"ಭಗವದ್ಗೀತೆಯಲ್ಲಿ ಎರಡು ಪ್ರಜ್ಞೆಯ ವಿವರಣೆಗಳಿವೆ. ನನ್ನ ದೇಹದಾದ್ಯಂತ ನನಗೆ ಪ್ರಜ್ಞೆ ಇರುವಂತೆಯೇ. ನೀವು ನನ್ನ ದೇಹದ ಯಾವುದೇ ಭಾಗವನ್ನು ಚಿವುಟಿದರೆ, ಆಗ ನನಗೆ ಅನುಭವವಾಗುತ್ತದೆ. ಅದು ನನ್ನ ಪ್ರಜ್ಞೆ. ಆದ್ದರಿಂದ ನಾನು ಹರಡಿಕೊಂಡಿದ್ದೇನೆ..., ನನ್ನ ಪ್ರಜ್ಞೆ ಇದು ನನ್ನ ದೇಹದಾದ್ಯಂತ ಹರಡಿದೆ. ಇದನ್ನು ಭಗವದ್ಗೀತೆಯಲ್ಲಿ ವಿವರಿಸಲಾಗಿದೆ, ಅವಿನಾಶಿ ತದ್ ವಿದ್ಧಿ ಯೇನ ಸರ್ವಂ ಇದಂ ತತಂ(ಭ. ಗೀತಾ ೨.೧೭): "ಆ ಪ್ರಜ್ಞೆ ಯಾವುದು ಈ ದೇಹದಾದ್ಯಂತ ಹರಡಿದೆಯೋ, ಅದು ಶಾಶ್ವತ." ಅದು ಶಾಶ್ವತ." ಮತ್ತು ಅಂತವಂತ ಇಮೇ ದೇಹಾ ನಿತ್ಯಸ್ಯೋಕ್ತ ಶರೀರಿಣ(ಭ. ಗೀತಾ ೨.೧೮): "ಆದರೆ ಈ ದೇಹವು ಅಂತವತ್ ಆಗಿದೆ," ಎಂದರೆ ನಾಶವಾಗಬಹುದು. "ಈ ದೇಹವು ಹಾಳಾಗುತ್ತದೆ, ಆದರೆ ಆ ಪ್ರಜ್ಞೆಯು ನಶ್ವರವಾಗದು, ಶಾಶ್ವತವಾದದ್ದು." ಮತ್ತು ಆ ಪ್ರಜ್ಞೆ, ಅಥವಾ ಆತ್ಮವು ಒಂದು ದೇಹದಿಂದ ಮತ್ತೊಂದು ದೇಹಕ್ಕೆ ಸಾಗುತ್ತಿರುತ್ತದೆ. ನಾವು ಉಡುಗೆ ಬದಲಾಯಿಸುವ ಹಾಗೆ. "
|