ಆದ್ದರಿಂದ ಭಗವದ್ಗೀತೆಯನ್ನು ಅರ್ಥಮಾಡಿಕೊಂಡ ನಂತರ, "ನಾನು ಕೃಷ್ಣನ ಸೇವೆಗಾಗಿ ನನ್ನ ಜೀವನವನ್ನು ಮುಡಿಪಾಗಿಡುತ್ತೇನೆ" ಎಂದು ಒಬ್ಬನು ಶ್ರದ್ಧಾವಂತನಾದರೆ, ಆಗ ಅವನು ಶ್ರೀಮದ್ ಭಾಗವತಮ್ ಅಧ್ಯಯನಕ್ಕೆ ಪ್ರವೇಶಿಸಲು ಅರ್ಹನಾಗಿರುತ್ತಾನೆ. ಅಂದರೆ ಭಗವದ್ಗೀತೆ ಕೊನೆಗೊಳ್ಳುವ ಸ್ಥಳದಿಂದ ಶ್ರೀಮದ್ -ಭಾಗವತಮ್ ಪ್ರಾರಂಭವಾಗುತ್ತದೆ. ಭಗವದ್ಗೀತೆ ಈ ಶ್ಲೋಕದಲ್ಲಿ ಕೊನೆಗೊಳ್ಳುತ್ತದೆ, ಸರ್ವ-ಧರ್ಮಾನ್ ಪರಿತ್ಯಜ್ಯ ಮಾಮ್ ಏಕಂ ಶರಣಂ ವ್ರಜ(ಭ. ಗೀತಾ ೧೮.೬೬). ಒಬ್ಬರು ಕೃಷ್ಣನಿಗೆ ಸಂಪೂರ್ಣವಾಗಿ ಶರಣಾಗಬೇಕು, ಇತರ ಎಲ್ಲ ವ್ಯವಹಾರಗಳನ್ನು ತ್ಯಜಿಸಬೇಕು. ಯಾವಾಗಲೂ ನೆನಪಿಡಿ, ಇತರ ವ್ಯವಹಾರಗಳು ಎಂದರೆ ನೀವು ಎಲ್ಲವನ್ನು ಬಿಟ್ಟುಬಿಡಬೇಕೆಂದು ಅಲ್ಲ. ನೀವು ... "ನೀವು ಎಲ್ಲವನ್ನೂ ಬಿಟ್ಟುಬಿಡಿ ಮತ್ತು ನನಗೆ ಶರಣಾಗು" ಎಂದು ಕೃಷ್ಣ ಹೇಳಿದ್ದನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿ. ಆದ್ದರಿಂದ ಅರ್ಜುನನು ತನ್ನ ಹೋರಾಟದ ಸಾಮರ್ಥ್ಯವನ್ನು ತ್ಯಜಿಸಿದನೆಂದು ಇದರ ಅರ್ಥವಲ್ಲ. ಬದಲಾಗಿ, ಅವನು ಹೆಚ್ಚು ತೀವ್ರವಾಗಿ ಹೋರಾಡಲು ಮುಂದಾದನು."
|