KN/680620 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಮಾಂಟ್ರಿಯಲ್

KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ಕೃಷ್ಣನು ಎಲ್ಲರ ಹೃದಯದಲ್ಲಿ ಉಪಸ್ಥಿತನಾಗಿದ್ದಾನೆ. ಅದು ನಾನು ಸನ್ಯಾಸಿ ಆಗಿರುವುದರಿಂದ, ಕೃಷ್ಣ ನನ್ನ ಹೃದಯದೊಳಗೆ ಕುಳಿತಿದ್ದಾನೆ ಎಂದಿಲ್ಲ. ಇಲ್ಲ. ಕೃಷ್ಣ ಎಲ್ಲರ ಹೃದಯದಲ್ಲಿ ಕುಳಿತಿದ್ದಾನೆ. ಈಶ್ವರಃ ಸರ್ವ - ಭೂತಾನಾಮ್ ಹ್ರದ್ಧೇಷೆರ್ಜುನ ತಿಷ್ಠತಿ (ಭ.ಗೀತಾ ೧೮.೬೧). ಆದ್ದರಿಂದ ... ಮತ್ತು ಅವನು ಭಾವನಾತ್ಮಕ. ಅವನು ಜ್ಞಾನದಲ್ಲಿ ಪರಿಪೂರ್ಣ. ಆದ್ದರಿಂದ ಈ ನಿರ್ದಿಷ್ಟ ಕ್ರಿಯೆ, ಒಬ್ಬರು ಕೃಷ್ಣನನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ, ಅದು ಕೃಷ್ಣನನ್ನು ಬಹಳ ಸಂತೋಷಪಡಿಸುತ್ತದೆ. ಏಕೆಂದರೆ ನೀವು ದಯೆಯಿಂದ ಇಲ್ಲಿಗೆ ಬಂದಿದ್ದೀರಿ, ಆದ್ದರಿಂದ ಕೃಷ್ಣ ನಿಮ್ಮೊಳಗಿದ್ದಾನೆ, ಮತ್ತು ನೀವು ತಾಳ್ಮೆಯಿಂದ ಕೇಳುವ ಕಾರಣ, ಅವನು ಈಗಾಗಲೇ ಸಂತೋಷಗೊಂಡಿದ್ದಾನೆ. ಅವನು ಈಗಾಗಲೇ ನಿಮ್ಮ ಬಗ್ಗೆ ಸಂತೋಷಪಟ್ಟಿದ್ದಾನೆ. ಮತ್ತು ಇದರ ಪರಿಣಾಮವೆಂದರೆ ಶೃಣ್ವತಾಂ ಸ್ವ-ಕಥಾ ಕೃಷ್ಣ ಪುಣ್ಯ-ಶ್ರವಣ- ಕೀರ್ತನಃ, ಹೃದಿ ಅಂತಃ ಸ್ತೋ ಹಿ ಅಭದ್ರಾಣಿ. ಅಭದ್ರ ಎಂದರೆ ಅನಾದಿ ಕಾಲದಿಂದಲೂ ನಾವು ನಮ್ಮ ಹೃದಯದಲ್ಲಿ ಸಂಗ್ರಹಿಸಿರುವ ಅಸಹ್ಯ ಸಂಗತಿಗಳು. "
680620 - ಉಪನ್ಯಾಸ ಶ್ರೀ.ಭಾ. ೦೧.೦೪.೨೫ - ಮಾಂಟ್ರಿಯಲ್