"ಪೂರ್ವ ಭಾಗವು ಸೂರ್ಯನ ತಾಯಿ ಎಂದು ನೀವು ಭಾವಿಸುತ್ತೀರಾ? ಸೂರ್ಯನು ಪೂರ್ವದಿಂದ ಹುಟ್ಟಿದ್ದರಿಂದ, ಪೂರ್ವ ಭಾಗವು ಸೂರ್ಯನ ತಾಯಿ ಎಂದು ನೀವು ಅದನ್ನು ಗಣನೆಗೆ ತೆಗೆದುಕೊಳ್ಳಬಹುದು. ಅದೇ ರೀತಿ, ಕೃಷ್ಣನು ಇದೇ ವಿದಧಲ್ಲಿ ಕಾಣಿಸಿಕೊಳ್ಳುತ್ತಾನೆ, ಆದರೆ ಅವನು ಹುಟ್ಟಿದ್ದಾನೆ ಎಂದು ಇದರ ಅರ್ಥವಲ್ಲ. ಭಗವದ್ಗೀತೆಯ ನಾಲ್ಕನೇ ಅಧ್ಯಾಯದಲ್ಲಿ ಹೇಳಲಾಗಿದೆ: ಜನ್ಮ ಕರ್ಮ ಮೇ ದಿವ್ಯಮ್ ಯೋ ಜಾನಾತಿ ತತ್ತ್ವತಃ. 'ಯಾರಾದರೂ ಹೇಗೆ ನಾನು ಜನಿಸುತ್ತೇನೆ, ನಾನು ಹೇಗೆ ಕೆಲಸ ಮಾಡುತ್ತೇನೆ, ನಾನು ಹೇಗೆ ಅತೀಂದ್ರಿಯನಾಗಿದ್ದೇನೆ ಎಂದು ಅರ್ಥ ಮಾಡಿಕೊಳ್ಳುತ್ತಾರೋ.......' ಸರಳವಾಗಿ ಈ ಮೂರು ವಿಷಯಗಳನ್ನು ತಿಳಿದುಕೊಳ್ಳುವ ಮೂಲಕ- ಕೃಷ್ಣ ಹೇಗೆ ಜನಿಸುತ್ತಾನೆ, ಮತ್ತು ಅವನು ಹೇಗೆ ಕೆಲಸ ಮಾಡುತ್ತಾನೆ ಮತ್ತು ಅವನ ನಿಜವಾದ ಸ್ಥಾನ ಯಾವುದು-ಇದರ ಫಲಿತಾಂಶವೆಂದರೆ ತ್ಯಕ್ತ್ವಾ ದೇಹಂ ಪುನರ್ ಜನ್ಮ ನೈತಿ ಮಾಂ ಏತಿ ಕೌನ್ತೇಯ:(ಭ. ಗೀತಾ ೪.೯) 'ನನ್ನ ಪ್ರಿಯ ಅರ್ಜುನ, ಸರಳವಾಗಿ ಈ ಮೂರು ವಿಷಯಗಳನ್ನು ತಿಳಿದುಕೊಂಡರೆ, ಈ ಭೌತಿಕ ದೇಹವನ್ನು ತ್ಯಜಿಸಿದ ನಂತರ ಒಬ್ಬರು ನನ್ನ ಬಳಿಗೆ ಬರುತ್ತಾರೆ'. ಆದ್ದರಿಂದ ಇದರರ್ಥ, ಬೇರೆ ರೀತಿಯಲ್ಲಿ ಹೇಳುವುದಾದರೆ, ನೀವು ಕೃಷ್ಣನ ಜನನವನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾದರೆ, ನಿಮ್ಮ ಮುಂದಿನ ಜನ್ಮವನ್ನು ನೀವು ಸ್ಥಗಿತಗೊಳ್ಳಿಸುತ್ತೀರ. ಈ ಜನನ ಮತ್ತು ಮರಣದಿಂದ ನೀವು ಮುಕ್ತರಾಗುತ್ತೀರಿ. ಆದ್ದರಿಂದ ಕೃಷ್ಣನು ತನ್ನ ಜನ್ಮವನ್ನು ಹೇಗೆ ಪಡೆಯುತ್ತಾನೆ ಎಂಬುದನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿ. "
|