"ಬ್ರಹ್ಮ-ಕರ್ಮ. ದೇವೋತ್ತಮ ಪರಮ ಪುರುಷನೇ ಬ್ರಹ್ಮನ್, ಬ್ರಹ್ಮನ ಕೊನೆಯ ಶಬ್ದ. ಆದ್ದರಿಂದ ನೀವು ನಿಮ್ಮನ್ನು ತೊಡಗಿಸಿಕೊಳ್ಳಬೇಕು, ಬ್ರಹ್ಮ-ಕರ್ಮ ಎಂದರೆ ಕೃಷ್ಣ ಪ್ರಜ್ಞೆ. ಮತ್ತು, ನೀವು ಸತ್ಯವಂತರು, ನೀವು ಇಂದ್ರಿಯ ನಿಯಂತ್ರಣಗಳ ನಿಗ್ರಹಕಾರರು, ಮನಸ್ಸಿನ ಮೇಲೆ ನಿಯಂತ್ರಣ, ಮತ್ತು ನೀವು ಸರಳ ಮತ್ತು ನೀವು ಸಹಿಷ್ಣುಗಳು ಎಂಬುದಾಗಿ ನಿಮ್ಮ ಗುಣಗಳನ್ನು ಪ್ರದರ್ಶಿಸಿ. ಏಕೆಂದರೆ ನೀವು ಆಧ್ಯಾತ್ಮಿಕ ಜೀವನವನ್ನು ಕೈಗೆತ್ತಿಕೊಂಡ ಕೂಡಲೇ, ಮಾಯೆ ನಡೆಸಿದ ಇಡೀ ವರ್ಗದವರು ನಿಮ್ಮ ವಿರುದ್ಧವಾಗಿರುತ್ತಾರೆ. ಅದು ಮಾಯೆಯ ಪ್ರಭಾವ. ಕೆಲವರು ಟೀಕಿಸುತ್ತಾರೆ, ಕೆಲವರು ಇದನ್ನು ಮಾಡುತ್ತಾರೆ, ಕೆಲವರು ಅದನ್ನು ಮಾಡುತ್ತಾರೆ, ಆದರೆ ನಾವು ... ನಾವು ಸಹಿಷ್ಣುಗಳಾಗಬೇಕು. ಇದು ಈ ಭೌತಿಕ ಪ್ರಪಂಚದ ಕಾಯಿಲೆ. ಯಾರಾದರೂ ಆಧ್ಯಾತ್ಮಿಕವಾಗಿ ಮುಂದುವರಿದರೆ, ಮಾಯೆಯ ಮಾಧ್ಯಮಿಗಳು ಟೀಕಿಸುತ್ತಾರೆ. ಆದ್ದರಿಂದ ನೀವು ಸಹಿಷ್ಣುಗಳಾಗಬೇಕು."
|