" ಸುಖದೇವ ಗೋಸ್ವಾಮಿ ಹೇಳುತ್ತಾರೆ, 'ತತಸ್ ಚಾನು ಅನುದಿನಂ'. ಅನುದಿನಂ ಅಂದರೆ 'ದಿನಗಳು ಕಳೆದಂತೆ'. ಹಾಗಾದರೆ ಏನು ಲಕ್ಷಣಗಳು ಇರುತ್ತವೇ ? ಈಗ, ನಾಂಕ್ಷತಿ. ನಾಂಕ್ಷತಿ ಅಂದರೆ ಕ್ರಮೇಣವಾಗಿ ಕ್ಷೀಣಿಸುವುದು ಎಂದರ್ಥ, ಕ್ಷೀಣಿಸುವುದು. ಯಾವುದು ಕ್ಷೀಣಿಸುವುದು ? ಧರ್ಮ, ಧಾರ್ಮಿಕತೆ; ಸತ್ಯಂ, ಸತ್ಯತೆ; ಶೌಚಂ, ಶೌಚ್ಯತೇ; ಕ್ಷಮಾ, ಕ್ಷಮತೆ; ದಯಾ, ದಯೆ; ಆಯುಹ್, ಜೀವನದ ಅವಧಿ; ಬಲ, ಶಕ್ತಿ; ಮತ್ತು ಸ್ಮ್ರತಿ, ಜ್ಞಾಪಕ; ಈ ಎಂಟು ವಿಷಯಗಳನ್ನು ತಿಳಿದುಕೊಳ್ಳಲು ಪ್ರಯತ್ನಿಸಿ. ಮೊದಲ ವಿಷಯ ಧಾರ್ಮಿಕತೆ. ಕಲಿಯುಗದ ಕಾಲವು ಹೆಚ್ಚುತ್ತಿದ್ದಂತೆ, ಜನರು ಹೆಚ್ಚು ಹೆಚ್ಚು ಅಧರ್ಮಿಗಳಾಗುತ್ತಾರೆ. ಮತ್ತು ಅವರು ಹೆಚ್ಚು ಹೆಚ್ಚು ಸುಳ್ಳುಗಾರರಾಗುತ್ತಾರೆ. ಅವರು ಏನು ಸತ್ಯವೋ ಅದನ್ನು ಮಾತಾಡಲು ಮರೆಯುತ್ತಾರೆ. ಶೌಚಂ, ಶೌಚ್ಯತೇ, ಅದೂ ಕೂಡ ಕ್ಷೀಣವಾಗುತ್ತದೆ.
|