"ಒಬ್ಬ ವ್ಯಕ್ತಿಯು ಆಧ್ಯಾತ್ಮಿಕ ಜಗತ್ತಿಗೆ ಅಥವಾ ದೇವರ ಲೋಕಕ್ಕೆ ಹೇಗೆ ಸುಲಭವಾಗಿ ಪ್ರವೇಶಿಸಬಹುದು ಎಂಬುದನ್ನು ಕೃಷ್ಣ ವಿವರಿಸುತ್ತಿದ್ದಾನೆ. ಸರಳ ಸೂತ್ರವೆಂದರೆ ಯಾರು ಭಗವಂತನ ನೋಟ, ಕಣ್ಮರೆ, ಚಟುವಟಿಕೆಗಳನ್ನು ದಿವ್ಯಾಮ್ ಎಂದು ತಿಳಿಯುತ್ತಾರೋ, ಅತೀಂದ್ರಿಯ, ಪರಿಪೂರ್ಣ ಸತ್ಯದ ಪರಿಪೂರ್ಣ ಜ್ಞಾನದೊಂದಿಗೆ ಅರ್ಥಮಾಡಿಕೊಳ್ಳುವ ಯಾರಾದರೂ , ಈ ತಿಳುವಳಿಕೆಯಿಂದ ಒಬ್ಬರು ತಕ್ಷಣವೇ ಆಧ್ಯಾತ್ಮಿಕ ಲೋಕಕ್ಕೆ ಪ್ರವೇಶಿಸಬಹುದು. ಸಂಪೂರ್ಣ ಸತ್ಯವನ್ನು ತಿಳಿದುಕೊಳ್ಳುವುದು ನಮ್ಮ ಪ್ರಸ್ತುತ ಇಂದ್ರಿಯಗಳಿಂದ ಸಾಧ್ಯವಿಲ್ಲ. ಅದು ಕೂಡ ಮತ್ತೊಂದು ಸತ್ಯ. ಏಕೆಂದರೆ ಪ್ರಸ್ತುತ ಕ್ಷಣದಲ್ಲಿ ನಾವು ಭೌತಿಕವಾಗಿ ಸಿಕ್ಕಿದ್ದೇವೆ ..., ಭೌತಿಕವಾಗಿ ಪರಿಣಾಮಕ್ಕೀಡಾಗಿದ್ದೀವಿ; ಭೌತಿಕ ಇಂದ್ರಿಯಗಳಲ್ಲ. ನಮ್ಮ ಇಂದ್ರಿಯಗಳು ಮೂಲತಃ ಆಧ್ಯಾತ್ಮಿಕವಾಗಿದೆ, ಆದರೆ ಅದು ವಸ್ತು ಮಾಲಿನ್ಯದಿಂದ ಆವೃತವಾಗಿದೆ. ಆದ್ದರಿಂದ ಈ ಪ್ರಕ್ರಿಯೆಯು ಶುದ್ಧೀಕರಿಸುವುದು, ನಮ್ಮ ಭೌತಿಕ ಅಸ್ತಿತ್ವದ ಹೊದಿಕೆಗಳನ್ನು ಶುದ್ಧೀಕರಿಸುವುದು. ಮತ್ತು ಇದನ್ನು ಸಹ ಶಿಫಾರಸು ಮಾಡಲಾಗಿದೆ-ಕೇವಲ ಸೇವಾ ಮನೋಭಾವದಿಂದ. "
|