆಯ ಪ್ರಶ್ನೆಯಾಗಿದೆ, ನೀವು ಹೇಗೆ ದೇವತೆಗಳ ಗ್ರಹಗಳಿಗೆ ಹೋಗಬಹುದು, ನೀವು ಹೇಗೆ ಪಿತೃಗಳ ಗ್ರಹಕ್ಕೆ ಹೋಗಬಹುದು "
680320 - ಮುಂಜಾನೆಯ ವಾಯು ವಿಹಾರ ಆಯ್ದ ಭಾಗಗಳು - ಸ್ಯಾನ್ ಫ್ರಾನ್ಸಿಸ್ಕೋ