"ಎಲ್ಲವೂ ದೇವರಿಗೆ ಸೇರಿದೆ ಎಂಬ ತತ್ವವನ್ನು ನಮಗೆ ಸೂಚಿಸುವ ಸಲುವಾಗಿ, ಇದು ಒಂದು ಆರಂಭ, ನಾವು ಏನನ್ನು ಪಡೆದಿದ್ದೇವೋ ಅವೆಲ್ಲವನ್ನು ಅರ್ಪಿಸಲು ನಾವು ಪ್ರಯತ್ನಿಸಬೇಕು. ಕೃಷ್ಣನು ನಿಮ್ಮಿಂದ ಸ್ವಲ್ಪೇ ಸ್ವಲ್ಪ ನೀರು, ಸ್ವಲ್ಪ ಹೂವು, ಸ್ವಲ್ಪ ಎಲೆ, ಅಥವಾ ಹಣ್ಣು ಸ್ವೀಕರಿಸಲು ಸಿದ್ಧ. ವಾಸ್ತವವಾಗಿ ಯಾವುದೇ ಮೌಲ್ಯವಿಲ್ಲ, ಆದರೆ ನೀವು ಕೃಷ್ಣನಿಗೆ ನೀಡಲು ಪ್ರಾರಂಭಿಸಿದಾಗ, ಕ್ರಮೇಣ ನೀವು ಗೋಪಿಗಳಂತೆ ಕೃಷ್ಣನಿಗೆ ಎಲ್ಲವನ್ನೂ ನೀಡಲು ಸಿದ್ಧರಾಗಿರುವ ಸಮಯ ಬರುತ್ತದೆ. ಇದು ಪ್ರಕ್ರಿಯೆ. ಸರ್ವಾತ್ಮನಾ. ಸರ್ವಾತ್ಮನಾ. ಸರ್ವಾತ್ಮನಾ ಎಂದರೆ ಎಲ್ಲದರೊಂದಿಗೆ ಅರ್ಥ. ಅದು ನಮ್ಮ ಸ್ವಾಭಾವಿಕ ಜೀವನ. ನಾವು ಈ ಪ್ರಜ್ಞೆಯಿಂದಿರುವಾಗ 'ಏನೂ ನನ್ನದಲ್ಲ. ಎಲ್ಲವೂ ದೇವರಿಗೆ ಸೇರಿದೆ, ಮತ್ತು ಎಲ್ಲವೂ ದೇವರ ಸಂತೋಷಕ್ಕಾಗಿ, ನನ್ನ ಪ್ರಜ್ಞೆಯ ಆನಂದಕ್ಕಾಗಿ ಅಲ್ಲ', ಇದನ್ನು ಕೃಷ್ಣ ಪ್ರಜ್ಞೆ ಎಂದು ಕರೆಯಲಾಗುತ್ತದೆ."
|