"ಹರೇ ಕೃಷ್ಣ, ಹರೇ ಕೃಷ್ಣ, ಕ್ರಷ್ಣ ಕ್ರಷ್ಣ, ಹರೇ ಹರೇ / ಹರೇ ರಾಮ, ಹರೇ ರಾಮ, ರಾಮ ರಾಮ, ಹರೇ ಹರೇ ಎನ್ನುವ ಈ ಜಪವು ಅತೀಂದ್ರಿಯ ಕಂಪನ, ಧ್ವನಿ. ಧ್ವನಿಯು ಎಲ್ಲಾ ಸೃಷ್ಟಿಯ ಮೂಲವಾಗಿದೆ. ಆದ್ದರಿಂದ ಈ ಅತೀಂದ್ರಿಯ ಧ್ವನಿ, ನೀವು ಕಂಪಿಸಿದರೆ, ಕ್ರಷ್ಣ ಪ್ರಜ್ಞೆಯ ಈ ತತ್ವಶಾಸ್ತ್ರವನ್ನು ನೀವು ಬೇಗನೆ ಅರ್ಥಮಾಡಿಕೊಳ್ಳುವಿರಿ. ಮತ್ತು ನಿಮಗೆ ಯಾವುದೇ ನಷ್ಟವಿಲ್ಲ. ನೀವು ಹರೇ ಕ್ರಷ್ಣ ಎಂದು ಜಪಿಸುತ್ತೀರಿ ಎಂದು ಭಾವಿಸೋಣ; ನೀವು ಏನನ್ನೂ ಕಳೆದುಕೊಳ್ಳುವುದಿಲ್ಲ. ಆದರೆ ಅದರಲ್ಲಿ ಯಾವುದಾದರೂ ಪ್ರಯೋಜನವಿದ್ದರೆ, ನೀವು ಅದನ್ನು ಏಕೆ ಪ್ರಯತ್ನಿಸಬಾರದು? ನಾವು ನಿಮ್ಮನ್ನು ಕೈ ಮುಗಿದು ಸುಮ್ಮನೆ ವಿನಂತಿಸುತ್ತೇವೆ ದಯವಿಟ್ಟು ನೀವು ಹರೇ ಕ್ರಷ್ಣ ಮಂತ್ರವನ್ನು ಜಪಿಸುವಂತೆ. ನಾವು ಸುಮ್ಮನೆ ನಿಮ್ಮನ್ನು ವಿನಂತಿಸುತ್ತಿದ್ದೇವೆ, ನಮಗೆ ಏನನ್ನಾದರೂ ಪಾವತಿಸಲು ಅಥವಾ ಏನನ್ನಾದರೂ ಅನುಭವಿಸಲು ಅಥವಾ ಶಿಕ್ಷಣವನ್ನು ಪಡೆಯಲು ಅಥವಾ ಎಂಜಿನಿಯರ್ ಆಗಲು ಅಥವಾ ವಕೀಲರಾಗಿ ನಂತರ ನಮ್ಮ ಬಳಿಗೆ ಬನ್ನಿ ಎಂದು ನಾವು ನಿಮ್ಮನ್ನು ಕೇಳುತ್ತಿಲ್ಲ. ನೀವು ಏನಾಗಿದ್ದರೂ ಪರವಾಗಿಲ್ಲ, ನಿಮ್ಮ ಸ್ಥಿತಿಯಲ್ಲಿರಿ. ಸುಮ್ಮನೆ ಈ ಹದಿನಾರು ಪದಗಳಾದ ಹರೇ ಕ್ರಷ್ಣ, ಹರೇ ಕ್ರಷ್ಣ, ಕ್ರಷ್ಣ, ಹರೇ ಹರೇ / ಹರೇ ರಾಮ, ಹರೇ ರಾಮ, ರಾಮ ರಾಮ, ಹರೇ ಹರೇ ಎಂದು ಜಪಿಸಲು ಪ್ರಯತ್ನಿಸಿ."
|